ಗುರುಮಠಕಲ್: ‘ಕ್ಷೇತ್ರದ ಅಭಿವೃದ್ಧಿ ಮತ್ತು ಜನತೆಯ ಅನುಕೂಲತೆಗೆಂದು ಸರ್ಕಾರದ ಹಂತದಲ್ಲಿ ಸತತ ಪ್ರಯತ್ನ ಮತ್ತು ಮನವೊಲಿಕೆಯ ಮೂಲಕ ಅನುದಾನ ತರುತ್ತೇವೆ. ಅದು ಸದ್ಬಳಕೆಯಾದರೆ ನಮ್ಮ ಶ್ರಮ ಸಾರ್ಥಕ. ಹೀಗಾಗಿ ಕಾಮಗಾರಿಯ ಗುಣಮಟ್ಟದಲ್ಲಿ ರಾಜಿಯಾಗುವಂತಿಲ್ಲ’ ಎಂದು ಶಾಸಕ ಶರಣಗೌಡ ಕಂದಕೂರ ತಾಕೀತು ಮಾಡಿದರು.

ತಾಲ್ಲೂಕಿನ ಚಿನ್ನಾಕಾರ ಕ್ರಾಸ್ ಹತ್ತಿರ ಬುಧವಾರ ಜರುಗಿದ ಕೆಕೆಆರ್ಡಿಬಿಯ ₹9.9 ಕೋಟಿ ಅನುದಾನದ ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ-16ರ ಆಯ್ದ ಭಾಗಗಳಲ್ಲಿ ಮರು ಡಾಂಬಾರೀಕರಣ ಹಾಗೂ ಗುರುಮಠಕಲ್ ಪಟ್ಟಣದ ರಸ್ತೆ ವಿಸ್ತರಣೆ, ಬ್ರಿಡ್ಜ್ ನಿರ್ಮಾಣ, ಪಟ್ಟಣದ ಸೌಂದರ್ಯೀಕರಣ ಮತ್ತು ಆಧುನಿಕ ಬಸ್ ಸ್ಟ್ಯಾಂಡ್ ನಿರ್ಮಾಣ ಕಾಮಗಾರಿಗಳಿಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು

‘ಗಡಿಭಾಗದ ಜನರು ತಮ್ಮ ಕೆಲಸಗಳಿಗೆಂದು ಪ್ರತಿದಿನ ಸಂಚರಿಸುವ ಪ್ರಮುಖ ಅಂತರ್ರಾಜ್ಯ ರಸ್ತೆಯಿದು. ಜತೆಗೆ ನೆರೆಯ ತೆಲಂಗಾಣದ ಹೈದರಾಬಾದ್ ಸಂಪರ್ಕಿಸುವ ರಸ್ತೆಯಾಗಿದ್ದು, ಬಾರಿ ವಾಹನಗಳೂ ಸಂಚರಿಸುತ್ತವೆ. ಆದ್ದರಿಂದ ದುರಸ್ತಿ ಮಾಡಲಾಗುತ್ತಿದ್ದು, ಸಂಬಂಧಿತ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಮುತುವರ್ಜಿಯಿಂದ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ’ ಎಂದು ಹೇಳಿದರು.

‘ಗುರಮಠಕಲ್ ಪಟ್ಟಣದಲ್ಲಿ ಬೀದಿ ದೀಪಗಳ ಅಳವಡಿಕೆ ನಂತರ ಪುರಸಭೆಯಿಂದ ಅವುಗಳ ನಿರ್ವಹಣೆ ಮಾಡುಬೇಕು, ಪಟ್ಟಣದ ಉದ್ಯಾನವನ ಸೌಂದರ್ಯಿಕರಣಕ್ಕೆ ₹50 ಲಕ್ಷ ನೀಡಲಾಗಿದೆ. ಜತೆಗೆ, ಕಾಕಲವಾರ ಮತ್ತು ಅಂಬಿಗರ ಚೌಡಯ್ಯನವರ ವೃತ್ತದ ಅಭಿವೃದ್ಧಿಗೆ ಮತ್ತು ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೂ ಕ್ರಮವಹಿಸಲಾಗಿದೆ’ ಎಂದು ತಿಳಿಸಿದರು.

‘ಮಳೆಗಾಲದಲ್ಲಿ ಕುಡಿಯುವ ನೀರು ಕಲುಷಿತಗೊಳ್ಳುವ ಸಾಧ್ಯತೆಯಿದ್ದು, ಗ್ರಾಮೀಣ ಭಾಗದಲ್ಲಿ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಬೇಕು. ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿದ್ದು ಕೆಲಸ ಮಾಡಿ. ಗ್ರಾಮೀಣ ಭಾಗದಲ್ಲಿ ಮನೆಗಳು ಬಿರುಕು ಬಿಡುವ ಮತ್ತು ಕುಸಿಯುವ ಸಾಧ್ಯತೆ ಹೆಚ್ಚು, ಹೀಗಾಗಿ ಅಧಿಕಾರಿಗಳು ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಲಭ್ಯವಿರಬೇಕು’ ಎಂದು ಸಂಬಂಧಿತ ಅಧಿಕಾರಿಗಳಿಗೆ ಸೂಚಿದರು.

ನಂತರ ಜನತೆಯ ಕುಂದು-ಕೊರತೆಗಳನ್ನು ಆಲಿಸಿದ ಶಾಸಕ ಕಂದಕೂರ, ಸಮಸ್ಯೆಗಳನ್ನು ಶೀಘ್ರ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.

ತಹಶೀಲ್ದಾರ್ ಚನ್ನಮಲ್ಲಪ್ಪ ಗಂಟಿ, ಇಒ ಅಮರೇಶ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಶರಣಪ್ಪ, ಎಇಇ ಪರಶುರಾಮ, ಜಿಲ್ಲಾ ಜೆಡಿಎಸ್ ಅದ್ಯಕ್ಷ ಸುಭಾಶ್ಚಂದ್ರ ಕಟಕಟಿ, ಪಿಎಲ್ಡಿ ಬ್ಯಾಂಕ್ ಅದ್ಯಕ್ಷ ರಾಮಣ್ಣ, ಮುಖಂಡರಾದ ಸಿದ್ದರಾಮರಡ್ಡಿ ಗುಂಜನೂರ, ಅಜಯರಡ್ಡಿ ಯಲ್ಹೇರಿ, ಶರಣು ಆವಂಟಿ, ರವಿ ಪಾಟೀಲ, ಮಹೇಂದ್ರರಡ್ಡಿ ಕಂದಕೂರ, ಬಸಣ್ಣ ದೇವರಳ್ಳಿ, ರವಿ ಗವಿನೋಳ, ಬಸವರಾಜ ದಾಸರ, ಆನಂದ ವಡವಟ, ಬಾಬು, ವೆಂಕಟೇಶ ಪೂಜಾರಿ, ಮೌಲಾನ್ ಸಾಬ್, ಹಣಮಂತ ಚಿನ್ನಾಕಾರ, ಸಂದೀಪ ಚಿನ್ನಾಕಾರ, ಪಿಡಿಒ ಜಯಶ್ರೀ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-30-537407929

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.