ಹುಣಸಗಿ: ‘ನಿತ್ಯ ಒತ್ತಡ ಹಾಗೂ ಜಂಜಾಟದ ಬದುಕಿನಲ್ಲಿ ಪುರಾಣ, ಪುಣ್ಯಕಥೆ, ಸತ್ಸಂಗಗಳು ಜೀವನಕ್ಕೆ ಆಧ್ಯಾತ್ಮದ ಜೊತೆಗೆ ನೆಮ್ಮದಿಯನ್ನು ನೀಡುತ್ತವೆ’ ಎಂದು ಪುರಾಣ ಪ್ರವಚನಕಾರ ಕೆಂಭಾವಿಯ ನಾಗರಾಜ ಶಾಸ್ತ್ರಿ ಹೇಳಿದರು.

ಹುಣಸಗಿ ಪಟ್ಟಣದಲ್ಲಿ ಭಾಗ್ಯವಂತಿ ದೇವಿಯ 5ನೇ ವರ್ಷದ ಜಾತ್ರೆಯ ಅಂಗವಾಗಿ 3ನೇ ವರ್ಷದ ಸಜ್ಜಲಗುಡ್ಡದ ಶಿವಶರಣೆ ಶರಣಮ್ಮನವರ ಪುರಾಣ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು.

ಕಾರ್ಯಕ್ರಮವನ್ನು ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್ ಉದ್ಘಾಟಿಸಿದರು. ‘ಏ.23ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ 24ರಂದು ಭಾಗ್ಯವಂತಿ ದೇವಿಯ ಜಾತ್ರಾ ಮಹೋತ್ಸವ ಜರುಗಲಿದೆ’ ಎಂದು ಭಾಗ್ಯವಂತಿ ದೇವಿ ದೇವಸ್ಥಾನದ ಅರ್ಚಕ ಸಂಗಣ್ಣ ಶರಣರು ತಿಳಿಸಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೇಲಪ್ಪ ಗುಳಗಿ ಮಾತನಾಡಿದರು. ದೇವಸ್ಥಾನಕ್ಕೆ ಭೂಮಿ ದಾನ ಮಾಡಿದ ಸಂಗನಬಸ್ಸಪ್ಪ (ಅಪ್ಪಣ್ಣ) ಗೋಗಿ, ಬಸವರಾಜ ಗೋಗಿ, ಗೊಲ್ಲಾಳಪ್ಪ ಗೋಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಉಮಾಪತಿ ಸ್ವಾಮಿ ಹಿರೇಮಠ, ಬಸವರಾಜ ದೇವತಕಲ್ಲ, ಶಾಂತಣ್ಣ ಬಾಕ್ಲಿ, ಆನಂದ ಬಾರಿಗಿಡದ, ಶರಣಗೌಡ ಗೆಣ್ಣೂರ, ವೀರೇಂದ್ರ ಶೆಟ್ಟಿ ಕಾಳಪ್ಪ ವಿಶ್ವಕರ್ಮ, ಬಸವರಾಜ ಮೇಲಿನಮನಿ, ಗುರು ಹುಲಕಲ್ಲ ಇತರರು ಇದ್ದರು.

ವೀರೇಶ ಕುಮಾರ ಕೆಂಭಾವಿ, ಕಾಶಿನಾಥ ಡೋಣೂರ ಸಂಗೀತ ಸೇವೆ ನಡೆಯಿತು. ಬಸವರಾಜ ಯಳಸಂಗಿ ತಬಲಾ ಸೇವೆ ಸಲ್ಲಿಸಿದರು. ಶರಣಮ್ಮನವರ ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಶಶಿಕಲಾ ಚಂದನಕೇರಿ, ಸುನಂದಾ ಟೀಚರ, ಬೋರಮ್ಮ ಯಡಿಯೂರಮಠ, ರೇವತಿ ಡೋಣುರ, ಬಸಮ್ಮ, ಮಲ್ಲಮ್ಮ ಗೆಜ್ಜಿ, ರೇಣುಕಾ ಭಜಂತ್ರಿ, ನೀಲಮ್ಮ ಭಜಂತ್ರಿ, ಶಾರದಾ, ಸವಿತಾ, ಈರಮ್ಮ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-30-1164868554

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.