ಹುಣಸಗಿ: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಪೂರ್ವ ಮುಂಗಾರು ಮಳೆಯಾಗಿದ್ದು, ಮಳೆಯಾಶ್ರಿತ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ಸಿದ್ಧತೆ ಗರಿಗೆದರಿದೆ.

ತಾಲ್ಲೂಕಿನ ಕೊಡೇಕಲ್ಲ, ರಾಜನಕೋಳೂರು, ಬಪ್ಪರಗಿ, ಹೊರಟ್ಟಿ, ಗುಂಡಲಗೇರಾ, ಶ್ರೀನಿವಾಸಪುರ, ಕೋಳಿಹಾಳ, ಮಾಳನೂರು, ಮಾರಲ ಬಾವಿ ಸೇರಿದಂತೆ ಇತರ ಗ್ರಾಮಗಳಲ್ಲಿ ರೈತರು ಜಮೀನು ಹದಗೊಳಿಸಿದ್ದು, ಹತ್ತಿ ಬಿತ್ತನೆಗೆ ವಿಶೇಷ ಆಸಕ್ತಿ ವಹಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಕೊಡೇಕಲ್ಲ, ರಾಜನಕೋಳೂರು ಭಾಗದಲ್ಲಿ ಮಳೆಯಾಗಿದ್ದು ಭೂಮಿ ಹಸಿಯಾಗಿದೆ. ಮುಂಗಾರು ಆರಂಭಕ್ಕೂ ಮುನ್ನವೇ ವರುಣ ಕೃಪೆ ತೋರಿದ್ದಾನೆ. ಕೃಷಿ ಇಲಾಖೆಯೂ ರೈತರಿಗೆ ಬಿತ್ತನೆ ಬೀಜ ವಿತರಿಸಲು ಮುಂದಾಗಿದೆ.

ಹುಣಸಗಿ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಅಂದಾಜು 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. 21 ಸಾವಿರ ಹೆಕ್ಟೇರ್ ನೀರಾವರಿ ಕ್ಷೇತ್ರ, 4,900 ಹೆಕ್ಟೇರ್ ಮಳೆಯಾಶ್ರಿತ ಕೃಷಿ ಭೂಮಿಯಲ್ಲಿ, 6,900 ಹೆಕ್ಟೇರ್ ತೊಗರಿ ಹಾಗೂ ಹತ್ತಿ 7,800 ಹೆಕ್ಟೇರ್ ಹತ್ತಿ ಬಿತ್ತನೆ ಗುರಿ ಹೊಂದಲಾಗಿದೆ.

36 ಕ್ವಿಂಟಲ್ ಟಿಎಸ್–3ಆರ್ ತಳಿ ತೊಗರಿ ಲಭ್ಯವಿದೆ. 12 ಕ್ವಿಂಟಲ್ ಹೆಸರು ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ. ಸುಮಾರು 1,300 ಲೀಟರ್ ಲಘು ಪೋಷಕಾಂಶ ಹಾಗೂ 2,000 ಕೆಜಿ ಸಸ್ಯ ಸಂರಕ್ಷಣಾ ಕೀಟನಾಶಕ, ಎರೆಹುಳು ಗೊಬ್ಬರ ಲಭ್ಯವಿದೆ ಎಂದು ಕೃಷಿ ಅಧಿಕಾರಿ ಸಿದ್ಧಾರ್ಥ ಪಾಟೀಲ ವಿವರಿಸಿದರು.

ಈ ಬಾರಿ ತಾಲ್ಲೂಕಿನಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ರೈತರು ಹತ್ತಿ ಕೃಷಿಗೆ ಆಸಕ್ತಿ ತೋರುತ್ತಿದ್ದಾರೆ. ಕಾರ್ಮಿಕರನ್ನು ಬಳಸಿಕೊಂಡು ಸಾಲಿನಲ್ಲಿ ಬಿತ್ತನೆ (ಊರುವುದು), ಇನ್ನು ಕೆಲ ರೈತರು ದಾರದ ಸಾಲಿನಲ್ಲಿ ಊರುವುದು ಮಾಡುತ್ತಿರುವದಾಗಿ ರೈತರು ಹೇಳಿದರು.

ತಾಲ್ಲೂಕಿನ ಕೊಡೇಕಲ್ಲ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಸುಮಾರು 32,500 ಹೆಕ್ಟೇರ್ ಭೌಗೋಳಿಕ ಕ್ಷೇತ್ರದಲ್ಲಿ, ಅಂದಾಜು 29,000 ಹೆಕ್ಟೇರ್ ಸಾಗುವಳಿ ಕ್ಷೇತ್ರ ಹೊಂದಿದೆ. ಅದರಲ್ಲಿ 12 ಸಾವಿರ ಹೆಕ್ಟೇರ್ ನೀರಾವರಿ, 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಕೃಷಿ ಅಧಿಕಾರಿ ದೀಪಾ ದೊರೆ ಮಾಹಿತಿ ನೀಡಿದರು.

ರಿಯಾಯಿತಿ ದರದಲ್ಲಿ ಸುಮಾರು 45 ಕ್ವಿಂಟಲ್ಗೂ ಅಧಿಕ ಬಿತ್ತನೆ ತೋಗರಿ ಬೀಜ ದಾಸ್ತಾನು ಮಾಡಲಾಗಿದೆ. ಇಗಾಗಲೇ 25 ಕ್ವಿಂಟಲ್ ರೈತರಿಗೆ ವಿತರಿಸಲಾಗಿದೆ. ಅಗತ್ಯವಿದ್ದಲ್ಲಿ ಮತ್ತೆ ಹೆಚ್ಚುವರಿಯಾಗಿ ತರಿಸಿ ವಿತರಿಸಲಾಗುವುದು ಎಂದರು.

ಕಳೆದ ಐದು ದಿನಗಳ ಹಿಂದೆಯೇ ನಮ್ಮ ಗ್ರಾಮದಲ್ಲಿ ಹತ್ತಿ ಬಿತ್ತನೆ ಆರಂಭವಾಗಿದೆ ಎಂದು ರಾಜನಕೋಳೂರು ಗ್ರಾಮದ ರೈತ ರಾಮನಗೌಡ ವಠಾರ ಹಾಗೂ ಮಂಜಲಾಪುರ ಗ್ರಾಮದ ರೈತ ಪರಮಣ್ಣ ನಿಲೋಗಲ್ಲ ಹೇಳಿದರು.

ಮುಂಗಾರು ಹಂಗಾಮಿನ ಬಿತ್ತನೆಗೆ ಕೃಷಿ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ರೈತರಿಗೆ ಬಿತ್ತನೆ ಬೀಜ ಹಾಗೂ ಲಘು ಪೋಷಕಾಂಶಗಳ ವಿತರಣೆ ಆರಂಭಿಸಿದೆ. ಎಲ್ಲ ರೈತರು ಎಫ್ಐಡಿ ಮಾಡಿಸಿಕೊಳ್ಳಬೇಕು
ಸಿದ್ಧಾರ್ಥ ಪಾಟೀಲ, ಕೃಷಿ ಅಧಿಕಾರಿ ಹುಣಸಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.