ಕ್ಷುಲಕ ಕಾರಣಕ್ಕೆ ಫೈರಿಂಗ್: ಬಂಧನಕ್ಕೆ ತಂಡಕ್ಕೆ ರಚನೆ

ಮಂಗಳವಾರ, ಜೂಲೈ 23, 2019
25 °C
ಡಾಬಾದಲ್ಲಿ ನಾಲ್ವರು ಇದ್ದ ತಂಡದಿಂದ ಕೃತ್ಯ

ಕ್ಷುಲಕ ಕಾರಣಕ್ಕೆ ಫೈರಿಂಗ್: ಬಂಧನಕ್ಕೆ ತಂಡಕ್ಕೆ ರಚನೆ

Published:
Updated:

ಯಾದಗಿರಿ: ವಡಗೇರಾ ಕ್ರಾಸ್ ಬಳಿ ಭಾನುವಾರ ರಾತ್ರಿ ನಡೆದ ಡಾಬಾ ಗಲಾಟೆಗೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ಸಿಪಿಐ, ಪಿಎಸ್‌ಐ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.

ಭಾನುವಾರ ರಾತ್ರಿ ಡಾಬಾದಲ್ಲಿ ಊಟ ಮಾಡುವ ವೇಳೆ ಕ್ಷುಲಕ ವಿಚಾರಕ್ಕೆ ಗಲಾಟೆ ನಡೆದಿದ್ದು, ಈ ವೇಳೆ ವ್ಯಕ್ತಿಯೊಬ್ಬ ನಶೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಇದಾದ ನಂತರ  ಆತ ಪರಾರಿಯಾಗಿದ್ದು, ಫೈರಿಂಗ್ ಮಾಡಿದ ಆರೋಪಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ಡಾಬಾದಲ್ಲಿ ಊಟ ಮಾಡುವ ವೇಳೆ ನಾಲ್ವರು ವ್ಯಕ್ತಿಗಳು ಮಾಜಿ ಶಾಸಕ ಮತ್ತು ನಗರಸಭೆ ಮಾಜಿ ಅಧ್ಯಕ್ಷರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರು. ಪಕ್ಕದಲ್ಲಿ ಇದ್ದ ಇನ್ನೊಂದು ಗುಂಪು ಆ ರೀತಿ ಮಾತನಾಡಬೇಡಿ ಎಂದಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ತನ್ನಲ್ಲಿದ್ದ ಪಿಸ್ತೂಲಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ.

ವಿಷಯ ತಿಳಿದ ವಡಗೇರಾ ಪೊಲೀಸರು ಸ್ಥಳಕ್ಕೆ ಬಂದು ಆರೋಪಿ ಹಾರಿಸಿದ್ದ ಗುಂಡನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !