ಹುಣಸಗಿ: ತಾಲ್ಲೂಕಿನಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದ್ದು ಮುಂಗಾರು ಕೃಷಿ ಚಟುವಟಿಕೆಗಳು ಭರದಿಂದ ನಡೆಯುತ್ತಿವೆ. ಈ ಸಂದರ್ಭದಲ್ಲಿ ರೈತರಿಗೆ ಸಮಯಕ್ಕೆ ಸರಿಯಾಗಿ ಡೀಸೆಲ್ ಲಭ್ಯವಾಗುವಂತೆ ಮಾಡಬೇಕು ಎಂದು ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲನಗೌಡ ನಗನೂರು ಒತ್ತಾಯಿಸಿದರು.

ಕರ್ನಾಕಟ ರಾಜ್ಯ ರೈತ ಸಂಘ ಹಸಿರು ಸೇನೆಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಹುಣಸಗಿ ತಹಶೀಲ್ದಾರ್ ಕಚೇರಿಯ ಶೀರಸ್ತೇದಾರ್ ರಂಗಪ್ಪ ನಾಯಕ ದೊರಿ ಅವರಿಗೆ ಸಲ್ಲಿಸಿ ಮಾತನಾಡಿದರು.

‘ತಾಲ್ಲೂಕಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ಡೀಸೆಲ್ ಕೊರತೆ ಎದುರಾಗಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ರೈತರು ಹೊಲ ಉಳುಮೆಯನ್ನು ಹೆಚ್ಚಾಗಿ ಟ್ರ್ಯಾಕ್ಟರ್ ಮೂಲಕ ಮಾಡುತ್ತಾರೆ. ಟ್ರ್ಯಾಕ್ಟರ್ಗಳನ್ನು ಬಂಕ್ಗೆ ತಂದು ಡಿಸೇಲ್ ಹಾಕಿಕೊಂಡು ಹೋಗುವ ಬದಲು ಕ್ಯಾನ್ಗಳಲ್ಲಿಯೇ 15 ರಿಂದ 20 ಲೀಟರ್ ಡಿಸೇಲ್ ತೆಗೆದುಕೊಂಡು ಹೋಗಿ ಕೃಷಿ ಕೆಲಸದಲ್ಲಿ ನಿರತರಾಗುತ್ತಾರೆ. ಆದರೆ ಟ್ರ್ಯಾಕ್ಟರ್ ತೆಗೆದುಕೊಂಡು ಬಂದಲ್ಲಿ ಅರ್ಧ ದಿನ ಕೆಲಸ ನಿಲ್ಲುತ್ತದೆ. ಹೀಗಾಗಿ ರೈತರಿಗೆ ಸೂಕ್ತ ಡಿಸೇಲ್ ವ್ಯವಸ್ಥೆ ಕಲ್ಪಿಸಬೇಕು. ಕೆಲ ಬಂಕ್ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡಿಸೇಲ್ ಹಾಕಿಸಿಕೊಂಡರೇ ಆಯಿಲ್ ಪಡೆದುಕೊಳ್ಳುವಂತೆ ನಿಯಮ ಹಾಕುತ್ತಿದ್ದಾರೆ. ಇದರಿಂದಾಗಿ ರೈತರಿಗೆ ನಷ್ಟವಾಗುತ್ತದೆ’ ಎಂದರು.

‘ಮುಂಗಾರು ಬಿತ್ತನೆ ಕಾರ್ಯಕ್ಕೆ ಅಣಿಯಾಗುವಂತಾಗಲು ಬೀಜ, ರಸಗೊಬ್ಬ ಹಾಗೂ ಇತರ ಪರಿಕರಗಳು ಲಭ್ಯವಾಗುವಂತೆ ಮೊದಲೇ ಕೃಷಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಿದ್ರಾಮರಡ್ಡಿ ಬಳವಾಟ, ಸಂತೋಷಕುಮಾರ ತಳವಾರ, ನಾಗರಡ್ಡಿ ಇಸಾಂಪುರ, ಮೈಬೂ ಚೌದ್ರಿ, ಸತೀಶ ರಸ್ತಾಪುರ, ರಸೂಲ ಬೆಣ್ಣಿ, ಸೈಯದ್ ಅಗ್ನಿ, ಮಹಾಂತೇಶ ದೇಸಾಯಿ, ಬಸವರಾಜ ಮೇಟಿ ಸೇರಿದಂತೆ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-30-858215307

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.