ಗುರುಮಠಕಲ್: ‘ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ ಮತ್ತು ಹೋರಾಟವೆಂಬ ಮಂತ್ರಗಳನ್ನು ನೀಡಿದ್ದಾರೆ. ಅವರ ಆಶಯದಂತೆ ಸಮಾಜ ಶಿಕ್ಷಣಕ್ಕೆ ಆದ್ಯತೆ ನೀಡಬೇಕು’ ಎಂದು ಮಾದಿಗ ದಂಡೋರ (ಎಂಆರ್ಪಿಎಸ್) ತಾಲ್ಲೂಕು ಅಧ್ಯಕ್ಷ ರವಿ ಬುರನೋಳ ಸಲಹೆ ನೀಡಿದರು.

ತಾಲ್ಲೂಕಿನ ಯಂಪಾಡ ಗ್ರಾಮದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ ವಿಶ್ವರತ್ನ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉಪನ್ಯಾಸಕ ಕೃಷ್ಣ ಚಪೆಟ್ಲಾ ಮಾತನಾಡಿ, ‘ತಮ್ಮಇಡೀ ಜೀವನವನ್ನು ಶೋಷಿತ ಸಮುದಾಯಗಳ ಏಳಿಗೆಗಾಗಿ ಮತ್ತು ಧ್ವನಿಯಿಲ್ಲದೆ ನಲುಗಿದ್ದ ಸಮುದಾಯದ ಹಕ್ಕುಗಳಿಗಾಗಿ ಹೋರಾಡಿದ್ದ ಅಂಬೇಡ್ಕರ್ ಅವರು ನಮ್ಮ ನಿಜವಾದ ದೇವರು’ ಎಂದರು.

‘ಎಲ್ಲರಿಗೂ ಸಮಾನವಾಗಿ ಮತದಾನದ ಹಕ್ಕು ನೀಡಲು ನಿರಾಕರಿಸಿದ್ದರು. ಆದರೆ ಆ ವೇಳೆ ಈ ದೇಶದ ಎಲ್ಲಾ ಸಮುದಾಯಗಳ ಎಲ್ಲಾ ನಾಗರಿಕರಿಗೂ ಮತದಾನ ಕೊಡಿಸುವಲ್ಲಿ ಬಾಬಾ ಸಾಹೇಬರು ಶ್ರಮಿಸಿ ಯಶಸ್ವಿಯಾದರು’ ಎಂದು ವಿವರಿಸಿದರು.

ಡಿಎಸ್ಎಸ್ ತಾಲ್ಲೂಕು ಅಧ್ಯಕ್ಷ ಲಾಲಪ್ಪ ತಲಾರಿ ಮಾತನಾಡಿದರು. ಡಿಎಸ್ಎಸ್ ಗ್ರಾಮ ಘಟಕದ ಅಧ್ಯಕ್ಷ ಅಂಜಪ್ಪ, ಗ್ರಾ.ಪಂ ಮಾಜಿ ಸದಸ್ಯ ಹಣಮಂತು, ವಾಲ್ಮೀಕಿ ಸಮಾಜದ ಅಧ್ಯಕ್ಷ ಜಲ್ಲಪ್ಪ, ಭೀಮಣ್ಣ ವಾಲ್ಮೀಕಿ, ಭೀಮು ಕೋರೆಬನ್, ಆನಂದ ದೊಡ್ಮನಿ, ರಮೇಶ ಗೂರು, ಮಾಣಿಕ್ಯಪ್ಪ ಚಪೆಟ್ಲಾ, ಹಣಮಂತ ಕೋರೆಬನ್, ದೇವು, ಆನಂದ ದೊಡ್ಮನಿ, ಸಾಬರೆಡ್ಡಿ ದೊಡ್ಮನಿ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-30-150372014

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.