ಸೈದಾಪುರ(ಯಲಸತ್ತಿ ತಾಂಡಾ): ‘ಗುರಮಠಕಲ್ ಕ್ಷೇತ್ರದ ಗ್ರಾಮೀಣ ಭಾಗದಲ್ಲಿನ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ರಾಜ್ಯ ಸರ್ಕಾರ ಪ್ರಗತಿ ಪಥ ಯೋಜನೆಯಡಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳುತ್ತಿದ್ದು, ಅದು ಪ್ರಗತಿ ಪಥವಲ್ಲ, ನಿಧಾನಪಥ ಯೋಜನೆಯಾಗಿದೆ’ ಎಂದು ಶಾಸಕ ಶರಣಗೌಡ ಕಂದಕೂರ ವ್ಯಂಗ್ಯವಾಡಿದರು.

ಸಮೀಪದ ಯಲಸತ್ತಿ ತಾಂಡಾದಲ್ಲಿ 2025-26ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಯೋಜನೆಯಡಿ ₹1 ಕೋಟಿ ವೆಚ್ಛದಲ್ಲಿ ಸಿಸಿ ರಸ್ತೆ ನಿರ್ಮಾಣ, ಯಲಸತ್ತಿ ಗ್ರಾಮದಲ್ಲಿ ₹20 ಲಕ್ಷ ವೆಚ್ಚದಲ್ಲಿ ಡಾ.ಬಾಬು ಜಗಜೀವನರಾಂ ಭವನ ನಿರ್ಮಾಣ, ಕಾಳೆಬೆಳಗುಂದಿ ಗ್ರಾಮದಲ್ಲಿ ₹30 ಲಕ್ಷ ವೆಚ್ಚದಲ್ಲಿ ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣ ಹಾಗೂ ಬಾಡಿಯಾಳ ಗ್ರಾಮದಲ್ಲಿ ₹25 ಲಕ್ಷ ವೆಚ್ಚದಲ್ಲಿ ಮಾರೆಮ್ಮ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಗ್ರಾಮೀಣ ಭಾಗದಲ್ಲಿ ಜನತೆ ಶುದ್ಧ ನೀರು, ರಸ್ತೆ, ಮನೆಗಳನ್ನು ಕೇಳುತ್ತಿದ್ದಾರೆ. ಆದರೆ, ಈ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಒಂದೇ ಒಂದು ಬೋರವೆಲ್ ಕೊರೆಸಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ನಯಾ ಪೈಸೆ ಅನುದಾನ ಬಿಡುಗಡೆ ಮಾಡಿಲ್ಲ. ನಾನು ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಪ್ರವಾಸಕ್ಕೆ ಹೋದಾಗ ಜನತೆ ಶುದ್ಧ ಕುಡಿಯುವ ನೀರು, ಜಮೀನುಗಳಿಗೆ ತೆರಳಲು ರಸ್ತೆ ಕೇಳುತ್ತಾರೆ. ಗುರಮಠಕಲ್ ಕ್ಷೇತ್ರದಿಂದಲೇ ರಾಜಕೀಯ ಜೀವನ ಆರಂಭಿಸಿ ಇಂದು ದೆಹಲಿಯಲ್ಲಿ ರಾಜಕಾರಣ ಮಾಡುತ್ತಿರುವರು ಮಾತನಾಡುತ್ತಿಲ್ಲ ಹಾಗೂ ಕ್ಷೇತ್ರದ ಬಗ್ಗೆ ಚಕಾರ ಸಹ ಎತ್ತುತ್ತಿಲ್ಲ’ ಎಂದು ಕಂದಕೂರ ಕಿಡಿ ಕಾರಿದರು.

ಕಾಳೆಬೆಳಗುಂದಿ ಗ್ರಾಮದಲ್ಲಿ ಮಹಿಳೆಯರು ಕುಡಿಯುವ ನೀರಿನ ಸಮಸ್ಯೆ ಬಿಚ್ಚಿಟ್ಟಾಗ ಜಿಪಂ ಸಿಇಒ ಅವರಿಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕರು, ಬೋರವೆಲ್ ವ್ಯವಸ್ಥೆ ಮಾಡುವಂತೆ ಸೂಚಿಸಿದರಲ್ಲದೆ, ಪಿಡಿಒ ಅವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರು.

ಇನ್ನೂ ಬಾಡಿಯಾಳ ದೊಡ್ಡ ಗ್ರಾಮದ ಮಾರೆಮ್ಮ ದೇವಸ್ಥಾನಕ್ಕೆ ₹25 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಹೆಚ್ಚುವರಿ ಅನುದಾನದ ಬಗ್ಗೆ ಗ್ರಾಮದ ಜನತೆ ಮನವಿ ಮಾಡಿದ ತಕ್ಷಣ ಶಾಸಕರು, ಈ ಕೆಲಸ ಆರಂಭಿಸಿ ಹೆಚ್ಚುವರಿಯಾಗಿ ₹25 ಲಕ್ಷ ಬಿಡುಗಡೆ ಮಾಡಿಸುವೆ ಎಂದು ಭರವಸೆ ನೀಡಿದರು. ಅಲ್ಲದೆ, ಒಂದು ಕೋಟಿ ವೆಚ್ಚದಲ್ಲಿ ಅಂಬಿಗರ ಚೌಡಯ್ಯ ಭವನ ನಿರ್ಮಾಣಕ್ಕೆ ಅನುದಾನ ನೀಡಿ ವರ್ಷವಾಗಿದೆ. ದಾನಿಗಳ ಸಹ ಭೂಮಿ ನೀಡಲು ಮುಂದಾಗಿದ್ದಾರೆ. ಆದರೆ, ಅಧಿಕಾರಿಗಳು ಈ ವಿಷಯದಲ್ಲಿ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಒಂದು ತಿಂಗಳ ಒಳಗಾಗಿ ಚೌಡಯ್ಯ ಭವನದ ಅಡಿಗಲ್ಲು ನೆರವೇರಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಭೂಸೇನಾ ನಿಗಮದ ಎಇಇ ಬನ್ನಪ್ಪ ಕೋಮಾರ, ಉಪ ತಹಶೀಲ್ದಾರ್ ಭೀಮನಗೌಡ, ಶಂಕರಗೌಡ, ಕಂದಾಯ ನಿರೀಕ್ಷಕ ಭೀಮಸೇನರಾವ್, ಶಂಕರಗೌಡ ಮುಖಂಡರಾದ ಶ್ರೀಧರ ಘಂಟಿ, ಶಂಕರರಡ್ಡಿ ಯಲಸತ್ತಿ, ಮಲ್ಲನಗೌಡ ಹಳಿಮನಿ ಕೌಳೂರ, ವೀರೇಂದ್ರ ಪಾಟೀಲ, ಬಸವರಾಜ ಕಣೇಕಲ್, ಅಜಯರಡ್ಡಿ ಯಲ್ಹೇರಿ, ಚಂದ್ರುಗೌಡ ಸೈದಾಪುರ, ಈಶ್ವರ ನಾಯಕ, ತಾಯಪ್ಪ ಡಿ.ಬದ್ದೆಪಲ್ಲಿ, ಪರ್ವತರಡ್ಡಿ ಕಾಳೆಬೆಳಗುಂದಿ, ರಾಜಶೇಖರ ಲಕ್ಷ್ಮಣ ಕಾಳೆಬೆಳಗುಂದಿ, ವೆಂಕಟೇಶ ಗಡದ್, ಲಕ್ಷ್ಮಣ ಕೂಡಲೂರ, ಸಾಬು ನಾಯಕ ನೀಲಹಳ್ಳಿ, ಬನ್ನಪ್ಪ ಹಿರೆನೂರ ಬಾಡಿಯಾಳ, ಬಸವರಾಜ ಹಿರೆನೂರ, ದೇವು ಘಂಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-30-1446492925

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.