ಮಂಗಳವಾರ, ಸೆಪ್ಟೆಂಬರ್ 21, 2021
26 °C

ಕಲ್ಲಂಗಡಿ ನಾಶ ಮಾಡಿದ ರೈತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಂಭಾವಿ: ಲಾಕ್‍ಡೌನ್ ಸಂದರ್ಭದಲ್ಲಿ ಬೆಳೆಗಳಿಗೆ ಕೊನೆಯ ಹಂತದಲ್ಲಿ ನೀರುಣೀಸಲಿಕ್ಕಾಗದೆ, ಸಕಾಲದಲ್ಲಿ ರಸಗೊಬ್ಬರ ನೀಡದಿದ್ದಕ್ಕಾಗಿ ಹಾಳಾಗುತ್ತವೆಂಬ ಆತಂಕ ಒಂದೆಡೆಡಯಾದರೆ ಬೆಳೆದು ಇನ್ನೇನು ಮಾರುಕಟ್ಟೆಯಲ್ಲಿ ಮಾರಾಟವಾಗಿ ಲಕ್ಷಾಂತರ ರೂಪಾಯಿಗಳ ಹಣ ಕೈಸೇರುತ್ತದೆ ಎನ್ನುವಾಗ ಖರೀದಿದಾರರಿಲ್ಲದೆ ಕಲ್ಲಂಗಡಿಯಂತಹ ತೋಟಗಾರಿಕೆ ಬೆಳೆಗಳು ಕೊಳೆಯತೊಡಗಿದ್ದು, ರೈತರ ಆತಂಕ ದ್ವಿಗುಣಗೊಳಿಸಿದೆ.

ಪಟ್ಟಣದ ಸಮೀಪ ಏವೂರ ಗ್ರಾಮದ ರೈತರು ನೂರಾರು ಎಕರೆಯಲ್ಲಿ ಬೆಳೆದ ಕಲ್ಲಂಗಡಿ ಹಣ್ಣು ಖರೀದಿದಾರರಿಲ್ಲದೆ ಹೊಲ್ಲದಲ್ಲಿಯೆ ಕೊಳೆಯುತ್ತಿದೆ. ಸರ್ಕಾರ ಈ ಕುರಿತು ಸ್ಪಷ್ಟ ನಿರ್ಧಾರ ಕೈಗೊಂಡು ರೈತರಿಂದಲೆ ನೇರವಾಗಿ ಬೆಳೆಗಳು ಖರೀದಿಸುವಂತಾಗಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂಬುದು ಎಲ್ಲ ರೈತರ ಆಶಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು