ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ: ಶಿಕ್ಷಕ ರಾಚಯ್ಯ ಸ್ವಾಮಿ ಸಲಹೆ

Last Updated 29 ನವೆಂಬರ್ 2021, 14:33 IST
ಅಕ್ಷರ ಗಾತ್ರ

ಸೈದಾಪುರ: ಬೆಳೆಯುತ್ತಿರುವ ಮಕ್ಕಳಿಗೆ ಕೆಲವು ಪೋಷಕಾಂಶಗಳು ಅನಿವಾರ್ಯ ಎಂದು ವಿದ್ಯಾವರ್ಧಕ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ರಾಚಯ್ಯ ಸ್ವಾಮಿ ತಿಳಿಸಿದರು.

ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಫಿಟ್ ಇಂಡಿಯಾ ಶಾಲಾ ಸಪ್ತಾಹ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಲ್ಲಿ ಪೋಷಕಾಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಕುಪೋಷಣೆಗೆ ಮಕ್ಕಳು ಒಳಗಾಗದಂತೆ ತಡೆಯಲು ಮಕ್ಕಳ ಆಹಾರದ ಮೂಲಕ ಅಗತ್ಯ ಪೋಷಕಾಂಶಗಳನ್ನು ನೀಡಬೇಕು. ಸರಿಯಾದ ಪ್ರಮಾಣದ ವಿಟಮಿನ್‍ಗಳು ಹಾಗೂ ಖನಿಜಾಂಶಗಳು ಮಕ್ಕಳ ಹಲ್ಲು, ಮೂಳೆ ಬಲಪಡಿ ಸರಿಯಾಗಿ ಬೆಳೆಯಲು ನೆರವಾಗುವುದು.ಕ್ಯಾಲ್ಸಿಯಂ, ನಾರಿನಾಂಶ, ಕಬ್ಬಿನಾಂಶ, ವಿಟಮಿನ್ ಸಿ, ಡಿ ಹೊಂದಿರುವ ಆಹಾರವನ್ನು ಅಗತ್ಯವಾಗಿ ನೀಡಬೇಕು ಎಂದರು.

ನಾರಿನಾಂಶವುಳ್ಳ ಆಹಾರ ಮಕ್ಕಳ ಜೀರ್ಣಕ್ರಿಯೆಗೆ ಸಹಕಾರಿ. ರಕ್ತಹೀನತೆ ತಡೆಯಲು ಕಬ್ಬಿನಾಂಶವಿರುವ ಧಾನ್ಯಗಳು,ಬೀಜಗಳು, ಹಸಿರು ತರಕಾರಿಗಳ ಸೇವನೆ ಮಾಡಿಸಬೇಕು. ಪಾಲಕರು ತಮ್ಮ ಮಕ್ಕಳಿಗೆ ಅಗತ್ಯ ಪೋಷಕಾಂಶಗಳಿರುವ ಆಹಾರ ಪದಾರ್ಥಗಳನ್ನು ನೀಡಬೇಕು ಎಂದರು.

ಮುಖ್ಯಶಿಕ್ಷಕ ಶಿವರಾಜಪ್ಪ, ಎಸ್‍ಡಿಎಂಸಿ ಅಧ್ಯಕ್ಷ ಬಸವರಾಜ ನಾಯಕ, ಶಿಕ್ಷಕರಾದ ಮಹಿಪಾಲರೆಡ್ಡಿ, ಸಿದ್ರಾಮ ತೊಗಟವೀರ, ರತ್ನಕ್ಕ, ಶಿವಕಾಂತಮ್ಮ ಹಾಗೂ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT