ಗುರುಮಠಕಲ್ (ಯಾದಗಿರಿ ಜಿಲ್ಲೆ): ಪಟ್ಟಣದ ಡಿ. ದೇವರಾಜ ಅರಸು ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿನಿ ಸ್ವಾತಿ ಶರಣುಗೌಡ (18) ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದೆ.

ತಾಲ್ಲೂಕಿನ ನಂದೇಪಲ್ಲಿ ಗ್ರಾಮದ ಸ್ವಾತಿ, ಪಟ್ಟಣದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದರು. ವಸತಿ ನಿಲಯದ ಮೊದಲ ಅಂತಸ್ತಿನ ಕೋಣೆಯ ಕಿಟಕಿಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಶುಕ್ರವಾರ ಬೆಳಿಗ್ಗೆ ಉಪಹಾರಕ್ಕೆ ಕರೆದರೂ ಸ್ವಾತಿ ಬರಲಿಲ್ಲ. ನಾಳೆಯ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವೆ. ಆ ನಂತರ ಉಪಹಾರ ಅಥವಾ ಊಟ ಮಾಡುವುದಾಗಿ ಹೇಳಿ ಕೋಣೆಯಲ್ಲಿ ಉಳಿದುಕೊಂಡು ಬಾಗಿಲು ಹಾಕಿಕೊಂಡಿದ್ದಾಳೆ’ ಎಂದು ಹೇಳಿವೆ.

ಕೆಲ ಸಮಯದ ನಂತರ ಸ್ವಾತಿ ಅವರ ಪೋಷಕರು ಆಕೆಯ ಸಹಪಾಠಿಗಳಿಗೆ ಫೋನ್ ಕರೆ ಮಾಡಿದರು. ಕೋಣೆಗೆ ತೆರಳಿ ಬಾಗಿಲು ತಟ್ಟಿದರು. ಆದರೆ, ಸ್ವಾತಿ ಅವರು ಬಾಗಿಲು ತೆರೆಯದ ಕಾರಣ ಬಾಗಿಲಿನ ಮೇಲಿನ ಕಿಟಕಿ ಗಾಜು ಒಡೆದು, ಮೊಬೈಲ್ ಮೂಲಕ ಫೋಟೊ ತೆಗೆದಾಗ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾದರು. ಕೂಡಲೇ ವಾರ್ಡನ್ ಅಂಬಾಬಾಯಿ ತಳವಾರ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಹಿಂದುಳಿದ ವರ್ಗಗಳ ಡಿಡಿ ಸದಾಶಿವ ನಾರಾಯಣಕರ್, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ತಾಲ್ಲೂಕು ಪಂಚಾಯಿತಿ ಇಒ ಅಂಬರೇಶ ಪಾಟೀಲ, ಹಿಂದುಳಿದ ವರ್ಗಗಳ ಸಹಾಯಕ ನಿರ್ದೇಶಕ ಸಂತೋಷರೆಡ್ಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಮೃತ ಸ್ವಾತಿ ಅವರು ದ್ವಿತೀಯ ಪಿಯು ಪರೀಕ್ಷೆ ಬರೆಯುತ್ತಿದ್ದರು. ಸದ್ಯ ನಾಲ್ಕು ವಿಷಯಗಳ ಪರೀಕ್ಷೆಗಳು ಮುಗಿಸಿದ್ದು, ಉಳಿದ ಎರಡು ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದರು. ಶುಕ್ರವಾರ ಬೆಳಿಗ್ಗೆ ಸ್ವಾತಿ ಅವರು ತನ್ನ ತಮ್ಮನಿಗೆ ಕರೆ ಮಾಡಿ ಕ್ಯಾಲ್ಕುಲೇಟರ್ ತಂದುಕೊಡಲು ಕೋರಿದ್ದರು. ತನಿಖೆಯ ನಂತರ ಘಟನೆಗೆ ನಿಖರವಾದ ಕಾರಣ ಗೊತ್ತಾಗಲಿದೆ’ ಎಂದು ಎಸ್ಪಿ ಪೃಥ್ವಿಕ್ ಶಂಕರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.