ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಯೋಜನೆ, ಸದುಪಯೋಗ ಪಡಿದುಕೊಳ್ಳಿ

Last Updated 22 ಫೆಬ್ರುವರಿ 2020, 10:32 IST
ಅಕ್ಷರ ಗಾತ್ರ

ಯಾದಗಿರಿ: ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು. ಸರ್ಕಾರ ಸದಾ ಸಂಕಷ್ಟಕ್ಕೆ ಸಿಲುಕಿದ ರೈತರ ಪರವಾಗಿ ಕೆಲಸ ಮಾಡುತ್ತಿದ್ದು, ಖರೀದಿಯ ಮೂಲಕ ತೊಗರಿ ಬೆಳೆಗಾರ ರೈತರ ನೆರವಿಗೆ ಬಂದಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶರಣಗೌಡ ಕಾಳೆಬೆಳಗುಂದಿ ಹೇಳಿದರು.

ತಾಲ್ಲೂಕಿನ ರಾಮಸಮುದ್ರ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತೊಗರಿ ಖರೀದಿ ಕೇಂದ್ರ ಉದ್ಘಾಟಿಸಿ, ಅವರು ಮಾತನಾಡಿದರು.

ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕರೂ ಹಾಗೂ ಎಪಿಎಂಸಿ ಕಾರ್ಯದರ್ಶಿ ಭೀಮರಾಯ ಮಾತನಾಡಿ, ಗ್ರಾಮೀಣ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಖರೀದಿ ಕೇಂದ್ರವನ್ನು ರಾಮಸಮುದ್ರದಲ್ಲಿ ತೆರೆಯಲಾಗಿದೆ. ರೈತರು ಸದುಪಯೋಗಪಡಿಸಿಕೊಳ್ಳುವಂತೆ ಕೋರಿದರು.

ಈ ವೇಳೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಮರೆಮ್ಮ, ಎಪಿಎಂಸಿ ಸದಸ್ಯ ಭೀಮರೆಡ್ಡಿಗೌಡ ಮುದ್ನಾಳ, ವಿಶ್ವಗಂಗು ಟ್ರಸ್ಟ್ ಅಧ್ಯಕ್ಷ ಆರ್.ವಿಶ್ವನಾಥರೆಡ್ಡಿ ಅಬ್ಬೆತುಮಕೂರು, ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ವಿಶ್ವನಾಥಗೌಡ ಸುರಪುರ, ಬಸವರಾಜಪ್ಪ ಬಾಗ್ಲಿ, ಮಹಾದೇವಪ್ಪ ಜಲ್ಲಪ್ಪನೋರ, ಭೀಮರಾಯ ದಂಡನೋರ, ವಿಶ್ವನಾಥ ರಾಮಸಮುದ್ರ, ಗ್ರಾಮ ಪಂಚಾಯಿತಿ ಸದಸ್ಯ ಭೀಮರಾಯ ಕೋಳಿ, ಮಲ್ಲಿಕಾರ್ಜುನ ಆಶನಾಳ, ಬಸಲಿಂಗಪ್ಪ, ಚಂದ್ರಯ್ಯ ಗುತ್ತೇದಾರ,ಬಂಗಾರೆಪ್ಪ ಅರಕೇರಾ ಕೆ., ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT