ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿಯ ಅಂಬೇಡ್ಕರ್ ನಗರದ ರಸ್ತೆ ವಿಸ್ತರಣೆ ಕಾರ್ಯಕ್ಕೆ ಚಾಲನೆ

ಅಂಬೇಡ್ಕರ್ ನಗರದ ರಸ್ತೆ ಬದಿಯ 150 ಮನೆಗಳ ಗುರುತು
Last Updated 19 ಫೆಬ್ರುವರಿ 2021, 2:56 IST
ಅಕ್ಷರ ಗಾತ್ರ

ಯಾದಗಿರಿ: ‘ನಗರದ ಅಂಬೇಡ್ಕರ್ ನಗರದ ರಸ್ತೆ ವಿಸ್ತರಣೆಗೆ ಗುರುವಾರ ಚಾಲನೆ ನೀಡಲಾಗಿದೆ. ಇದಕ್ಕೆ ವಿರೋಧ ಮಾಡಿದರಿಗೂ ಸೂಕ್ತ ತಿಳಿವಳಿಕೆ ನೀಡಲಾಗಿದೆ’ ಎಂದು ನಗರಸಭೆ ಪ್ರಭಾರಿ ಪೌರಾಯುಕ್ತ ಬಕ್ಕಪ್ಪ ಹೊಸಮನಿ ತಿಳಿಸಿದ್ದಾರೆ.

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಸ್ತೆ ವಿಸ್ತರಣೆಗೆ ಸದ್ಯ ಕಾಲಕೂಡಿ ಬಂದಿದೆ. ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ಜೆಸಿಬಿ ಸದ್ದು ಕೇಳಿಬರುತ್ತಿದೆ.

ರಸ್ತೆ ಮೇಲೆ ಅಕ್ರಮ ಮನೆ, ಶೌಚಾಲಯ, ಆವರಣ ಗೋಡೆ ನಿರ್ಮಿಸಿಕೊಂಡಿದ್ದ ನಿವಾಸಿಗಳಿಗೆ ನಗರಸಭೆ ವತಿಯಿಂದ 15 ದಿನಗಳಿಂದೆ ನೋಟಿಸ್‌ ನೀಡಲಾಗಿತ್ತು. ಆಗ ಕೆಲವರು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಿಕೊಂಡಿದ್ದಾರೆ. ಹಾಗೇಯೇ ಬಿಟ್ಟಿದ್ದವರಿಗೆ ನಗರಸಭೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.

ಅಂಬೇಡ್ಕರ್ ಚೌಕ್‌ ಮೈಲಾಪುರ ಅಗಸಿಯ ತನಕ 150 ಮನೆಗಳ ತೆರವು ಕಾರ್ಯಾಚರಣೆ ಆರಂಭವಾಗಿದೆ. ಇದರಲ್ಲಿ 6 ಜೆಸಿಬಿ ಮೂಲಕ ಗುರುವಾರ 30 ಮನೆಗಳ ಕೌಂಪೌಂಡ್‌, ಶೌಚಾಲಯ ತೆರವುಗೊಳಿಸಲಾಗಿದೆ. 60 ಅಡಿ ರಸ್ತೆ ಅಗಲೀಕರಣವಾಗಬೇಕಿತ್ತು. ಆದರೆ, ಸ್ಥಳೀಯರ ಮನವಿಯ ಮೇರೆಗೆ 45 ಅಡಿ ಮಾತ್ರ ತೆರವಿಗೆ ನಗರಸಭೆ ಹೆಜ್ಜೆ ಇಟ್ಟಿದೆ.

ಬೆಳಿಗ್ಗೆಯೇ ಸ್ಥಳಕ್ಕೆ ತೆರಳಿದ ನಗರಸಭೆ ಅಧಿಕಾರಿಗಳು ಪೊಲೀಸರ ಭದ್ರತೆಯೊಂದಿಗೆ ಕಾರ್ಯಾಚರಣೆ ಮಾಡಿದ್ದಾರೆ. ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ನಗರಸಭೆ ಆಯುಕ್ತ ಬಕ್ಕಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT