ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಹಕ್ಕುಗಳ ದಿನಾಚರಣೆ

Last Updated 11 ಡಿಸೆಂಬರ್ 2022, 8:00 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಯಾದಗಿರಿ: 1948ರಲ್ಲಿ ಮಾನವ ಹಕ್ಕುಗಳು ಜಾರಿಯಾಗಿದ್ದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇಂದಿಗೆ ಈ ಮಾನವ ಹಕ್ಕುಗಳು ಜಾರಿಯಾಗಿ 74 ವರ್ಷಗಳು ಗತಿಸಿದವು ಎಂದು ಸಮಾಜಶಾಸ್ತ್ರ ಉಪನ್ಯಾಸಕ ಡಾ.ಸುರೇಶಕುಮಾರ ಮಠ ಹೇಳಿದರು.

ನಗರದ ಲಿಂಗೇರಿ ಕೋನಪ್ಪ ಶಿಕ್ಷಣ ಸಂಸ್ಥೆಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಮಾನವ ಹಕ್ಕುಗಳ ಆಚರಣೆಯ ಮುಖ್ಯ ಧ್ಯೇಯ, ಸ್ವಾತಂತ್ರ್ಯ ನ್ಯಾಯ ಮತ್ತು ಸಮಾನತೆಯ ಈ ವರ್ಷದ ಘೋಷಣೆಯಾಗಿದೆ ಎಂದರು.

ರಾಜ್ಯಶಾಸ್ತ್ರ ಉಪನ್ಯಾಸಕ ಲಕ್ಷ್ಮಣ ಮೂಲಿಮನಿ ಮಾತನಾಡಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಸರ್ಕಾರವು ಕೇಂದ್ರ ಮತ್ತು ರಾಜ್ಯದಲ್ಲಿ ಮಾನವ ಹಕ್ಕುಗಳ ರಕ್ಷಣಾ ಆಯೋಗಗಳನ್ನು 1993 ರ 13 ಅಕ್ಟೋಬರ್ ತಿಂಗಳಿನಲ್ಲಿ ಆರಂಭಮಾಡಿದೆ. ಮಾನವ ಹಕ್ಕುಗಳನ್ನು ಪರಿಣಾಮಕಾರಿಯಾಗಿ ರಕ್ಷಣೆ ಮಾಡುವುದು ಈ ಆಯೋಗದ ‍ಪ್ರಮುಖ ಕೆಲಸ ಎಂದರು.

ಸಾಮಾನ್ಯ ಜನರಿಗೆ ಇದರ ಅರಿವು ಮೂಡಿಸಲು ಸರ್ಕಾರ ಮಾನವ ಹಕ್ಕು ರಕ್ಷಣೆಯ ಮೊಬೈಲ್ ಆ್ಯಪ್ ಬಳಕೆ  ಮಾಡಿಕೊಂಡು ಯಾರು ಬೇಕಾದರೂ ದೂರುಗಳನ್ನು ಸಲ್ಲಿಸಬಹುದು ಎನ್ನುವ ಮಾಹಿತಿ ನೀಡಿದರು.

ಬಸವರಾಜ ಜುಗೇರಿ ಮಾತಾನಾಡಿದರು. ಗೀತಾ ಪಾಟೀಲ, ಅಪರ್ಣಾ ಜುಗೇರಿ, ಶಿಲ್ಪಾ, ಕಾವೇರಿ ಚಂದ್ರಾಯಗೌಡ ಇದ್ದರು. ಉಪನ್ಯಾಸಕಿ ಜ್ಯೋತಿ ಕೆ.ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT