ಮೋದಿಗಾಗಿ ಹರಕೆ ತೀರಿಸಿದ ಹಣಮಂತ

ಬುಧವಾರ, ಜೂನ್ 19, 2019
26 °C

ಮೋದಿಗಾಗಿ ಹರಕೆ ತೀರಿಸಿದ ಹಣಮಂತ

Published:
Updated:
Prajavani

ಕೆಂಭಾವಿ: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಗ್ರಾಮ ದೇವತೆಗೆ ದೀಡ್ ನಮಸ್ಕಾರ ಹಾಕುತ್ತೇನೆ ಎಂದು ಹರಿಸಿಕೊಂಡಿದ್ದ ಸಮೀಪ ಮುದನೂರ ಗ್ರಾಮದ ಮೋದಿಯ ಕಟ್ಟಾ ಅಭಿಮಾನಿ ಹಣಮಂತರೆಡ್ಡಿ ಕರಡಕಲ್ ಗುರುವಾರ ಬಿಜೆಪಿ ಗೆಲ್ಲುತ್ತಿದ್ದಂತೆಯೆ ಬಿರು ಬಿಸಿಲನ್ನು ಲೆಕ್ಕಿಸದೆ ತಮ್ಮ ಮನೆಯಿಂದ ಗ್ರಾಮದೇವತೆ ದೇವಸ್ಥಾನದವರೆಗೆ ದೀಡ್‌ ನಮಸ್ಕಾರ ಹಾಕಿ ಹರಕೆ ಪೂರೈಸಿದರು. 

ನಂತರ ಮಾತನಾಡಿದ ಅವರು, ಸದೃಢ ದೇಶಕ್ಕಾಗಿ ಮೋದಿಯವರ ಅವಶ್ಯಕತೆ ಇದೆ. ಭ್ರಷ್ಟಾಚಾರ ರಹಿತ, ಕಳಂಕ ರಹಿತ ವ್ಯಕ್ತಿಯಿಂದ ಮಾತ್ರ ದೇಶದ ಉದ್ಧಾರ ಸಾಧ್ಯ. ಮೋದಿ ತಮಗಾಗಿ ಏನೂ ಮಾಡದೆ ದೇಶದ ಹಿತಕ್ಕಾಗಿ ಹಗಲಿರುಳು ದಣಿವರಿಯದೆ ದುಡಿಯುತ್ತಾರೆ. ಅಂತಹ ಪ್ರಧಾನಿಯನ್ನು ಪಡೆದ ನಾವೇ ಧನ್ಯರು. ಅವರ ಸೇವೆ ನಿರಂತರವಾಗಿ ನಡೆಯಲಿ ಎಂದು ನಾನು ಬಯಸಿ ಹರಕೆ ಹೊತ್ತಿದ್ದೆ. ನನ್ನ ಹರಕೆಯಂತೆ ಮತ್ತೆ ಅವರು ಪ್ರಧಾನಿಯಾಗಿರುವಕ್ಕೆ ಸಂತಸಕ್ಕೆ ಪಾರವೆ ಇಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪರಿವಾರದವರು ಹಾಗೂ ಸ್ನೇಹಿತರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !