ಭಾನುವಾರ, ಏಪ್ರಿಲ್ 11, 2021
32 °C
ಶಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ: ಚಿತ್ತಾರ ಮೂಡಿಸಿದ ಪಟಾಕಿಗಳು

ಹೆಡಗಿಮದ್ರ: ಸಂಭ್ರಮದ ‘ತನಾರತಿ ಉತ್ಸವ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಡಗಿಮದ್ರ (ಯರಗೋಳ): ಗ್ರಾಮದ ಶಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದ ಪ್ರಯುಕ್ತ ಶನಿವಾರ ಸಂಜೆ ರಥೋತ್ಸವ ಸಂಭ್ರಮದಿಂದ ಜರುಗಿತು.

ಆರಂಭದಲ್ಲಿ ಆಕಾಶದಲ್ಲಿ ಪಟಾಕಿಗಳು ಬಣ್ಣದ ಚಿತ್ತಾರ ಮೂಡಿಸಿದವು.

ದೇಗುಲದಿಂದ ಹೊರಟ ಪಲ್ಲಕ್ಕಿ ಹೊಳೆ ತಲುಪಿತು. ಅಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿದವು.

ಮರಳಿ ಬರುವಾಗ ಮಹಿಳೆಯರು ತಲೆಯ ಮೇಲೆ ಆರತಿ ಹೊತ್ತು ನಡೆದರು. ಮಠಾಧಿಪತಿ ಪಂಡಿತರಾಧ್ಯ ಶಾಂತ ಮಲ್ಲಿಕಾರ್ಜುನ ಶಿವಚಾರ್ಯರ ನೇತೃತ್ವದಲ್ಲಿ ತನಾರತಿ ಉತ್ಸವ ನಡೆಯಿತು. ಶಾಂತ ಶಿವಯೋಗಿಗಳ ಗದ್ದುಗೆಗೆ 5 ಸುತ್ತು ಪ್ರದಕ್ಷಿಣೆ ಹಾಕಲಾಯಿತು.

ಭಜನೆ, ಡೊಳ್ಳು, ನೃತ್ಯ ತಂಡಗಳು ಭಾಗವಹಿಸಿದ್ದವು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಜೋಳದ ಕಡುಬು, ರೊಟ್ಟಿ, ಪುಂಡಿಪಲ್ಲೆ, ಹಿಂಡೆ ಪಲ್ಲೆ, ಗೋಧಿ ಹುಗ್ಗಿ, ಸಜ್ಜಕ, ಅನ್ನ ಹಾಗೂ ಸಾಂಬಾರ್ ವ್ಯವಸ್ಥೆ ಮಾಡಲಾಗಿತ್ತು.

ಆಟಿಕೆ ಅಂಗಡಿ, ಪೂಜಾ ಸಾಮಗ್ರಿ, ಬಳೆ, ಸಿಹಿ ತಿನಿಸು, ಟೆಂಗಿನ ಕಾಯಿ, ಕಲ್ಲಂಗಡಿ, ಕಬ್ಬು ಮಾರಾಟ ಜೋರಾಗಿತ್ತು.

ಹೋಟೆಲ್‌ಗಳಲ್ಲಿ ಜನ ಮುಗಿಬಿದ್ದು ಉಪಾಹಾರ ಸೇವಿಸುವುದು ಕಂಡುಬಂತು. ಮಂದಿರದ ಪ್ರವೇಶ ದ್ವಾರ, ಶಿಖರದ ಮೇಲೆ, ಅಂಗಳದಲ್ಲಿನ ಗಿಡಗಳ ಮೇಲೆ ಹಾಕಲಾಗಿದ್ದ, ವಿದ್ಯುತ್ ದೀಪಾಲಂಕಾರ ನೋಡುಗರ ಕಣ್ಮನ ಸೆಳೆಯಿತು.

ಗಾಯಕರಾದ ಶ್ವೇತಾ ದೇವನಳ್ಳಿ, ಮೋನಮ್ಮ, ಕರಿಬಸಯ್ಯ ತಡಕಲ್ ತಂಡದವರು ಕಾರ್ಯಕ್ರಮ ನೀಡಿದರು. ಯುವಕರು ನೃತ್ಯ ಮಾಡಿದರು. ಧಾರ್ಮಿಕ ಸಭೆಗಳು ಜರುಗಿದವು.

ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದಿಂದ ಮಾರಾಟಕ್ಕೆ ಎತ್ತುಗಳನ್ನು ತರಲಾಗಿತ್ತು. ಸುತ್ತಲಿನ ಹಳ್ಳಿಗಳ ರೈತರು ಗುಂಪಾಗಿ ಎತ್ತುಕೊಳ್ಳುವ, ಮಾರಾಟ ಮಾಡುವಲ್ಲಿ ತೊಡಗಿದ್ದರು.

ದವಣಿ, ಕಿಲಾರಿ, ಬಿಜಾಪುರ ತಳಿಗಳಿಗೆ ಬೇಡಿಕೆ ಕಂಡುಬಂತು.

ಅಲ್ಲಿಪುರ, ಕಂಚಗಾರಳ್ಳಿ, ಚಾಮನಳ್ಳಿ, ಠಾಣಗುಂದಿ, ತಳಕ, ತಂಗಡಗಿ, ಬಸವಂತಪುರ, ಖಾನಳ್ಳಿ, ಅಚ್ಚೊಲ, ಓರುಣಚ, ಬೊಮ್ಮ ಚಟ್ನಳ್ಳಿ, ಅಬ್ಬೆ ತುಮಕೂರು, ಮುದ್ನಾಳ ಹಾಗೂ ಅರಿಕೇರಾ.ಬಿ ಗ್ರಾಮದ ಭಕ್ತರು ಭಾಗವಹಿಸಿದ್ದರು.

ವೈದ್ಯ ಡಾ.ಕಾಮರೆಡ್ಡಿ, ವೀರೇಶ ಜಾಕ, ಸಿ.ಎಂ.ಪಾಟೀಲ, ರಾಚನಗೌಡ ಮುದ್ನಾಳ, ಡಾ. ಭೀಮಣ್ಣ ಮೇಟಿ, ಪ್ರಭು ದೊರೆ, ವಿರೂಪಾಕ್ಷಯ್ಯ ಸ್ವಾಮಿ, ಪ್ರಭುಗೌಡ ಅರಿಕೇರಾ.ಬಿ, ರಾಮರೆಡ್ಡೆಪ್ಪ ಗೌಡ ಕ್ಯಾಸಪ್ಪನಳ್ಳಿ, ಅನೀಲ ಹೆಡಗಿಮದ್ರ, ಶರಣಗೌಡ ಅಲ್ಲಿಪುರ, ಬಸ್ಸುಗೌಡ ಬಿಳಾರ, ಅಜಯರೆಡ್ಡಿ ಎಲ್ಹೇರಿ, ಭೀಮು ನಾಯಕ, ಅನಂತು ಹಾಗೂ ಸಂಗಮೇಶ ಕೆಂಭಾವಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.