ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೃಹರಕ್ಷಕರ ಸೇವೆ ಅನನ್ಯ’

Last Updated 28 ಡಿಸೆಂಬರ್ 2018, 14:35 IST
ಅಕ್ಷರ ಗಾತ್ರ

ಯಾದಗಿರಿ: ‘ಈ ದೇಶಕ್ಕೆ ಗೃಹರಕ್ಷಕರ ಸೇವೆ ಅನನ್ಯವಾಗಿದ್ದು, ಗೃಹರಕ್ಷಕರು ಉತ್ತಮ ದೇಹಾರೋಗ್ಯ ಹೊಂದಬೇಕು’ ಎಂದು ಗೃಹರಕ್ಷಕರ ಜಿಲ್ಲಾ ಸಮಾದೇಷ್ಟಕ ಪ್ರವೀಣ ದೇಶಮುಖ ಸಲಹೆ ನೀಡಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗೃಹರಕ್ಷಕ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಗೃಹರಕ್ಷಕರ ಜಿಲ್ಲಾ ಮಟ್ಟದ ವೃತ್ತಿಪರ ಕ್ರೀಡಾಕೂಟಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಜಿಲ್ಲೆಯ ಗೃಹರಕ್ಷಕರು ಕ್ರೀಡಾಕೂಟಗಳಲ್ಲಿ ಉತ್ತಮ ಪ್ರದರ್ಶನ ನೀಡಿ ವಿಭಾಗ, ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡು ಉತ್ತಮ ಸಾಧನೆ ಮಾಡಬೇಕು’ ಎಂದರು.

ಗೃಹರಕ್ಷಕ ದಳದ ಸುರಪುರ ಘಟಕದ ಕಮಾಂಡರ್ ಯಲ್ಲಪ್ಪ ಹುಲಿಕಲ್ ಹಾಗೂ ಶಹಾಪುರ ಘಟಕಾಧಿಕಾರಿ ಮಾರ್ತಾಂಡಪ್ಪ ಮುಂಡಾಸ ಕ್ರೀಡಾಕೂಟಗಳ ನೇತೃತ್ವ ವಹಿಸಿದ್ದರು.

ಯಾದಗಿರಿ, ಶಹಾಪುರ, ಸುರಪುರ, ಹುಣಸಗಿ, ಕೆಂಭಾವಿ, ಗುರುಮಠಕಲ್ ಇತರೆ ಘಟಕಗಳಿಂದ ನೂರಾರು ಜನ ಗೃಹರಕ್ಷಕರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ಗೃಹರಕ್ಷಕದಳ ಜಿಲ್ಲಾ ವ್ಯವಸ್ಥಾಪಕ ಸಚಿನ್ ತಿವಾರಿ, ಶಹಾಪುರ ಘಟಕದ ಪ್ಲಾಟೂನ್ ಕಮಾಂಡರ್ ಮಲ್ಲಪ್ಪ ಕೊಂಬಿನ್, ದೇವಿಂದ್ರಪ್ಪ ನಾಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT