ವಡಗೇರಾ: ‘ಗಾಂಧೀಜಿಯವರ ಗ್ರಾಮಾಭಿವೃದ್ಧಿ ಕನಸು ನನಸು ಮಾಡುವಲ್ಲಿ ಗ್ರಾಮ ಪಂಚಾಯಿತಿ ಪಾತ್ರ ಮುಖ್ಯವಾಗಿದೆ’ ಎಂದು ಗ್ರಾ.ಪಂ ನೂತನ ಅಧ್ಯಕ್ಷ ಸಿದ್ದಪ್ಪ ತಮ್ಮಣ್ಣೋರ ಹೇಳಿದರು.

ವಡಗೇರಾ ಪಟ್ಟಣದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಡಗೇರಾ ಗ್ರಾ.ಪಂಯಲ್ಲಿ ಒಟ್ಟು 27 ಸದಸ್ಯರಿದ್ದಾರೆ. ಎಲ್ಲರೂ ಒಂದೊಂದು ಪಕ್ಷ ಬೆಂಬಲಿತ ಸದಸ್ಯರೇ ಇದ್ದೇವೆ. ಆದರೆ ಇದು ಕೇವಲ ಚುನಾವಣೆ ಸಮಯಕ್ಕೆ ಮಾತ್ರ ಸೀಮಿತವಾಗಿದೆ. ಈಗ ನಾವೆಲ್ಲರೂ ಜೊತೆಗೂಡಿ ಜನರ ಸೇವೆಗೆ ಮುಂದಾಗಬೇಕು. ಆಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.

ತಾ.ಪಂ. ಸಹಾಯಕ ನಿರ್ದೇಶಕ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶರಣಗೌಡ ಬಿ.ಉಳ್ಳೆಸೂಗುರು ಮಾತನಾಡಿ,‘ಈ ಹಿಂದೆ ಇದ್ದ ಅಧ್ಯಕ್ಷರು ರಾಜೀನಾಮೆ ನೀಡಿದ ಕಾರಣ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ’ ಎಂದು ಹೇಳಿದರು.
ಮುಖಂಡರಾದಬಸವರಾಜಸೊನ್ನದ,ಮರಿಯಪ್ಪನಾಟೆಕಾರಮಾತನಾಡಿದರು.

ನಂತರ ಸದಸ್ಯರು, ಸಿಬ್ಬಂದಿ ಹಾಗೂ ಗ್ರಾಮಸ್ಥರು ನೂತನ ಅಧ್ಯಕ್ಷರನ್ನು ಸನ್ಮಾನಿಸಿದರು. ಅಧ್ಯಕ್ಷರು ಎಲ್ಲಾ ಸದಸ್ಯರು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಿದರು.

ಗ್ರಾ.ಪಂ. ಮಾಜಿ ಅಧ್ಯಕ್ಷ ಅಶೋಕ ಸಾಹು ಕರಣಿಗಿ, ಮಾಜಿ ಉಪಾಧ್ಯಕ್ಷೆ ರಂಗಮ್ಮ ಹುಲಿ, ಸದಸ್ಯರಾದ ನಾಗಪ್ಪ ನಸಲವಾಯಿ, ಸಿದ್ರಾಮರೆಡ್ಡಿ ಕೊನಹಳ್ಳಿ, ನಾಗಪ್ಪ ಬಸವಂತಪುರ, ಲಕ್ಷ್ಮಣ ನಾಯಕ, ರಾಜು ಬಸವನಗರ, ಶರಣು ಕುರಿ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ ಕಾಡಂನೋರ, ಯಂಕಣ್ಣ ಬಸವಂತಪುರ, ಮಹ್ಮದ್ ಖುರೇಷಿ, ಗೌರಿಶಂಕರ ಹಿರೇಮಠ, ಸುದರ್ಶನ ನೀಲಹಳ್ಳಿ, ದೇವು ಬುಸೇನಿ, ನಾಗಪ್ಪ ಭೀರನಕಲ್, ರಾಜು ಕಂಠಿ ತಾಂಡಾ, ಸಿದ್ದು ಮುನ್ಮುಟಗಿ, ರಫಿ ನಾಯ್ಕೋಡಿ, ದೇವು ರಾಖಾ, ಶಿವಪ್ಪ ಡುರ್ರೆ, ಹೊನ್ನಪ್ಪ ಕೋನಹಳ್ಳಿ, ರಡ್ಡಿ ಭೀರನಕಲ್ ತಾಂಡಾ, ಭೀಮಣ್ಣ ಚಿನ್ನಿ, ಬಸ್ಸುಗೌಡ ತೆಗ್ಗಿನಮನಿ, ಗಂಗು ವಿಶ್ವಕರ್ಮ, ಸಾಬಯ್ಯ ಗುತ್ತೇದಾರ, ಸಂತೋಷ ಬೊಜ್ಜಿ, ತಿಮ್ಮಣ್ಣ ಕಡೇಚೂರ, ಹೊನ್ನಪ್ಪ ಕಲ್ಲಪ್ಪನೋರ, ಸಾಬಣ್ಣ ಗ್ಯಾರೇಜ್, ಖೇಮಣ್ಣ ಕೆ.ತಾಂಡಾ, ಗಣೇಶ ನಸಲವಾಯಿ, ಯಲ್ಲಪ್ಪ ತಮ್ಮಣ್ಣೋರ, ಗ್ರಾ.ಪಂ ಕಾರ್ಯದರ್ಶಿ ದೇವಿಂದ್ರಪ್ಪ, ಲೆಕ್ಕ ಪರಿಶೋಧಕ ಮರಿಲಿಂಗಪ್ಪ ಮಾಲಹಳ್ಳಿ, ಬಿಲ್ ಕಲೆಕ್ಟರ್ ಅಜ್ಮೀರ್ಬಾಷಾ ನೂರಬಾಯಿ, ನಾಗಪ್ಪ ಹಡಪದ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.