ಹುಣಸಗಿ: ಇಲ್ಲಿನ ವರಹಳ್ಳೇರಾಯ ದೇವಸ್ಥಾನದಲ್ಲಿ ಶುಕ್ರವಾರ ಮಹಿಳಾ ಭಜನಾ ಮಂಡಳಿ ವತಿಯಿಂದ ರಾಮ ನವಮಿ ಉತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ರಾಮದೇವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ ಮಹಿಳೆಯರು ಸಡಗರ ಸಂಭ್ರಮದೊಂದಿಗೆ ತೊಟ್ಟಿಲನ್ನು ತಳಿತು ತೋರಣಗಳಿಂದ ಅಲಂಕರಿಸಿ ಬೆಳಿಗ್ಗೆ ತೊಟ್ಟಿಲೋತ್ಸವ ಮಾಡಿದರು. ಹರಿನಾಮ ಸಂಕಿರ್ತನೆ, ಭಜನೆಯ ಬಳಿಕ ರಾಮಚಂದ್ರನಿಗೆ ಪೂಜೆಯೊಂದಿಗೆ ಆರತಿ ಬೆಳಗಲಾಯಿತು. ದೇವಸ್ಥಾನದ ಬಳಿ ಆಗಮಿಸಿದ ಭಕ್ತರಿಗೆ ಪಾನಕ ಹಾಗೂ ಪ್ರಸಾದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ವೇದವತಿ ಭಜನಾ ಮಂಡಳಿಯ ಭಾಗ್ಯಶ್ರೀ ದೇಶಪಾಂಡೆ, ಮಾಲಾ ಕುಲಕರ್ಣಿ, ಸಂಜನಾ ಕುಲಕರ್ಣಿ ವಜ್ಜಲ, ಲಕ್ಷ್ಮೀ ಜಮದರಖಾನ, ಮಂಜುಳಾ ಜೋಶಿ, ಪದ್ಮಾವತಿ ದೇಶಪಾಂಡೆ, ಮಂಜುಳಾ ಕುಲಕರ್ಣಿ, ಅಂಜನಾ ಕುಲಕರ್ಣಿ, ಸೀತಾಬಾಯಿ ಜೋಶಿ, ರಂಜಿತಾ ಕುಲಕರ್ಣಿ ಸೇರಿದಂತೆ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-30-1699000816

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.