ಹುಣಸಗಿ: ತಾಲ್ಲೂಕಿನಲ್ಲಿ ಗುರುವಾರ ರಾತ್ರಿ ಅಕಾಲಿಕ ಗುಡುಗು ಸಹಿತ ಮಳೆ ಹಾಗೂ ಗಾಳಿಗೆ ಸುಮಾರು 25ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ (ಪತ್ರಾಸ್) ಹಾರಿ ಹಾನಿಗೊಳಗಾಗಿದ್ದರೆ, ಅಲ್ಲಲ್ಲಿ ಮರಗಳು ಧರೆಗುರುಳಿವೆ.

ಹುಣಸಗಿ ಹಾಗೂ ಬಲಶೆಟ್ಟಿಹಾಳ ಗ್ರಾಮದಲ್ಲಿ ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ತಗುಲಿದೆ. ಆದರೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

ಬೊಮ್ಮನಗುಡ್ಡ ಗ್ರಾಮದ ಸದಾನಂದ, ಚಂದ್ರಶೇಖರ ಗದ್ದೆವ್ವ ಎಂಬ ರೈತರ ತೋಟಗಾರಿಕೆ ಬೆಳೆ ಪಪ್ಪಾಯ ಹಾನಿಯಾಗಿವೆ. ಬೈಲಕುಂಟಿ ಗ್ರಾಮದ ಮಲ್ಲಪ್ಪ ಸಾಯಬಣ್ಣ ಅವರ ಚಾವಣಿ ಕಿತ್ತಿದ್ದರಿಂದ ಮನೆಯಲ್ಲಿನ ನಾಲ್ಕು ವರ್ಷದ ಹೆಣ್ಣು ಮಗುವಿಗೆ ತಲೆಗೆ ಪೆಟ್ಟಾಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಕಸ್ತೂರಿಬಾಯಿ ತಮ್ಮಣ್ಣ, ಅಂಬ್ರೇಶ ಜಟ್ಟೆಪ್ಪ ಸೇರಿದಂತೆ ಹಲವರ ಮನೆಗಳ ಮೇಲ್ಛಾವಣಿ ಗಾಳಿಯ ರಭಸಕ್ಕೆ ಕಿತ್ತು ಹೋಗಿವೆ.

ಕಾಮನಟಗಿ, ಬೊಮ್ಮಗುಡ್ಡ, ರಾಯನಪಾಳ, ಬರದೇವನಾಳ, ರಾಜನಕೋಳೂರು ತಾಂಡಾ, ಗ್ರಾಮಗಳಲ್ಲಿ ಮನೆಗಳಿಗೆ ಭಾಗಶಃ ಹಾನಿಗಿವೆ. ಬೊಮ್ಮಗುಡ್ಡದ ರೈತರ ಜಮೀನುಗಳಲ್ಲಿನ ಪಪ್ಪಾಯ ಬೆಳೆಗಳು ನೆಲಕಚ್ಚಿ ಹಾನಿಯಾಗಿವೆ.

‘ಎಲ್ಲ ಗ್ರಾಮ ಆಡಳಿತಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಆ ಬಳಿಕ ಕಂದಾಯ ಇಲಾಖೆಯಿಂದ ಹಾನಿಗೊಳಗಾದ ಮನೆಗಳು ಹಾಗೂ ಬೆಳೆಗಳ ಕುರಿತು ವರದಿ ಸಿದ್ಧಪಡಿಸಿ ಮೇಲಾಧಿಕಾರಿಗಳಿಗೆ ಸಲ್ಲಿಸಲಾಗುತ್ತಿದೆ. ನಿಯಮಾನುಸಾರ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹುಣಸಗಿ ತಹಶೀಲ್ದಾರ್ ಎಂ.ಬಸವರಾಜ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-30-1123008638

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.