ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಚ್ಚೋಲ: ಆರೋಗ್ಯ ಮೇಳ

Last Updated 24 ಸೆಪ್ಟೆಂಬರ್ 2022, 5:42 IST
ಅಕ್ಷರ ಗಾತ್ರ

ಯರಗೋಳ: ಸಮೀಪದ ಅರಿಕೇರಾ(ಬಿ) ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ ಅಚ್ಚೋಲ ಗ್ರಾಮದಲ್ಲಿ ಬುಧುವಾರ ಆರೋಗ್ಯ ಮೇಳ ನಡೆಯಿತು.

ಈ ವೇಳೆ ಮಾತನಾಡಿದ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಧಿಕಾರಿ ಯಶವಂತ ರಾಠೋಡ್, ಆರೋಗ್ಯ ಮೇಳದ ಮಹತ್ವ, ಮದುಮೇಹ, ಬಿಪಿ, ಹೃದಯ ಸಮಸ್ಯೆ, ಕ್ಯಾನ್ಸರ್, ಕ್ಷಯ ರೋಗಗಳ ಬಗ್ಗೆ, ಸರ್ಕಾರಿ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.

ಆಯುಷ್ಮಾನ್ ಭಾರತ ಅಡಿಯಲ್ಲಿ ಆರೋಗ್ಯ ಭಾಗ್ಯ ‌ ಕಾರ್ಡ್ ಎಲ್ಲಾ ಜನರು ಮಾಡಿಸಿ ಅದರ ಸದುಪಯೋಗ ಪಡೆದುಕೊಳ್ಳಬೇಕು, ಕೋವಿಡ್ ಲಸಿಕೆ ಎಲ್ಲ 18-59 ವಯಸ್ಸಿನ ಜನರು ಬೂಸ್ಟರ್ ಡೋಸ್ ಕಡ್ಡಾಯವಾಗಿ ತಗೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮು ರಾಠೋಡ, ಸದಸ್ಯರಾದ ಹಣಮಂತ ಆರೋಗ್ಯ ಕ್ಷೇಮ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ದಿನೇಶ, ಹಿರಿಯ ಆರೋಗ್ಯ ನೀರಿಕ್ಷಣ ಅಧಿಕಾರಿ ದೇವೇಂದ್ರಪ್ಪ, ಆರೋಗ್ಯ ಸಿಬ್ಬಂದಿ ಸಂಗೀತಾ, ಆಶಾ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT