ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರಾಕ್ಷಿ ಬೆಳೆದು ಉತ್ತಮ ಆದಾಯ ನಿರೀಕ್ಷೆಯಲ್ಲಿ ರೈತ ಹಣಮಂತ

ನಿಂಗಾಪೂರ; ಮೊದಲ ಫಸಲಿಗೆ ₹1 ಲಕ್ಷ ಆದಾಯ
Last Updated 13 ಜನವರಿ 2023, 7:07 IST
ಅಕ್ಷರ ಗಾತ್ರ

ಕಕ್ಕೇರಾ: ಸಮೀಪದ ನಿಂಗಾಪೂರ ಗ್ರಾಮದ ಹೊರವಲಯದ ಗುಡ್ಡಗಾಡು ಪ್ರದೇಶದಲ್ಲಿ ಪ್ರಗತಿಪರ ಕೃಷಿಕ ಹಣಮಂತ ಲಿಂಗದಳ್ಳಿ
‌ದ್ರಾಕ್ಷಿ ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ.

’ಒಂದಿಡೀ ವರ್ಷ ವಿವಿಧೆಡೆ ತಿರುಗಾಡಿ ಬೆಳೆಯ ಕುರಿತು ಮಾಹಿತಿ ಪಡೆದು ವಿಜಯಪುರದಿಂದ ಸಸಿ ತರಿಸಿ ಬೆಳೆದಿದ್ದಾರೆ. ಈಗ ಮೊದಲ ಫಸಲು ಕೈಸೇರಿದ್ದು, ಮುಂದಿನ ಐದು ವರ್ಷಗಳಲ್ಲಿ ಮಾಡಿದ ₹18 ಲಕ್ಷ ಖರ್ಚೆಲ್ಲಾ ಕಳೆಯಲಿದೆ‘ ಎಂದು ಹಣಮಂತು ವಿಶ್ವಾಸದಿಂದ ವಿವರಿಸಿದರು.

ನೀರಿಲ್ಲದ ಗುಡ್ಡುಗಾಡಿನ 2 ಎಕರೆ ಪ್ರದೇಶದಲ್ಲಿ 16 ಸಾವಿರ ಸಸಿಗಳನ್ನು ನೆಟ್ಟು ಬೆಳೆ ತೆಗೆಯುವ
ಕನಸಲ್ಲಿದ್ದಾಗ, ಎಲ್ಲರೂ ಬೆಳೆ ಬೆಳೆಯುವುದಿಲ್ಲ ಎಂಬ ಭಾವನೆ ಹೊಂದಿದ್ದರು. ಕೊರೆದ 4 ಕೊಳವೆ ಬಾವಿಗಳಲ್ಲಿ ಒಂದರಲ್ಲಿ ಮಾತ್ರ ನೀರು ಸಿಕ್ಕಿತ್ತು. ಅದರಿಂದಲೇ ಹನಿ ನೀರಾವರಿ ಅಳವಡಿಸಿ, ಸಾವಯವ ಗೊಬ್ಬರ ಬಳಸಿ ಈಗ ಮೊದಲ ಫಸಲು ಪಡೆದಿದ್ದಾರೆ.

ಮೊದಲ ಫಸಲಿಗೆ ₹1 ಲಕ್ಷ ಆದಾಯ ಬಂದಿದ್ದೆ. ಆದರೆ, ಮುಂದಿನ 5 ವರ್ಷಗಳಲ್ಲಿ ಫಸಲು ಹೆಚ್ಚುವ ಜತೆ ನನ್ನೆಲ್ಲಾ ಖರ್ಚು ಕಳೆದು ಹಾಕಿದ ಹಣವೂ ಮರಳುತ್ತದೆ. ಚೆನ್ನಾಗಿ ನಿರ್ವಹಿಸಿದರೆ ಇದೇ ಸಸಿಗಳಿಂದ 30 ವರ್ಷಗಳವರೆಗೂ ಫಸಲು ಪಡೆಯಬಹುದು. ಆಗ ಲಾಭದ ಲೆಕ್ಕ ಮುಂದುವರಿಯುತ್ತದೆ ಎನ್ನುವುದು ಅವರ ವಿಶ್ವಾಸದ ನುಡಿ.

ಆಸಕ್ತರು ದ್ರಾಕ್ಷಿ ಬೆಳೆಯಲು ಪ್ರಾತ್ಯಕ್ಷಿಕೆ, ಸಲಹೆ, ಸೂಕ್ತ ನಿರ್ವಹಣೆಯ ಕುರಿತು ಮಾಹಿತಿಗಾಗಿ ಹಣಮಂತ ಲಿಂಗದಳ್ಳಿ (73376 59648) ಅವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT