ಯಾದಗಿರಿ: ‘ಸರ್ಕಾರಕ್ಕೆ ಎಷ್ಟೇ ಕಷ್ವಾದರೂ ಐದೂ ಗ್ಯಾರಂಟಿಗಳನ್ನು ಜಾರಮಾಡುತ್ತೇವೆ’ ಎಂದು ಸಣ್ಣ ಕೈಗಾರಿಕೆ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರವನ್ನು ಸಬ್ಸಿಡಿ ರೂಪದಲ್ಲಿ ಅಕ್ಕಿ ನೀಡಲು ಕೋರಿಲ್ಲ, ಮಾರುಕಟ್ಟೆ ಬೆಲೆಯಲ್ಲಿ ಅಕ್ಕಿ ನೀಡಲು ಕೋರಲಾಗಿತ್ತು. ಆದರೆ ಕೇಂದ್ರಕ್ಕೆ ಕರ್ನಾಟಕದ ಬಗ್ಗೆ ಕಾಳಜಿ ಇದ್ದಂತಿಲ್ಲ ಎಂದರು.
ಪುರಷರಿಗೆ ಕೇಂದ್ರ ಸರ್ಕಾರ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಿ, ಖಾಸಗಿ ಬಸ್ ನಲ್ಲಿಯೂ ಉಚಿತ ಪ್ರಯಾಣವನ್ನು ಒದಗಿಸಲಿ. ‘ನಮ್ಮಲ್ಲಿ ಖಾಸಗಿ ಬಸ್ ಓಡಾಡುತ್ತವೆ, ಅವುಗಳನ್ನೂ ಫ್ರೀ ಮಾಡಿ ಎನ್ನುತ್ತಿದ್ದಾರೆ’ ಎಂದು ನಳೀನ್‌ಕುಮಾರ್ ಕಟೀಲ್‌ಗೆ ತಿರುಗೇಟು ನೀಡಿದರು.
ಬಿಜೆಪಿ ಅವಧಿಯಲ್ಲಿನ ಕಾಯ್ದೆಗಳನ್ನು ರದ್ದು ಮಾಡುತ್ತಿರುವುದನ್ನು ದ್ವೇಷದ ರಾಜಕೀಯ ಎನ್ನುವ ಆರೋಪ ನಿರಾಧಾರ. ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದಾಗಲೂ ಅವುಗಳನ್ನು ವಿರೋಧ ಮಾಡಿತ್ತು. ಉತ್ತರ ಪ್ರದೇಶ ಸೇರದಿಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಇನ್ನೂ ಏಕೆ ಗೋಹತ್ಯೆ ನಿಷೇಧ ಮಾಡಿಲ್ಲ? ಕೇಂದ್ರ ಸರ್ಕಾರ ಸಂಪೂರ್ಣ ಪ್ರಾಣಿ ಹತ್ಯೆ ನಿಷೇಧ ಕಾನೂನು ಜಾರಿಗೆ ತರಲಿ, ಬಿಜೆಪಿಯವರು ಬೇಕಾದಾಗೊಂದು, ಬೇಡವಾದಾಗೊಂದು ನೀತಿ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಯಾವ ಅಭಿವೃದ್ಧಿಯೂ ಮಾಡಿಲ್ಲ ಎಂದು ಅವರಿಗೆ ಗೊತ್ತು. ಆದ್ದರಿಂದ ಹಿಜಾಬ್, ಹಲಾಲ್, ಜಟ್ಕಾ ಎಂದು ಜಗಳ ಹಚ್ಚುವ ಕೆಲಸ ಮಾಡಿದ್ದರು. ಮೀಸಲಾತಿ ಅದೂ-ಇದೂ ಎಂದು ಮತಗಳಿಕೆಗೆ ಯತ್ನಿಸಿದರು. ಆದರೆ, ಅವರ ಭ್ರಷ್ಟಾಚಾರದ ಅರಿವಿಂದ ಮತದಾರರು ಚುನಾವಣೆಯಲ್ಲಿ ಅವರನ್ನು ಮನೆಗೆ ಕಳುಹಿಸಿದರು ಎಂದರು.
ವಿದ್ಯುತ್ ಬಿಲ್‌ಗೆ ಸಂಬಂಧಿಸಿ ಒಂದೆರಡು ಕಡೆ ಮಾತ್ರ ಪ್ರತಿಭಟನೆ ಜರುಗಿದ್ದು, ಎಫ್.ಕೆ.ಸಿ.ಸಿ. ಮತ್ತು ಕಾಸಿಯೋ ಬೆಂಬಲಿಸಿಲ್ಲ. ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಇಂಧನ ಸಚಿವರೂ ಸಭೆ ನಡೆಸಿ ಮಾತನಾಡಿದ್ದಾರೆ. ಬುಧವಾರ ನಾನೂ, ಬೃಹತ್ ಕೈಗಾರಿಕೆ ಹಾಗೂ ಇಂಧನ ಸಚಿವರೂ ಸೇರಿ ಕೈಗಾರಿಕೋದ್ಯಮಿಗಳೊಂದಿಗೆ ಸಭೆ ನಡೆಸಲಿದ್ದು, ಅಲ್ಲಿ ಎಲ್ಲಾ ವಿಷಯಗಳನ್ನು ತಿಳಿಸಲಿದ್ದೇವೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.