ಶನಿವಾರ, ಸೆಪ್ಟೆಂಬರ್ 25, 2021
24 °C

ಮತ್ತು ಬರುವ ಔಷಧಿ ನೀಡಿ ಚಿನ್ನ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಕ್ಕೇರಾ: ಪಟ್ಟಣದ ಸಂತೆಗೆ ಬಂದಿದ್ದ ವೃದ್ಧೆಯರ ಸ್ನೇಹ ಬೆಳಸಿದ ಕಳ್ಳರು ‘ಮತ್ತು’ ಬರಿಸುವ ಔಷಧಿ ನೀಡಿ ಅವರ ಕೈಯಲ್ಲಿ ನಕಲಿ ಚಿನ್ನಾಭರಣವಿಟ್ಟು ಅಸಲಿ ಬಂಗಾರ ದೋಚಿ ಪರಾರಿಯಾದ ಘಟನೆ ಬುಧವಾರ ನಡೆದಿದೆ.

ಭೀಮವ್ವ ಹೆಳವರ್ ಮತ್ತು ದ್ಯಾಮವ್ವ ಪೂಲಭಾವಿ ಎಂಬುವವರು ಕಳ್ಳರ ಮಾತಿಗೆ ಮರುಳಾಗಿ ಒಂದು ತೊಲಿ ಬಂಗಾರ ಕಳೆದುಕೊಂಡರು.

ಕೂಡಲೇ ಈ ಬಗ್ಗೆ ಸ್ಥಳೀಯರು ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಧ್ವನಿವರ್ಧಕ ಮೂಲಕ ಪೊಲೀಸರು ಕಳ್ಳರ ಬಗ್ಗೆ ಜಾಗೃತಿ ಮೂಡಿಸಿದರು.

ಹಳೆಯ ಚಿನ್ನಾಭರಣ ತೊಳೆದುಕೊಡುವುದಾಗಿ ಹೇಳಿ ನಕಲಿ ಬಂಗಾರ ನೀಡಿ ಮೋಸಗೊಳಿಸುವ ಯತ್ನ ಕಂಡುಬಂದರೆ ಸ್ಥಳೀಯ ಉಪಠಾಣೆ 9740883772 ಹಾಗೂ ಕೊಡೇಕಲ್ ಠಾಣೆಯ 9480803584 ಸಂಖ್ಯೆಗೆ ಕರೆ ಮಾಡುವಂತೆ ಕೊಡೇಕಲ್ ಪಿಎಸ್ಐ ಬಾಷುಮಿಯಾ ಕೆಂಚೂರ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.