ಹುಣಸಗಿ: ‘ನಮ್ಮ ಸರ್ಕಾರ ರಾಜ್ಯದ ಜನತೆಗೆ ಹಿತಕಾಪಾಡುತ್ತಿರುವ ಗ್ಯಾರಂಟಿ ಯೋಜನೆಗಳ ಜೊತೆಯಲ್ಲಿಯೇ ಸಾಕಷ್ಟು ಅಭಿವೃದ್ಧಿ ಕೆಲಸ ಕಾಮಗಾರಿಗಳಿಗೆ ಒತ್ತು ನೀಡಲಾಗುತ್ತಿದೆ’ ಎಂದು ಶಾಸಕ ರಾಜಾ ವೇಣುಗೋಪಾಲ ಹೇಳಿದರು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿ 110 ಕೆವಿ ವಿದ್ಯುತ್ ವಿತರಣಾ ಘಟಕಕ್ಕೆ ಭೂಮಿಪೂಜೆ ಸಲ್ಲಿಸಿ ಬಳಿಕ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೊಡೇಕಲ್ಲ ಸುತ್ತಮತ್ತಲಿನ ಹಳ್ಳಿಗಳಲ್ಲಿ ಗುಣಮಟ್ಟದ ವಿದ್ಯುತ್ ಸರಬರಾಜು ಆಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿದ್ದವು. ಈ ಕೆಲಸದಿಂದ ನಾರಾಯಣಪುರ, ಕೊಡೇಕಲ್ಲ, ಗೆದ್ದಲಮರಿ, ರಾಜನಕೋಳೂರ, ಬಲಶೆಟ್ಟಿಹಾಳ ಸೇರಿದಂತೆ 25ಕ್ಕೂ ಹೆಚ್ಚು ಹಳ್ಳಿಗಳು ಹಾಗೂ 10ಕ್ಕೂ ಹೆಚ್ಚು ತಾಂಡಾಗಳಿಗೆ ಅನುಕೂಲವಾಗಲಿದೆ’ ಎಂದರು.

ಅಂದಾಜು ₹33.53 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಈ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಒಂದು ವರ್ಷದಲ್ಲಿ ಪೂರ್ಣಗೋಳಿಸುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚಿಸಿದರು.

‘ಈ ಭಾಗದಲ್ಲಿ ರೈತರು, ಸೇರಿದಂತೆ ಗ್ರಾಮೀಣ ಜನರಿಗೆ ವಿದ್ಯುತ್ ಸಮಸ್ಯೆ ನಿವಾರಣೆಯಾಗಲಿದೆ’ ಎಂದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ₹1 ಕೋಟಿ ವೆಚ್ಚದ ಚರಂಡಿ ಕಾಮಗಾರಿ ಶಂಕುಸ್ಥಾಪನೆ ಹಾಗೂ ನಾಡಕಚೇರಿ ಕಟ್ಟಡವನ್ನು ಉದ್ಘಾಟನೆ ನಡೆಸಿದರು.

ಈ ಸಂದರ್ಭದಲಿ ಕೆಪಿಟಿಸಿಎಲ್ ಎಸ್.ಇ ರಾಮಚಂದ್ರ ಘೋಡ್ಕೆ. ಇಇ ರಾಜೇಶ ಹಿಪ್ಪರಗಿ, ರಾಜಶೇಖರ ಬಿಳವಾರ, ತಹಶೀಲ್ದಾರ್ ಎಂ.ಬಸವರಾಜ, ಎಪಿಎಂಸಿ ಅಧ್ಯಕ್ಷ ರಾಜಾ ಸಂತೋಷನಾಯಕ, ರಾಜಾ ವಿಜಯಕುಮಾರ ನಾಯಕ, ಉಪತಹಶೀಲ್ದಾರ್ ಕಲ್ಲಪ್ಪ ಜಂಜಿನಗಡ್ಡಿ, ಮುಖಂಡರಾದ ವೆಂಕೋಬ ಯಾದವ, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ, ಮಲ್ಲಣ್ಣ ಸಾಹು ಮುಧೋಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್, ಪ್ರಚಾರ ಸಮಿತಿ ಅಧ್ಯಕ್ಷ ಆರ್.ಎಂ.ರೇವಡಿ, ಅಬ್ದುಲ ಗಫೂರ ನಗನೂರಿ, ಸೂಗೂರೇಶ ವಾರದ, ಎ.ಜಿ.ಕುಂಬಾರ, ಗುಂಡಪ್ಪ ಸೊಲ್ಲಾಪುರ, ರವಿ ಮಲಗಲದಿನ್ನಿ, ಗೋಪಾಲ ದೊರೆ, ತಿರುಪತಿ ವಡಗೇರಿ, ಮಲ್ಲಿಕಾರ್ಜುನ ಗುಂಡಗೋಳ, ದಯಾನಂದ, ಎಇಇ ಮಹಮ್ಮದ ರಫೀಕ್, ಕಳಕಪ್ಪ ಇತರ ಅಧಿಕಾರಿಗಳು, ಮುಖಂಡರು ಕಾರ್ಯಕರ್ತರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-30-1782588090

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.