ಹುಣಸಗಿ: ಪಟ್ಟಣದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಬಳಿ ಹಿಂದೂ ಮುಸ್ಲಿಂ ಗೆಳೆಯರ ಬಳಗದಿಂದ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ.
‘ಪಟ್ಟಣದಲ್ಲಿ ಸಾಮರಸ್ಯ ಮೆರೆಯುವ ನಿಟ್ಟಿನಲ್ಲಿ ಇಲ್ಲಿನ ಯುವಕರು ಮುಂದಾಗಿದ್ದು, ಶನಿವಾರ ಮೆರವಣಿಗೆಯೊಂದಿಗೆ ಅಲಂಕೃತ ವಾಹನದಲ್ಲಿ ಗಣೇಶನನ್ನು ತಂದು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗಿದೆ’ ಎಂದು ಬಳಗದ ಸದ್ದಾಂಹುಸೇನ ಹಾಗೂ ಅರುಣ ದೊರಿ ತಿಳಿಸಿದರು.
ಹುಣಸಗಿ ಪಟ್ಟಣದಲ್ಲಿ ಎಸ್‌ಸಿ ವಾರ್ಡ್‌ನಲ್ಲಿ ಸ್ನೇಹ ಜೀವಿ ಗೆಳೆಯರಿಂದ ಗಣೇಶನನ್ನು ಪ್ರತಿಷ್ಠಾಪಿಸಿರುವದು. ಸಿದ್ದು ಕಟ್ಟಿಮನಿ ಆಂಜನೇಯ ಕಟ್ಟಿಮನಿ ಮಂಜುನಾಥ ಪ್ರಮೋದ್ ಕಟ್ಟಿಮನಿ ಚೇತನ ಅಂಬ್ರೆಷ್ ಭರತ್ ಸೇರಿದಂತೆ ಇತರರು ಹಾಜರಿದ್ದರು
ಈ ಹಿಂದಿನಿಂದಲೂ ಹುಣಸಗಿಯಲ್ಲಿ ಸೌಹಾರ್ದಯುತವಾಗಿ ಹಿಂದೂ ಮುಸ್ಲಿಂರು ಒಟ್ಟಾಗಿ ಗಣೇಶನ್ನು ಪ್ರತಿಷ್ಠಾಪಿಸುತ್ತಿದ್ದಾರೆ. ನಿತ್ಯವೂ ನಮ್ಮ ವಾರ್ಡ್ ಮನೆಗಳಿಂದ ನೈವೇದ್ಯ ತಂದು ಕೊಡುತ್ತಾರೆ. ಐದನೇ ದಿನ ವಿಸರ್ಜನೆ ಮಾಡುವದಾಗಿ ಪರಸು ಪೂಜಾರಿ ಹಾಗೂ ಬಿಜನಸಾಬ ಟೊಣ್ಣೂರ ತಿಳಿಸಿದರು.
ಪೂಜೆ ವೇಳೆ ಕಾಶೀಂ ಸಾಬ ಟೊಣ್ನೂರ, ನಿಂಗು, ಪ್ರಕಾಶ, ಬಸವರಾಜ ಇತರರು ಹಾಜರಿದ್ದರು.