ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಸರ್ಕಾರಿ ಶಾಲೆಗಳಿಗೆ ಉತ್ತಮ ಫಲಿತಾಂಶ

ಶೇ 80 ಕ್ಕಿಂತ ಹೆಚ್ಚು ಪ್ರತಿಶತ ದಾಖಲಿಸಿದ 26 ಸರ್ಕಾರಿ ಶಾಲೆಗಳು
Last Updated 20 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಯಾದಗಿರಿ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಗಳು ಉತ್ತಮ ಫಲಿತಾಂಶ ಪಡೆದಿವೆ. ಆದರೆ, ಶೇಕಡವಾರು ಫಲಿತಾಂಶದಲ್ಲಿ ಯಾವುದೇ ಹೆಚ್ಚಳವಾಗಿಲ್ಲ.

ಜಿಲ್ಲೆಯಲ್ಲಿ225 ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢ ಶಾಲೆಗಳಿವೆ. ಅವುಗಳಲ್ಲಿ ಸರ್ಕಾರಿ ಶಾಲೆಗಳೇ ಉತ್ತಮಫಲಿತಾಂಶದಾಖಲಿಸಿವೆ.

ಶಹಾಪುರ ತಾಲ್ಲೂಕಿನಲ್ಲಿ 38, ಸುರಪುರ ತಾಲ್ಲೂಕಿನಲ್ಲಿ 45, ಯಾದಗಿರಿ ತಾಲ್ಲೂಕಿನಲ್ಲಿ 39 ಸರ್ಕಾರಿ ಶಾಲೆಗಳಿವೆ. ಒಟ್ಟು 122 ಸರ್ಕಾರಿ ಶಾಲೆಗಳಿದ್ದು, ಅನುದಾನ ಸಹಿತ 17 ಶಾಲೆಗಳು, 86 ಅನುದಾನ ರಹಿತ ಶಾಲೆಗಳಿವೆ.

ಶೇ 80 ಕ್ಕಿಂತ ಹೆಚ್ಚು 26 ಸರ್ಕಾರಿ ಶಾಲೆಗಳುಫಲಿತಾಂಶದಾಖಲಿಸಿವೆ.1 ಅನುದಾನಿತ, 20 ಅನುದಾನ ರಹಿತ ಶಾಲೆಗಳು ಸಾಧನೆ ಮಾಡಿವೆ.ಶೇ 60ರಿಂದ 80ರಷ್ಟು ಸಾಧನೆ ಮಾಡಿದ ಸರ್ಕಾರಿ ಶಾಲೆಗಳು 33, ಅನುದಾನ ಸಹಿತ ಶಾಲೆಗಳು 5, ಅನುದಾನ ರಹಿತ 26 ಶಾಲೆಗಳು ಪ್ರತಿಶತ ದಾಖಲಿಸಿವೆ. ಶೇ 40ರಿಂದ 60ರೊಳಗೆ ಪ್ರತಿಶತ ದಾಖಲಿಸಿದ ಶಾಲೆಗಳು ಸರ್ಕಾರಿ ಶಾಲೆಗಳು 48, ಅನುದಾನ ಸಹಿತ ಶಾಲೆಗಳು 2, ಅನುದಾನ ರಹಿತ 16 ಶಾಲೆಗಳು ಫಲಿತಾಂಶ ಪಡೆದಿವೆ.

ಶೇ 1ರಿಂದ 40ರಷ್ಟು ಫಲಿತಾಂಶ ಪಡೆದ ಶಾಲೆಗಳು: ಸರ್ಕಾರಿ ಶಾಲೆಗಳು 30, ಅನುದಾನ ಸಹಿತ 3 ಶಾಲೆಗಳು, ಅನುದಾನ ರಹಿತ 12 ಶಾಲೆಗಳು ಫಲಿತಾಂಶ ಪಡೆದಿವೆ.

ಖಾಸಗಿ ವಿದ್ಯಾರ್ಥಿಗಳ ಕಳಪೆ ಸಾಧನೆ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಖಾಸಗಿ ವಿದ್ಯಾರ್ಥಿಗಳು ಕಳಪೆ ಸಾಧನೆ ಮಾಡಿದ್ದಾರೆ. 357 ಬಾಲಕರು,90 ಬಾಲಕಿಯರು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು.447 ಬಾಲಕ, ಬಾಲಕಿಯರಲ್ಲಿ ನಾಲ್ಕು ಜನ ಪಾಸಾಗಿದ್ದಾರೆ. ಇದರಲ್ಲಿ3 ಬಾಲಕರು, 1 ಬಾಲಕಿ ಉತ್ತೀರ್ಣರಾಗಿದ್ದಾರೆ. ಇದರಿಂದ ಶೇ 0.89 ರಷ್ಟು ಫಲಿತಾಂಶ ಬಂದಿದೆ.

ಖಾಸಗಿ ಪುನರಾವರ್ತಿತ182 ವಿದ್ಯಾರ್ಥಿಗಳಲ್ಲಿ ಕೇವಲ 14 ವಿದ್ಯಾರ್ಥಿಗಳು ಪಾಸಾಗಿದ್ದಾರೆ.139 ಬಾಲಕರು,43 ಬಾಲಕಿಯರು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು.11 ಬಾಲಕರು, 3 ಬಾಲಕಿಯರು ಮಾತ್ರ ತೇರ್ಗಡೆ ಹೊಂದಿದ್ದಾರೆ.

ಮೂರು ಶಾಲೆಗಳ ಸಾಧನೆ ಶೂನ್ಯ

ಅನುದಾನ ರಹಿತ ಮೂರು ಶಾಲೆಗಳು ಈ ಬಾರಿ ಸೊನ್ನೆ ಸಾಧನೆ ಮಾಡಿವೆ.ಶಹಾಪುರ ತಾಲ್ಲೂಕಿನ ಎರಡು, ಯಾದಗಿರಿ ತಾಲ್ಲೂಕಿನ ಒಂದು ಶಾಲೆ ಶೂನ್ಯ ಸಾಧನೆ ಮಾಡಿದೆ. ಶಹಾಪುರದ ಕನ್ಯೆಕೊಳ್ಳೂರ ಬಾಬು ಜಗಜೀವನರಾಂ ಪ್ರೌಢ ಶಾಲೆ, ಶಿವ ಮಲ್ಲೇಶ್ವರ ಪ್ರೌಢಶಾಲೆ, ಯಾದಗಿರಿಯ ಹುಲಗಪ್ಪ ಕನ್ಯಾ ಪ್ರೌಢಶಾಲೆಗಳಿಗೆ ಸೊನ್ನೆ ಫಲಿತಾಂಶ ಬಂದಿದೆ.

ಬಾಬು ಜಗಜೀವನರಾಂಶಾಲೆಯ 28 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಶಿವಮಲ್ಲೇಶ್ವರ ಶಾಲೆಯ 10 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಹುಲಗಪ್ಪ ಪ್ರೌಢಶಾಲೆಯ 5ಕ್ಕೆ 5 ವಿದ್ಯಾರ್ಥಿಗಳು ಫೇಲಾಗಿದ್ದಾರೆ. ಸತತ 5 ವರ್ಷ ಶೂನ್ಯ ಸಾಧನೆ ಮಾಡಿದ ಶಾಲೆಗಳಿಗೆ ನೋಟಿಸ್‌ ನೀಡಿ ಶಾಲೆ ಯಾಕೆ ಮುಚ್ಚಬಾರದು ಎಂದು ಕೇಳುತ್ತೇವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

***

ಈ ಬಾರಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ. ಅಲ್ಲದೆ ಜಿಲ್ಲೆಗೆ ಟಾಪರ್ ಸ್ಥಾನ ಹೊಂದಿದ್ದಾರೆ
– ಶ್ರೀನಿವಾಸ ರೆಡ್ಡಿ, ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ ಯಾದಗಿರಿ

***

ನಗರದ ಸರ್ಕಾರಿ ಸ್ಟೇಷನ್ ಬಜಾರ್‌ ಪ್ರೌಢ ಶಾಲೆ ವಿದ್ಯಾರ್ಥಿಗಳು ಯಾದಗಿರಿ ತಾಲ್ಲೂಕಿನಲ್ಲಿಯೇ ಉತ್ತಮ ಫಲಿತಾಂಶ ಪಡೆದಿದ್ದಾರೆ
– ಬಸಪ್ಪ ಜಿ.ವಿ.,ಮುಖ್ಯಶಿಕ್ಷಕ, ಸ್ಟೇಷನ್ ಬಜಾರ್‌ ಶಾಲೆ ಯಾದಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT