ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾವ್ ಬಿಸಲ್ ತಡಕೊಂತಿವಿ ಮಳಿ ಅಂದ್ರ ತತ್ತರಿಸುತ್ತಿವಿ: ಶಹಾಪುರದ ಜನ

Published 2 ಸೆಪ್ಟೆಂಬರ್ 2024, 5:17 IST
Last Updated 2 ಸೆಪ್ಟೆಂಬರ್ 2024, 5:17 IST
ಅಕ್ಷರ ಗಾತ್ರ

ಶಹಾಪುರ: ’ಜಿಟಿ ಜಿಟಿ ಮಳಿಯಿಂದ ಬ್ಯಾಸರ ಬಂದದಾ. ತಣ್ಣನ ಗಾಳಿ ಬೀಸಿ ಜಡ್ಡು ಬರತಾದ್, ನಾವ್ ಬಿಸಲ್ ತಡಕೊಂತಿವಿ ಮಳಿ ಅಂದ್ರ ತತ್ತರಿಸುತ್ತಿವಿ’ ಎಂದು ಬೀಡಿಯ ಧಮ್ ಎಳೆದು ತಮ್ಮ ಮನದಾಳದ ಮಾತು ಹೇಳಿದ ಮಾನಪ್ಪ.

’ನಾವು ಹೆಚ್ಚಾಗಿ ಬಿಸಿಲು ಇಷ್ಟಪಡುತ್ತಿವಿ. ಮಳೆ ಬಂದರೆ ದುಗುಡ, ಆತಂಕ, ಅದರಲ್ಲಿ ಜಿಟಿ ಜಿಟಿ ಮಳೆ ಬಂದರೆ ಆಕಾಶವೇ ಕಂಚಿ ಬಿದ್ದ ಅನುಭವ. ಪ್ರಸಕ್ತ ವರ್ಷ ಅಗಸ್ಟ್ ತಿಂಗಳಲ್ಲಿ ನಮಗೆ ಉತ್ತಮ ಮಳೆಯಾಗಿದೆ. ಬಿತ್ತನೆ ಮಾಡಿದ ಪೈರು ಸಮೃದ್ಧಿಯಾಗಿವೆ. ಮಳೆ ಈಗ ಇಷ್ಟಕ್ಕೆ ನಿಲ್ಲಬೇಕು. ಇಲ್ಲಾ ಅಂದರೆ ಬೆಳೆ ಹಾನಿಯಾಗುತ್ತದೆ’ ಎನ್ನುತ್ತಾರೆ ರೈತ ಸಿದ್ದಯ್ಯ.

ಎರಡು ದಿನದಿಂದ ಸುರಿಯುತ್ತಿರುವ ಮಳೆಯಿಂದ ತಾಲ್ಲೂಕಿನ ಭೀಮಾ ಹಾಗೂ ಕೃಷ್ಣಾ ನದಿ ಪಾತ್ರದಲ್ಲಿ ಹೆಚ್ಚಿನ ನೀರು ಹರಿದು ಬರುತ್ತಲಿದೆ. ಅಲ್ಲದೆ ಗ್ರಾಮೀಣ ಪ್ರದೇಶ ರಸ್ತೆಗಳು ಮಳೆಯಿಂದ ಕೆಸರು ಗದ್ದೆಯಂತಾಗಿವೆ. ರಸ್ತೆಯ ಮಧ್ಯದಲ್ಲಿ ಕಂದಕ ಬಿದ್ದಿವೆ. ಜೀವ ಕೈಯಲ್ಲಿ ಹಿಡಿದು ಸಂಚಾರ ಮಾಡುವ ದುಸ್ಥಿತಿ ಎದುರಾಗಿದೆ ಎನ್ನುತ್ತಾರೆ ಶಿರವಾಳ ಗ್ರಾಮದ ಶರಣಪ್ಪ ಪ್ಯಾಟಿ.

ದೋರನಹಳ್ಳಿ ಗ್ರಾಮದ ಎರಡು ಮನೆಗೆ ಮಳೆ ನೀರು ನುಗ್ಗಿವೆ. ಹುರಸುಂಡಗಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದಿದೆ. ಸದ್ಯಕ್ಕೆ ಯಾವುದೇ ಜೀವ ಹಾನಿಯಾಗಿಲ್ಲ.
-ಉಮಾಕಾಂತ ಹಳ್ಳೆ, ತಹಶೀಲ್ದಾರ್‌

1ಎಸ್ಎಚ್ಪಿ 2(2): ಜಿಟಿ ಜಿಟಿ ಮಳೆಯನ್ನು ಲೆಕ್ಕಸದೆ ಸಿದ್ದಲಿಂಗ ಬೆಟ್ಟದಲ್ಲಿ ಮಳೆ ಮಜಾ ಅನುಭವಿಸುತ್ತಿರುವ ಜನತೆ
1ಎಸ್ಎಚ್ಪಿ 2(2): ಜಿಟಿ ಜಿಟಿ ಮಳೆಯನ್ನು ಲೆಕ್ಕಸದೆ ಸಿದ್ದಲಿಂಗ ಬೆಟ್ಟದಲ್ಲಿ ಮಳೆ ಮಜಾ ಅನುಭವಿಸುತ್ತಿರುವ ಜನತೆ
1ಎಸ್ಎಚ್ಪಿ 2(3): ಶಹಾಪುರ ನಗರದ ನಾಗರ ಕೆರೆಯ ಒಡಲು ತುಂಬಿಕೊಳ್ಳುತ್ತಲಿದೆ
1ಎಸ್ಎಚ್ಪಿ 2(3): ಶಹಾಪುರ ನಗರದ ನಾಗರ ಕೆರೆಯ ಒಡಲು ತುಂಬಿಕೊಳ್ಳುತ್ತಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT