ಹುಣಸಗಿ: ‘ಈ ಕಲಿಯುಗದಲ್ಲಿ ಸತ್ಯನಾರಾಯಣ ದೇವರ ಪೂಜೆಯು ಅತ್ಯಂತ ಉತ್ತಮ ಫಲ ನೀಡುತ್ತದೆ. ಅದರಲ್ಲೂ ಈ ಅಧಿಕ ಮಾಸದಲ್ಲಿ ಸಾಮೂಹಿಕ ಪೂಜೆ ಹಮ್ಮಿಕೊಂಡಿರುವುದು ಶ್ರದ್ಧೆ ಭಕ್ತಿಯ ಸಂಕೇತ’ ಎಂದು ಗಂಗಾಧರ ಜೋಶಿ ಕೊಡೇಕಲ್ಲ ಹೇಳಿದರು.

ಹುಣಸಗಿ ಪಟ್ಟಣದ ಮಧ್ವ ಭವನದಲ್ಲಿ ವರಹಳ್ಳೇರಾಯ ಸೇವಾ ಸಮಿತಿ ಹಾಗೂ ವಿಪ್ರ ಬಾಂಧವರು ಹುಣಸಗಿ ವತಿಯಿಂದ ಹಮ್ಮಿಕೊಂಡಿದ್ದ 33 ಸತ್ಯನಾರಾಯಣ ಪೂಜೆಯ ಬಳಿಕ ಅವರು ಮಾತನಾಡಿದರು.

‘ಅಧಿಕ ಮಾಸವನ್ನು ಪುರುಷೋತ್ತಮ ಮಾಸ ಎಂದು ಸಹ ಕರೆಯಲಾಗುತ್ತಿದ್ದು, ಈ ಮಾಸದಲ್ಲಿ ದೇವರ ಪೂಜೆ, ಭಜನೆ, ಹರಿನಾಮ ಸ್ಮರಣೆಯಿಂದ ಮನಸ್ಸು ಶುದ್ಧಿಯ ಜೊತೆಗೆ ಅಧಿಕ ಪುಣ್ಯ ಫಲ ಸಿಗುತ್ತದೆ’ ಎಂದು ಹೇಳಿದರು.

ವಿಜಯಾಚಾರ್ಯ ಜೋಶಿ ಮಾತನಾಡಿ, ‘ಹುಣಸಗಿ ಪಟ್ಟಣದಲ್ಲಿ ಅಧಿಕ ಮಾಸದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಮಾಡುವ ಸಂಕಲ್ಪ ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿಯೂ ಕೂಡಾ ಈ ರೀತಿ ಧಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳುವುದರಿಂದಾಗಿ ಪ್ರತಿ ಮನೆಗಳಲ್ಲಿಯೂ ಧಾರ್ಮಿಕ ಜಾಗೃತಿ ಉಂಟಾಗುತ್ತದೆ’ ಎಂದು ಹೇಳಿದರು.

ಬೆಳಿಗ್ಗೆ ವರಹಳ್ಳೇರಾಯ ದೇವರ ಪೂಜೆ ಬಳಿಕ ಸತ್ಯನಾರಾಯಣ ಪೂಜೆ ಹಾಗೂ ದೇವರಿಗೆ ಪಂಚಾಮೃತ ಅಭಿಷೇಕ ಫಲ ನೈವೇದ್ಯ ಸಮರ್ಪಣೆ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪೂಜೆಯ ಬಳಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲ ಭಕ್ತರಿಗೂ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವೆಂಕಟೇಶ ಆಚಾರ್ಯ ಅರಳಿಗಿಡದ, ರಾಮಾಚಾರ್ಯ ಜಹಗೀರದಾರ, ವೆಂಕಟೇಶ ಜೋಶಿ, ಎನ್.ಎಸ್.ಜೋಶಿ, ರವಿಂದ್ರ ಜಮದರಖಾನ, ಚಂದ್ರಕಾಂತ ದೇಶಪಾಂಡೆ, ಪ್ರಾಣೇಶ ಕುಲಕರ್ಣಿ, ವೆಂಕಟೇಶ ದೇಶಪಾಂಡೆ, ಮೋಹನರಾವ ಕುಲಕರ್ಣಿ, ಸತ್ಯನಾರಾಯಣ ಕುಲಕರ್ಣಿ, ಮನೋಹರರಾವ ದ್ಯಾಮನಹಾಳ, ರಾಘವೇಂದ್ರ ದೇಶಪಾಂಡೆ, ಕಲ್ಯಾಣರಾವ ದೇಶಪಾಂಡೆ, ಗಿರೀಶ ಪಾಟೀಲ, ವಾಸು ದ್ಯಾಮನಹಾಳ, ಲಕ್ಷ್ಮಿಕಾಂತ ದ್ಯಾಮನಹಾಳ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-30-864470347

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.