ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ಶೇ 82.ರಷ್ಟು ಬಿತ್ತನೆ

3.92 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ, 3.22 ಲಕ್ಷ ಬಿತ್ತನೆಯಾದ ಕ್ಷೇತ್ರ
Last Updated 8 ಆಗಸ್ಟ್ 2021, 3:01 IST
ಅಕ್ಷರ ಗಾತ್ರ

ಯಾದಗಿರಿ: 2021-22ನೇ ಸಾಲಿನ ಮುಂಗಾರು ಹಂಗಾಮುನಲ್ಲಿ ಹತ್ತಿ, ಭತ್ತ, ಸಜ್ಜೆ, ತೊಗರಿ, ಹೆಸರು, ಶೇಂಗಾ ಸೇರಿದಂತೆ ಜಿಲ್ಲೆಯಲ್ಲಿ 3,92,799 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಶೇ82.ರಷ್ಟು ಬಿತ್ತನೆಯಾಗಿದೆ.

ಮುಂಗಾರು ಹಂಗಾಮುನಲ್ಲಿ ಹತ್ತಿ 1,56,467 ಹೆಕ್ಟೇರ್, ಭತ್ತ 8,700 ಹೆಕ್ಟೇರ್, ತೊಗರಿ 1,10,890 ಹೆಕ್ಟೇರ್, ಹೆಸರು 22,500 ಹೆಕ್ಟೇರ್, ಸಜ್ಜೆ 10,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು.

ಭತ್ತ 53,288 ಹೆಕ್ಟೇರ್‌, ಸಜ್ಜೆ 4,855 ಹೆಕ್ಟೇರ್‌, ತೊಗರಿ 1,18,369 ಹೆಕ್ಟೇರ್‌, ಹೆಸರು 19,723 ಹೆಕ್ಟೇರ್‌, ಶೇಂಗಾ
628 ಹೆಕ್ಟೇರ್‌, ಹತ್ತಿ 1,24,802 ಹೆಕ್ಟೇರ್‌, ಕಬ್ಬು (ಹೊಸ) 70 ಹೆಕ್ಟೇರ್‌ ಸೇರಿದಂತೆ ಒಟ್ಟಾರೆ 3,2,1735 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಆಗಿದೆ.

ಪ್ರಮುಖ ಬೆಳೆವಾರು ಮಾಹಿತಿ: ಶಹಾಪುರ ತಾಲ್ಲೂಕಿನಲ್ಲಿ 35,672 ನೀರಾವರಿ, 37,673 ಖುಷ್ಕಿ ಜಮೀನನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. 34,484 ನೀರಾವರಿ, 36,917 ಖುಷ್ಕಿ ಸೇರಿದಂತೆ 71,401 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

ವಡಗೇರಾ ತಾಲ್ಲೂಕಿನಲ್ಲಿ 24, 635 ನೀರಾವರಿ, 23,022 ಖುಷ್ಕಿ ಪ್ರದೇಶದಲ್ಲಿ ಬಿತ್ತನೆ ಕ್ಷೇತ್ರವಿದ್ದು, ಇದರಲ್ಲಿ 20,975 ನೀರಾವರಿ, 24,335 ಖುಷ್ಕಿ ಜಮೀನು ಸೇರಿದಂತೆ 45,310 ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಸುರಪುರ ತಾಲ್ಲೂಕಿನಲ್ಲಿ 50, 660 ನೀರಾವರಿ, 37, 655 ಖುಷ್ಕಿ ಸೇರಿದಂತೆ 88, 315 ಬಿತ್ತನೆ ಕ್ಷೇತ್ರವಾಗಿತ್ತು. ನೀರಾವರಿ, ಖುಷ್ಕಿ ಭೂಮಿ ಸೇರಿದಂತೆ 57,527 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

ಹುಣಸಗಿ ತಾಲ್ಲೂಕಿನಲ್ಲಿ 58, 789 ಬಿತ್ತನೆ ಗುರಿ ಇತ್ತು. 43, 506 ಬಿತ್ತನೆಯಾಗಿದೆ.

ಯಾದಗಿರಿ ತಾಲ್ಲೂಕಿನಲ್ಲಿ ನೀರಾವರಿ 16,106, 54, 546 ಖುಷ್ಕಿ ಸೇರಿದಂತೆ 70,652 ಜಮೀನಿನಲ್ಲಿ ಬಿತ್ತನೆ ಗುರಿ ಇತ್ತು. 8,162 ನೀರಾವರಿ, 50, 527 ಖುಷ್ಕಿ ಜಮೀನು ಸೇರಿದಂತೆ 58, 689 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಗುರುಮಠಕಲ್‌ ತಾಲ್ಲೂಕಿನಲ್ಲಿ 12, 595 ನೀರಾವರಿ, 41, 446 ಖುಷ್ಕಿ ಸೇರಿದಂತೆ 54,041 ಬಿತ್ತನೆಯ ಗುರಿ ಹೊಂದಲಾಗಿತ್ತು. 4,212 ನೀರಾವರಿ, 41,747 ಖುಷ್ಕಿ ಭೂಮಿ ಸೇರಿ ಒಟ್ಟಾರೆ 45, 959 ಬಿತ್ತನೆಯಾಗಿದೆ.

ಕಳೆದ ಎರಡು ವರ್ಷಗಳಲ್ಲಿ ಮುಂಗಾರು ಹಂಗಾಮುನಲ್ಲಿ ಮಳೆ ಕೊರತೆ ಆಗಿಲ್ಲ. ಇದರಿಂದ ಬಿತ್ತನೆಗೆ ಅಡ್ಡಿಯಾಗಿಲ್ಲ. ಅಲ್ಲದೇ ಈಗ ಹೆಸರು ಬೆಳೆ ಕೆಲಕಡೆಕಟಾವಿಗೆ ಬಂದಿದೆ.ಕಳೆದ ಸಾಲಿನಲ್ಲಿ ಯೂರಿಯಾ ರಸಗೊಬ್ಬರದ ಅಭಾವ ಸೃಷ್ಟಿಯಾಗಿ, ಬಿತ್ತನೆಗೆ ತೊಂದರೆಯಾಗಿತ್ತು. ಈ ಬಾರಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರಿಂದ ಹೆಚ್ಚಿನ ಸಮಸ್ಯೆ ಕಂಡುಬಂದಿಲ್ಲ.

ನದಿಯಂಚಿನ ಗ್ರಾಮಗಳಲ್ಲಿ ಮಾತ್ರ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ. ಬಿತ್ತನೆಯಾಗಿದ್ದ ಹತ್ತಿ, ಭತ್ತದ ಬೆಳೆಗಳಿಗೆ ಹಾನಿಯಾಗಿದೆ. ಇದು ರೈತರಿಗೆ ಆರ್ಥಿಕ ಹೊರೆಯಾಗಿದೆ. ಉಳಿದಂತೆ ಕಾಲುವೆ ಜಾಲದಲ್ಲಿ ಭತ್ತ ನಾಟಿಮಾಡುತ್ತಿದ್ದಾರೆ.

****

ಬಿತ್ತನೆಯಾದ ಬೆಳೆ ವಿವರ
ತಾಲ್ಲೂಕು; ಶೇಕಡವಾರು

ಶಹಾಪುರ; 97.35
ವಡಗೇರಾ; 95.08
ಸುರಪುರ; 65.14
ಹುಣಸಗಿ; 74.00
ಯಾದಗಿರಿ; 83.07
ಗುರುಮಠಕಲ್‌; 85.04
ಒಟ್ಟು; 82.08
ಆಧಾರ: ಕೃಷಿ ಇಲಾಖೆ

***

ನಾಲ್ಕು ಎಕರೆಯಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ. ಈಗ ಕಳೆ ಬೆಳೆದಿದ್ದು, ಇದನ್ನು ಹಸನು ಮಾಡಲಾಗುತ್ತಿದೆ. ಮತ್ತೆ ಉತ್ತಮ ಮಳೆಯಾದರೆ ಬೆಳೆಗಳಿಗೆ ಜೀವಕಳೆ ಬರಲಿದೆ.
-ನಾಗಮ್ಮ ಮಗ್ಗನವರ್, ರೈತ ಮಹಿಳೆ

***

ಜಿಲ್ಲೆಯಲ್ಲಿ ಸಕಾಲದಲ್ಲಿ ಬಿತ್ತನೆಯಾಗಿದೆ. ಬೀಜ, ರಸಗೊಬ್ಬರ ಕೊರತೆಯಿಲ್ಲ. ಮುಂಗಾರು ಹಂಗಾಮು ಆಶಾದಾಯಕ ಆಗಿದೆ. ಡಿಎಪಿ, ಯೂರಿಯಾ ಬರುತ್ತಿದೆ.
-ಎಸ್‌.ಎಸ್‌.ಅಭೀದ್‌, ಜಂಟಿ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT