ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಚಾಲಕರಿಗೆ ದಿನಸಿ ಕಿಟ್‌ ವಿತರಣೆ

ಕಷ್ಟದಲ್ಲಿರುವವರಿಗೆ ಸ್ಪಂದಿಸುವುದು ಮಾನವೀಯತೆ: ಡಾ. ಮಾಲಕರೆಡ್ಡಿ
Last Updated 10 ಜೂನ್ 2021, 17:45 IST
ಅಕ್ಷರ ಗಾತ್ರ

ಯಾದಗಿರಿ: ‘ಕಷ್ಟದಲ್ಲಿದ್ದವರಿಗೆ ಮಾನವೀಯ ದೃಷ್ಟಿಯಿಂದ ಸಹಾಯ ಮಾಡಬೇಕು‘ ಎಂದು ಮಾಜಿ ಸಚಿವ ಡಾ.ಎ.ಬಿ. ಮಾಲಕರೆಡ್ಡಿ ಹೇಳಿದರು.

ನಗರದ ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಚಂದ್ರಶೇಖರಗೌಡ ಮಾಗನೂರ ಅವರ ಜನಸಂಪರ್ಕ ಕಚೇರಿಯಲ್ಲಿ 100ಕ್ಕೂ ಹೆಚ್ಚೂ ಆಟೊ ಚಾಲಕರಿಗೆ ಆಹಾರ ಕಿಟ್‍ಗಳನ್ನು ವಿತರಿಸಿ ಮಾತನಾಡಿದರು.

‘ಕ್ಷೇತ್ರದಲ್ಲಿ ಮಾಗನೂರ ಸ್ನೇಹಿತರ ತಂಡ ಯೋಜನಾ ಬದ್ಧವಾಗಿ ಅರ್ಹ ಬಡ ಕುಟುಂಬಗಳಿಗೆ ಸಹಾಯ ನೀಡುತ್ತಿರುವುದು ಇತರರಿಗೆ ಮಾದರಿಯಾಗಲಿ‘ ಎಂದರು.
ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಚಂದ್ರಶೇಖರಗೌಡ ಮಾಗನೂರ ಮಾತನಾಡಿ, ‘ಕ್ಷೇತ್ರದಲ್ಲಿ ಈಗಾಗಲೇ ಜನರಿಗೆ ಮಾಸ್ಕ್‌, ಸ್ಯಾನಿಟೈಸರ್ ನೀಡುವ ಜೊತೆಗೆ ಸೋಂಕು ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಿದ್ದೇವೆ. ಅಲ್ಲದೇ ಸೋಂಕಿತರಿಗೆ ಸಕಾಲಕ್ಕೆ ಚಿಕಿತ್ಸೆ ಕೊಡಿಸಲು ಯತ್ನಿಸಿದ್ದೇವೆ. ಮುಂದಿನದಿನಗಳಲ್ಲಿ ಎಲ್ಲಾ ವರ್ಗದ ಬಡ ಕುಟುಂಬಗಳಿಗೆ10 ಸಾವಿರ ದಿನಸಿ ಕಿಟ್‍ಗಳನ್ನು ನೀಡುತ್ತೇವೆ‘ ಎಂದು ತಿಳಿಸಿದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲರೆಡ್ಡಿ ನಾಯ್ಕಲ್, ಜಿಲ್ಲಾ ಉಪಾಧ್ಯಕ್ಷ ಚನ್ನಾರಡ್ಡಿಗೌಡ ಬಿಳ್ಹಾರ, ಡಾ. ಸುಭಾಷ ಕರಣಗಿ, ರವಿ ಮಾಲಿಪಾಟೀಲ, ಎಪಿಎಂಸಿ ಅಧ್ಯಕ್ಷ ಭೀಮರಡ್ಡಿ ಮುದ್ನಾಳ, ರಮಾದೇವಿ, ಅಯ್ಯಣ ಠಾಣಗುಂದಿ, ಸೂಗುರೇಶ ಮಾಲಿಪಾಟೀಲ, ಶಿವರಾಜ ದಾಸನಕೇರಿ, ಪ್ರವೀಣ ಮೋದಿ, ಆಟೊ ಚಾಲಕ ಸಂಘದ ಮುಖಂಡ ಮಲ್ಲಿಕಾರ್ಜುನ ಸಾಂಗ್ಲಿಯಾನ ಇದ್ದರು.

***

ಆಟೊ ಚಾಲಕರಿಗೆ ಕಳೆದ ಒಂದೂವರೆ ತಿಂಗಳಿಂದ ದುಡಿಮೆ ಇಲ್ಲದಿದ್ದರಿಂದ ಅವರಿಗೆ ನೆರವಿಗೆ ಧಾವಿಸಿ ಆಹಾರ ಕಿಟ್‌ ನೀಡಿದ್ದೇವೆ
ಚಂದ್ರಶೇಖರಗೌಡ ಮಾಗನೂರ, ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT