ಮಂಗಳವಾರ, ಅಕ್ಟೋಬರ್ 26, 2021
21 °C

ಯಾದಗಿರಿ: ಮಳೆ, ಗಾಳಿಗೆ ಕುಸಿದ ಮನೆಗಳು, ಹಲವರಿಗೆ ಗಾಯ

ತೋಟೇಂದ್ರ ಎಸ್. ಮಾಕಲ್ Updated:

ಅಕ್ಷರ ಗಾತ್ರ : | |

ಯರಗೋಳ (ಯಾದಗಿರಿ): ಸುತ್ತಲಿನ ಗ್ರಾಮಗಳಲ್ಲಿ ಸೋಮವಾರ ರಾತ್ರಿ ಸುರಿದ ಜೋರು ಮಳೆಗೆ ಹಲವು ಮನೆಗಳ ಗೋಡೆ, ಮೇಲ್ಛಾವಣೆ ಕುಸಿದು, ಹಲವರಿಗೆ ಗಂಭೀರ ಗಾಯಗಳಾಗಿವೆ.

ಅಲ್ಲಿಪುರ ಗ್ರಾಮದಲ್ಲಿ ಭಾಗಮ್ಮ ಎನ್ನುವ ಮಹಿಳೆ ತನ್ನ ಮಕ್ಕಳೊಂದಿಗೆ ಮಲಗಿದ್ದ ವೇಳೆ ಜೋರು ಗಾಳಿ ಬೀಸಿದ ಪರಿಣಾಮ ಪತ್ರಾಸ್ ಹಾರಿ ಅದರ ಮೇಲಿನ ಕಲ್ಲುಗಳು ಮಲಗಿದ್ದವರ ಮೇಲೆ ಬಿದ್ದಿವೆ. ಮಕ್ಕಳಾದ ಸಾಬಣ್ಣ, ಕರೆಪ್ಪ ತಲೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಗ್ರಾಮದ ಭಾಸ್ಕರ ಅವರ ಮನೆಯ ಮೇಲ್ಛಾವಣಿ, ದೇವಿಂದ್ರಮ್ಮ ಮನೆಯ ಗೋಡೆ, ಸವಿತಾಬಾಯಿ ಸೊಮು ಅಲ್ಲಿಪುರ ಸಣ್ಣ ತಾಂಡಾ ಮನೆಯ ಮೇಲ್ಛಾವಣೆ, ಚಂದ್ರಪ್ಪ ನರಸಪ್ಪ ಗುಲಗುಂಜಿ ತಾಂಡಾ ಮನೆಯ ಮೇಲ್ಛಾವಣೆ ಕುಸಿದಿದೆ. ಗ್ರಾಮ ಪಂಚಾಯಿತಿ ಸದಸ್ಯೆ ಮಲ್ಲಮ್ಮ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದ್ದಾರೆ.

ಮೋಟ್ನಳ್ಳಿ ಗ್ರಾಮದಲ್ಲಿ ಮಳೆಯಿಂದ ಸಾಬಣ್ಣ ನಾಚವಾರ ಎನ್ನುವವರ ಮನೆ ಮೇಲೆ ಬೇವಿನ ಮರ ಬಿದ್ದ ಪರಿಣಾಮ ಮೇಲ್ಛಾವಣಿ, ಗೋಡೆ ಕುಸಿದಿದೆ. ವಿದ್ಯುತ್ ಕಂಬಗಳು ಉರುಳಿವೆ. ಭತ್ತ, ತೊಗರಿ, ಹತ್ತಿ, ಶೇಂಗಾ, ಈರುಳ್ಳಿ ಬೆಳೆಗಳು ನಾಶವಾಗಿವೆ. ಸ್ಥಳೀಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡುವಂತೆ ಗ್ರಾಮದ ಗುರುಲಿಂಗಯ್ಯ ಸ್ವಾಮಿ ಹಿರೇಮಠ ಒತ್ತಾಯಿಸಿದ್ದಾರೆ.

ಚಾಮನಳ್ಳಿ ಗ್ರಾಮದಲ್ಲಿ ಮಳೆಯಿಂದಾಗಿ ಸಿದ್ದಪ್ಪ ಸಿದ್ದಲಿಂಗಪ್ಪ, ಪರುಶುರಾಮ ಭೀಮಪ್ಪ ಎನ್ನುವವರ ಮನೆಗಳು ಬಿದ್ದಿವೆ ಎಂದು ಗ್ರಾಮ ಲಿಕ್ಕಿಗರಾದ ಚನ್ನಬಸವ, ದೇವಿ ಬಿ, ಅಪೂರ್ವ 'ಪ್ರಜಾವಾಣಿ' ಗೆ ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು