ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ವರಿತ ನ್ಯಾಯದಾನಕ್ಕೆ ವಕೀಲರ ಸಹಕಾರ ಅಗತ್ಯ

ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಸಿದ್ರಾಮ.ಟಿ ಅಭಿಮತ
Last Updated 24 ಮೇ 2022, 4:41 IST
ಅಕ್ಷರ ಗಾತ್ರ

ಶಹಾಪುರ: ‘ತ್ವರಿತ ನ್ಯಾಯ ದಾನಕ್ಕೆ ವಕೀಲರ ಸಹಕಾರ ಅಗತ್ಯ. ಕಾನೂನು ಸೇವಾ ಸಮಿತಿ, ರಾಜಿ ಸಂಧಾನ ಪ್ರಕರಣಗಳಲ್ಲಿ ವಕೀಲರು ಸಹಕಾರ ನೀಡಿದರೆ ಬಾಕಿ ಪ್ರಕರಣಗಳಿಗೆ ತ್ವರಿತವಾಗಿ ಮುಕ್ತಿ ನೀಡಬಹುದು’ ಎಂದು ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಸಿದ್ರಾಮ.ಟಿ ಅವರು ತಿಳಿಸಿದರು.

ಹಿರಿಯ ಶ್ರೇಣಿ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ಆಗಮಿಸಿದ ಕಾರಣ ವಕೀಲರ ಸಂಘದ ಕಚೇರಿಯಲ್ಲಿ ವಕೀಲರ ಸಂಘ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.

ಬಾರ್ ಮತ್ತು ಬೆಂಚ್ ಹೊಂದಾಣಿಕೆಯಿಂದ ಸಾಗಬೇಕು. ಕಾನೂನು ಅರಿವು–ನೆರವು ಕಾರ್ಯಕ್ರಮಕ್ಕೆ ಎಲ್ಲರೂ ಒಗ್ಗೂಡಿ ಶ್ರಮಿಸಬೇಕು. ಇಲ್ಲಿ ಉತ್ತಮ ವಕೀಲರ ಸಂಘವಿದೆ ಎಂದು ಕೇಳಿದ್ದೇನೆ. ಹಿಂದೆ ಸೇವೆ ಸಲ್ಲಿಸಿದ ನ್ಯಾಯಾಧೀಶರಿಗೆ ನೀಡಿದ ಸಹಕಾರವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ಕಿರಿಯ ಶ್ರೇಣಿ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ ಶೋಭಾ ಮಾತ ನಾಡಿ,‘ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರ ಹುದ್ದೆ ಖಾಲಿ ಇದೆ. ಇದರಿಂದ ಎರಡು ನ್ಯಾಯಾಲಯಗಳ ಪ್ರಕರಣಗಳ ಒತ್ತಡವಿದೆ. ವಕೀಲರು ನ್ಯಾಯದಾನಕ್ಕಾಗಿ ಸಹಕಾರ ನೀಡಬೇಕು’ ಎಂದರು.

ವಕೀಲರ ಸಂಘದ ನಿಯೋಜಿತ ಅಧ್ಯಕ್ಷ ಸಂತೋಷ ದೇಶಮುಖ, ಕಾರ್ಯದರ್ಶಿ ಮಲ್ಲಿಕಾರ್ಜುನ ಬುಕ್ಕಲ, ಸಹ ಕಾರ್ಯದರ್ಶಿ ಸಂಗಣ್ಣ ಗೋನಾಲ ಹಾಗೂ ಹಿರಿಯ ವಕೀಲರಾದ ಭಾಸ್ಕರರಾವ ಮುಡಬೂಳ, ಶ್ರೀನಿವಾಸರಾವ್ ಕುಲಕರ್ಣಿ, ಎಸ್.ಶೇಖರ್, ಸಯ್ಯದ್ ಇಬ್ರಾಹಿಂ ಸಾಬ್ ಜಮದಾರ, ಆರ್.ಎಂ.ಹೊನ್ನಾರಡ್ಡಿ, ಎಸ್.ಗೋಪಾಲ, ಶಾಂತಗೌಡ ಪಾಟೀಲ, ಮಲ್ಕಪ್ಪ ಪಾಟೀಲ, ಯೂಸೂಫ್ ಸಿದ್ದಕಿ, ಮಲ್ಲಪ್ಪ ರಾಂಪುರೆ, ಲಕ್ಷ್ಮಿನಾರಾಯಣ ಕುಲಕರ್ಣಿ, ವಿಶ್ವನಾಥ ಫಿರಂಗಿ, ಹಯ್ಯಾಳಪ್ಪ ಹೊಸ್ಮನಿ, ಭೀಮಣ್ಣಗೌಡ, ದೊಡ್ಡೇಶ ದರ್ಶನಾಪುರ ಹಾಗೂ ಸಂದೀಪ್ ದೇಸಾಯಿ ಅವರು ಈ ವೇಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT