ಗುರುವಾರ , ಡಿಸೆಂಬರ್ 5, 2019
22 °C
ತಡೆಗೋಡೆ ನಾಶ, ಅಂಗಡಿಗೆ ಧಕ್ಕೆ

ಪ್ಲಾಟ್‌ಫಾರ್ಮ್‌ಗೇ ನುಗ್ಗಿದ ರೈಲು: ಆತಂಕದಿಂದ ಓಡಿದ ಪ್ರಯಾಣಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ರಸಗೊಬ್ಬರ ತುಂಬಿದ ಗೂಡ್ಸ್ ರೈಲು ಹಿಂದಕ್ಕೆ ತೆಗೆದುಕೊಳ್ಳುವ ವೇಳೆ ನಿಲ್ದಾಣದ ಒಳಗೆ ನುಗ್ಗಿದ ಘಟನೆ ಬುಧವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಇಲ್ಲಿ ನಡೆದಿದೆ.

ರಸಗೊಬ್ಬರ ಖಾಲಿ ಮಾಡುವಾಗ ಚಾಲಕ ರೈಲುಗಾಡಿಯನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ. ಆದರೆ, ರೈಲು ಹೆಚ್ಚು ಭಾರ ಹೊತ್ತಿದ್ದರಿಂದ ಹಿಂದಕ್ಕೆ ತೆಗೆದುಕೊಳ್ಳುವ ಸಮಯದಲ್ಲಿ ನಿಯಂತ್ರಣ ಸಾಧ್ಯವಾಗಿಲ್ಲ. ಹೀಗಾಗಿ ನಿಲ್ದಾಣದ ತಡೆಗೋಡೆಗೆ ಗುದ್ದಿದೆ. ಪರಿಣಾಮ ಗೋಡೆ ನಾಶವಾಗಿದ್ದು, ನಿಲ್ದಾಣದ ಒಳಗಡೆ ಇರುವ ಜನರಲ್ ಸ್ಟೋರ್ ಅಂಗಡಿಗೆ ಧಕ್ಕೆಯಾಗಿದೆ.

ರೈಲು ಗೋಡೆಗೆ ಗುದ್ದಿದ ಸದ್ದಿಗೆ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಗಾಬರಿಯಾಗಿ ಓಡಿದರು. ಸ್ಥಳದಲ್ಲಿದ್ದ ಸಿಆರ್‌ಪಿಎಫ್‌ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.

‘ಯಾವುದೇ ಅವಘಡ ಸಂಭವಿಸಿಲ್ಲ. ರಸಗೊಬ್ಬರ ಖಾಲಿ ಮಾಡಿದ ನಂತರ ಬೋಗಿಯನ್ನು ತೆರವುಗೊಳಿಸಲಾಗುವುದು’ ಎಂದು ನಿಲ್ದಾಣದ ವ್ಯವಸ್ಥಾಪಕ ಅಮೃತಲಾಲ್ ಮೀನಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು