ಹುಣಸಗಿ ತಾಲ್ಲೂಕಿನ ಮುದನೂರು ಗ್ರಾಮದ ದೇವರ ದಾಸೀಮಯ್ಯ ದೇವಸ್ಥಾನದ ಮುಂದಿರುವ ಪುಷ್ಕರಣಿಯಲ್ಲಿ ಈಜಾಟದಲ್ಲಿ ತೊಡಗಿರುವ ಯುವಕರು ಮಕ್ಕಳು
ಈಜಿಗೆ ಮೊರೆ ಹೋಗುತ್ತಿರುವ ಜನ
ಬಿಸಿಲಿನಿಂದ ಕಾಪಾಡಿಕೊಳ್ಳುವಂತಾಗಲು ತಾಲ್ಲೂಕಿನ ವಜ್ಜಲ, ಕಲ್ಲದೇವಮಹಳ್ಳಿ, ಬೂದಿಹಾಳ, ಕೊಳೀಹಾಳ, ಕಾಮನಟಗಿ ಮತ್ತು ದೇವರ ದಾಸೀಮಯ್ಯ ಕ್ಷೇತ್ರದ ಮುದನೂರು (ಬಿ), ಮುದನೂರು (ಕೆ) ಸೇರಿದಂತೆ ಇತರ ಗ್ರಾಮಗಳ ಜನತೆ ಈಜಿಗೆ ಮೊರೆ ಹೋಗುತ್ತಿದ್ದಾರೆ. ಯುವಕರು, ಮಕ್ಕಳು ಸೇರಿದಂತೆ ಹೆಚ್ಚಿನ ಜನರು ಮಧ್ಯಾಹ್ನದ ಬಿಸಿಲಿನಿಂದ ರಕ್ಷಿಸಿಕೊಳ್ಳುವ ಸಲುವಾಗಿ ಈಜಾಡಲು ಸಮೀಪದ ಬಾವಿಗಳತ್ತ ತೆರಳುತ್ತಿದ್ದಾರೆ.