ಹುಣಸಗಿ: ತಾಲ್ಲೂಕಿನ ವಜ್ಜಲ ಗ್ರಾಮದ ಶಿವಶರಣ ಪವಾಡಪುರುಷ ತಿಮ್ಮಪ್ಪಯ್ಯ ಮುತ್ಯಾ ಜಾತ್ರಾ ಮಹೋತ್ಸವ ಸೋಮವಾರದಿಂದ ಆರಂಭವಾಗಿದ್ದು, ಐದು ದಿನಗಳವರೆಗೆ ಜಾತ್ರೆ ನಡೆಯಲಿದೆ.

ಭಾನುವಾರ ರಾತ್ರಿ ವಿವಿಧ ಭಜನಾ ಮಂಡಳಿಗಳಿಂದ ಭಜನೆ ಕಾರ್ಯಕ್ರಮ ನಡೆಯಿತು. ಸೋಮವಾರ ಬೆಳಿಗ್ಗೆ ಸುಪ್ರಭಾತ, ಬಳಿಕ ಕಳಸದ ಹಾಗೂ ಬೆಳ್ಳಿಯ ಮೂರ್ತಿಯ ಗಂಗಾಸ್ನಾನ ಹಾಗೂ ತೆಪ್ಪೋತ್ಸವ ನಡೆಯಿತು. ಆನಂತರ ವಿವಿಧ ಭಾಜಾಭಜಂತ್ರಿ ಮೆರವಣಿಗೆಯೊಂದಿಗೆ ಕಳಸವನ್ನು ದೇವಸ್ಥಾನಕ್ಕೆ ತರಲಾಯಿತು. ಅಲ್ಲಿ ಕತೃ ಗದ್ದುಗೆಗೆ ಪಂಚಾಮೃತ ಅಭೀಷೇಕ ನಡೆಯಿತು. ನಂತರ ಬೆಳ್ಳಿಯ ಕವಚ ಮಹಾಪೂಜೆ ನಡೆಯಲಿದೆ.

ಸಂಜೆ 6 ಗಂಟೆಗೆ ಶರಣ ಸಣ್ಣಕೆಪ್ಪ ಮುತ್ಯಾ ಬಂಡೆಪ್ಪನಳ್ಳಿ, ಬಸವರಾಜ ಮುತ್ಯಾ ನಾವದಗಿ ಹಾಗೂ ಯಲ್ಲಣ್ಣ ಮುತ್ಯಾ ಮಾಳನೂರು ಅವರ ಅವರ ನೇತೃತ್ವದಲ್ಲಿ ರಥೋತ್ಸವ ನಡೆಯಿತು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ, ಎಸ್.ಪಿ. ದಯಾನಂದ, ಕರಿಯಪ್ಪ ವಜ್ಜಲ್, ಮುಖಂಡರಾದ ಸಂಗನಗೌಡ ಪೊಲೀಸ್ ಪಾಟೀಲ, ಈಶ್ವರಪ್ಪ ಶ್ರೀಗಿರಿ, ದೊಡ್ಡ ಅಪ್ಪುಗೌಡ ಪಾಟೀಲ, ಮೋಹನರಾವ್ ಕುಲ್ಕರ್ಣಿ ಅಮರೇಶ ಬಸನಗೌಡ್ರ, ಸಂತೋಷ ಹುಂಡೇಕಾರ, ಶಿವಲಿಂಗಪ್ಪ ಭಜನಿ, ಬಸನಗೌಡ ಬಾಗೇವಾಡಿ, ಬಸವರಾಜ ಮೇಟಿ, ಹಣಮಂತ್ರಾಯ ಕನ್ನೇಳ್ಳಿ ಸೇರಿದಂತೆ ಇತರರು ಇದ್ದರು.

ಜಾತ್ರೆಯ ಅಂಗವಾಗಿ ಐದು ದಿನಗಳವರೆಗೆ ದೇವಸ್ಥಾನ ಸಮಿತಿಯಿಂದ ದಾಸೋಹ ವ್ಯವಸ್ಥೆ ಮಾಡಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-30-1541212139

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.