ಠಾಣಗುಂದಿ (ಯರಗೋಳ): ‘ಕನ್ನಡ ನಾಡು ಶಿಲ್ಪ, ಕಲೆ, ಸಾಹಿತ್ಯ, ಸಂಸ್ಕೃತಿ, ಸಹಿಷ್ಣತೆಗೆ ಹೆಸರಾಗಿ ಉಸಿರಾಗಿದೆ. ಇಡೀ ಭಾರತದಲ್ಲಿಯೇ ಕರ್ನಾಟಕದಷ್ಟು ವೈವಿಧ್ಯಮಯ ಭೌಗೋಳಿಕ ಪರಿಸರ, ಭಾಷಾ ಸಂಪತ್ತು ಇನ್ನೊಂದು ರಾಜ್ಯಕ್ಕಿಲ್ಲ’ ಎಂದು ಶಿಕ್ಷಕ ರಾಜೇಂದ್ರಕುಮಾರ ಮುದ್ನಾಳ್ ಹೇಳಿದರು.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಕನ್ನಡ ನಾಡು ನುಡಿಯ ಬಗ್ಗೆ ಉಪನ್ಯಾಸ ನೀಡಿದರು.

ಕನ್ನಡ, ಕನ್ನಡಿಗ, ಕರ್ನಾಟಕ ಎಂಬ ಭಾವನೆ ನಗರ ಕೇಂದ್ರದಲ್ಲಿ ಅಂಚಿನ ಸ್ಥಿತಿ ತಲುಪಿದೆ. ಗ್ರಾಮೀಣ ಭಾಗಗಳಲ್ಲಿ ಕನ್ನಡ ಇನ್ನು ಜೀವಂತವಾಗಿದೆ. ಆದರೆ ಮಾರುಕಟ್ಟೆ ವ್ಯವಸ್ಥೆಯಿಂದ ಗ್ರಾಮೀಣ ಭಾಗದಲ್ಲಿನ ಕನ್ನಡ ಕಣ್ಮರೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಭಾರಿ ಮುಖ್ಯ ಶಿಕ್ಷಕ ಶರಣಪ್ಪ ಮಾತನಾಡಿದರು. ಶಿಕ್ಷಕ ಶಿವಶಂಕರ ಪೋರ್ಲ ನಿರೂಪಿಸಿದರು. ಚೆನ್ನಬಸವ ವಂದಿಸಿದರು. ಜ್ಯೋತಿ ಸೇರಿದಂತೆ ಅನೇಕರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.