ಹುಣಸಗಿ: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ಬೆಳೆ ಹಾನಿಯಾಗುವ ಆತಂಕ ಎದುರಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇವನೆ (ಚೂನಪ್ಪ ಪೂಜಾರಿ) ಬಣ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗಯ್ಯ ದೇಸಾಯಿಗುರು ಅಸಮಾಧಾನ ವ್ಯಕ್ತ ಪಡಿಸಿದರು.

ಈ ಕುರಿತು ಹುಣಸಗಿ ತಾಲ್ಲೂಕು ರಾಜ್ಯ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತರೊಂದಿಗೆ ಜೇಸ್ಕಾಂ ಉಪವಿಭಾಗ ಕಚೇರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

‘ಸಮರ್ಪಕವಾಗಿ ನೀರು, ವಿದ್ಯುತ್ ಲಭ್ಯವಾದಲ್ಲಿ ಇನ್ನು ಒಂದು ತಿಂಗಳಲ್ಲಿ ರೈತರ ಬೆಳೆದ ಬೆಳೆಗಳು ಕೈ ಸೇರಲಿವೆ. ಅದರೆ ಈ ಹಂತದಲ್ಲಿದ್ದಾಗ ನಿಮಿತವಾಗಿ 7 ತಾಸು 3 ಫೆಸ್ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ಬೆಳಗೆಗಳು ಹಾನಿಯಾಗುವ ಹಂತದಲ್ಲಿವೆ. ಆದ್ದರಿಂದ ಗುಣಮಟ್ಟದದೊಂದಿಗೆ ಸಮಯಕ್ಕೆ ಸರಿಯಾಗಿ ವಿದ್ಯುತ್ ನೀಡಬೇಕು’ ಎಂದು ಆಗ್ರಹಿಸಿದರು.

ತಾಲ್ಲೂಕು ಗೌರವಾಧ್ಯಕ್ಷ ಶಂಕರನಾಯಕ ಜಾಧವ ಮಾತನಾಡಿ, ‘ಗೆದ್ದಲಮರಿ ಗ್ರಾಮ ಪಂಚಾಯಿತಿ ಹಾಗೂ ಬೈಲಕುಂಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗೂ ಏದಲಬಾವಿ, ಸೊನ್ನಾಪುರ, ಸೊನ್ನಾಪುರ ತಾಂಡಾ ಗಳಿಗೆ ಸರಿಯಾಗಿ ವಿದ್ಯುತ್ ಸಿಗುತ್ತಿಲ್ಲ. ಹೀಗಾಗಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ಒಂದು ವೇಳೆ ಅಧಿಕಾರಿಗಳು ಉದಾಸೀನ ಮಾಡಿದರೇ ಹಾಳಾದ ಬೆಳೆಗಳೊಂದಿಗೆ ಜೇಸ್ಕಾಂ ಕಚೇರಿ ಎದುರು ಧರಣಿ ಹಮ್ಮಿಕೊಳ್ಳುಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಅಮರೇಶಗೌಡ ಬಿರಾದಾರ, ದ್ಯಾಮಣ್ಣ ಗುಜ್ಜಲ, ಸುರೇಶ, ಕಾಶಿಂಸಾಬ ಮಾಳನೂರ, ಸೋಮಣ್ಣ ಸಾಲವಾಡಗಿ, ಆನಂದ ಚವ್ವಾಣ, ನಿಂಗು ಬೋವಿ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.