ಸೋಮವಾರ, ಜುಲೈ 26, 2021
22 °C

ಸುರಪುರ: ಅರ್ಚಕರಿಗೆ ದಿನಸಿ ಕಿಟ್ ವಿತರಣೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ‘ಕೋವಿಡ್‌ ಕಾಲದಲ್ಲಿ ದೇವಸ್ಥಾನಗಳನ್ನು ಮುಚ್ಚಿಸಿದ್ದರಿಂದ ಅರ್ಚಕರಿಗೂ ಸಮಸ್ಯೆಯಾಗಿತ್ತು. ಸರ್ಕಾರ ಅರ್ಚಕರಿಗೆ ದಿನಸಿ ಕಿಟ್ ವಿತರಿಸಿದೆ. ಇದು ಸ್ವಾಗತಾರ್ಹ ಕ್ರಮ’ ಎಂದು ಶಾಸಕ ರಾಜೂಗೌಡ ಹೇಳಿದರು.

ಸೋಮವಾರ ಧಾರ್ಮಿಕ ದತ್ತಿ ಇಲಾಖೆ ಮತ್ತು ತಾಲ್ಲೂಕು ಆಡಳಿತದಿಂದ ಸಿ ಪ್ರವರ್ಗದ ಅಧಿಸೂಚಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದೇವಸ್ಥಾನದ ಅರ್ಚಕರಿಗೆ ನೀಡುತ್ತಿರುವ ಆಹಾರ ಧಾನ್ಯಗಳ ಕಿಟ್ ವಿತರಿಸಿ ಅವರು ಮಾತನಾಡಿದರು.

100 ಅರ್ಚಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದ ಅವರು, ‘10 ಕೆಜಿ ಅಕ್ಕಿ, ತಲಾ 2 ಕೆಜಿ ತೊಗರಿ ಬೆಳೆ, ಸಕ್ಕರೆ, ಬೆಲ್ಲ, 1 ಲೀಟರ್ ಅಡುಗೆಎಣ್ಣಿ, ರವಾ, ಕಡ್ಲಿ ಹಿಟ್ಟು, ಅವಲಕ್ಕಿ, 1/2 ಕೆಜಿ ಬೆಳೊಳ್ಳಿ, ಒಣ ಮೆಣಸಿನಕಾಯಿ, ಶೇಂಗಾ ಪ್ರತಿ ಕಿಟ್ ಒಳಗೊಂಡಿದೆ’ ಎಂದರು.

ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಜಿ.ಪಂ. ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ (ತಾತಾ), ಕಕ್ಕೇರಾ ಉಪ ತಹಶೀಲ್ದಾರ್ ರೇವಪ್ಪ ತೆಗ್ಗಿನಮನಿ, ಶಿರಸ್ತೇದಾರ್ ಸೋಮನಾಥ ಅಂಗಡಿ, ಕೊಂಡಲನಾಯಕ, ವಿನೋದ, ಶಿವಾನಂದ ಮಠ, ಕಂದಾಯ ನಿರೀಕ್ಷರಾದ ಗುರುಬಸಪ್ಪ ಪಾಟೀಲ್, ವಿಠ್ಠಲ್ ಬಂದಾಳ, ಕಂದಾಯ ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.