ಹುಣಸಗಿ: ತಾಲ್ಲೂಕಿನ ಬಲಶೆಟ್ಟಿಹಾಳ ಗ್ರಾಮದ ಶ್ರೀ ಬಸವಲಿಂಗ ಶಿವಯೋಗಿಗಳ ವಿರಕ್ತ ಮಠದಲ್ಲಿ ಬುಧವಾರ ಸಿದ್ಧಲಿಂಗ ದೇವರ ನಿರಂಜನ ಪಟ್ಟಾಧಿಕಾರ ಮಹೋತ್ಸವದ ಪೂರ್ವಭಾವಿ ಸಭೆ ಹಾಗೂ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು.

ಈ ವೇಳೆ ಮಾತನಾಡಿದ ಮುದನೂರು ಕಂಠಿಮಠದ ಸಿದ್ಧ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ‘ಬಲಶೆಟ್ಟಿಹಾಳ ವಿರಕ್ತ ಮಠದ ಸಿದ್ಧಲಿಂಗ ದೇವರ ಪಟ್ಟಾಧಿಕಾರವನ್ನು ಶ್ರದ್ಧಾ ಭಕ್ತಿಯಿಂದ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲ ಭಕ್ತರ ಮೇಲಿದೆ’ ಎಂದರು.

ಮುಖಂಡ ಚಂದ್ರಶೇಖರಗೌಡ ಮಾಗನೂರು ಮಾತನಾಡಿ, ‘ಸಮಾಜದಲ್ಲಿ ಗುರುವಿನ ಸ್ಥಾನ ಅತ್ಯಂತ ದೊಡ್ಡದಾಗಿದ್ದು, ಅವರು ತೋರಿದ ಸನ್ಮಾರ್ಗದಲ್ಲಿ ನಡೆಯುವುದು ನಮ್ಮ ಕರ್ತವ್ಯ. ಸಂಸಾರದಲ್ಲಿ ಇರುವವರಿಗೆ ಸಂಸ್ಕಾರ ಜೀವನ ಮುಖ್ಯ. ಈ ನಿಟ್ಟಿನಲ್ಲಿ ಗುರುಗಳ ಸೇವೆ ಮಾಡುವುದು ಅತ್ಯಂತ ಶ್ರೇಷ್ಟ ಕಾರ್ಯ’ ಎಂದು ಹೇಳಿದರು.

ಮಠದ ಸಿದ್ದಲಿಂಗ ದೇವರು ಮಾತನಾಡಿ, ‘ಬಸವಲಿಂಗ ಮಠಕ್ಕೆ ಭಕ್ತರೆ ಆಸ್ತಿಯಾಗಿದ್ದು, ಅವರಿಂದಲೆ ಮಠದ ಧಾರ್ಮಿಕ ಕೈಂಕರ್ಯಗಳು ಇಲ್ಲಿಯವರೆಗೂ ನಡೆಸಿಕೊಂಡು ಬರಲಾಗಿದೆ. ಪಟ್ಟಾಧಿಕಾರ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು–ಮನ–ಧನ ಸಹಕಾರ ನೀಡಬೇಕು’ ಎಂದು ಕೋರಿದರು.

‘ಜೂನ್ 16ರಂದು ಯುವ ಹಾಗೂ ರೈತ ಸಮಾವೇಶ, 17ರಂದು ಮಾತೃ ಸಮಾವೇಶ, 18ರಂದು ನಿರಂಜನ ಪಟ್ಟಾಧಿಕಾರ ಕಾರ್ಯಕ್ರಮ ಹಾಗೂ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಜೂ.4 ರಿಂದ 18ರವರೆಗೆ ಪ್ರತಿದಿನ ಸಂಜೆ ಕಡಕೋಳ ಮಡಿವಾಳಪ್ಪನವರ ಪುರಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.

ಗುರಣ್ಣಗೌಡ ಹೊರಗಿನಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರಪುರದ ನಿಷ್ಠೆ ಕಡ್ಲಪ್ಪಮಠದ ಪ್ರಭುಲಿಂಗ ಸ್ವಾಮೀಜಿ, ಯಡ್ರಾಮಿಯ ಸಿದ್ದಲಿಂಗಯ್ಯ ಸ್ವಾಮೀಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ, ಗ್ರಾಮದ ಪ್ರಮುಖರಾದ ತಿಪ್ಪಣ್ಣಗೌಡ ಬಿರಾದಾರ, ಶಿವಕುಮಾರ ಚಿಂಚೋಳಿ, ವೀರಭದ್ರಗೌಡ ಹೊಸಮನಿ, ಸಿದ್ರಾಮಪ್ಪ ಮುದಗಲ್ಲ, ದಾನಪ್ಪ ಅಪ್ಪಾಗೋಳ, ಮುದಿಗೌಡ ಕುಪ್ಪಿ, ಶಿಕ್ಷಕ ಯಂಕನಗೌಡ ಅರಿಕೇರಿ ಹಾಗೂ ಗ್ರಾಮದ ಹಿರಿಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-30-194184933

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.