ಸೋಮವಾರ, ಜೂನ್ 21, 2021
21 °C
ಸ್ವಾತಂತ್ರ್ಯಕ್ಕೆ ಹೋರಾಡಿದ ಮಹನೀಯರ ಸ್ಮರಣೆ, ಗಣ್ಯರಿಂದ ಧ್ವಜಾರೋಹಣ

ವಿವಿಧೆಡೆ ಸ್ವಾತಂತ್ರ್ಯ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ವಿವಿಧ ಕಡೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಸ್ವಾತಂತ್ರ್ಯ ಸಾವಿರಾರು ಮಹನೀಯರ ತ್ಯಾಗ, ಬಲಿದಾನದಿಂದ ಬಂದಿದೆ ಎಂದು ಗಣ್ಯರು ಸ್ಮರಿಸಿದರು. ವಿವಿಧ ಸಂಘ–ಸಂಸ್ಥೆಗಳಲ್ಲಿ ಧ್ವಜಾರೋಹಣ ನೆರವೇರಿಸಿದರು. 

ಜಿಲ್ಲಾ ಬಿಜೆಪಿ ಕಾರ್ಯಾಲಯ: ಬಿಜೆಪಿ ಜಿಲ್ಲಾ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕೆ ಅನೇಕರು ಮಹಾತ್ಮರು ಬ್ರಿಟಿಷ್ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. 200 ವರ್ಷಗಳ ಸತತ ಹೋರಾಟದ ಫಲವಾಗಿ ದೇಶ ಸ್ವಾತಂತ್ರವಾಗಿದೆ ಎಂದು ಹೇಳಿದರು.

ಈ ವೇಳೆ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ಮಾಜಿ ಶಾಸಕ ಡಾ. ವೀರಬಸವಂತರೆಡ್ಡಿ ಮುದ್ನಾಳ, ಖಂಡಪ್ಪ ದಾಸನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದೇವೇಂದ್ರನಾಥ್ ನಾದ, ವೆಂಕಟರೆಡ್ಡಿ ಅಬ್ಬೆತುಮಕೂರು, ಗುರು ಕಾಮಾ, ನಗರಸಭೆ ಸದಸ್ಯರಾದ ಸುರೇಶ ಅಂಬಿಗೇರ, ಮಾರುತಿ ಕಲಾಲ್, ಕೃಷ್ಣ ನಾಯಕ ಇದ್ದರು.

ಜಿಲ್ಲಾ ಕಸಾಪ ಕಚೇರಿ: ನಗರದ ಹಿಂದಿ ಪ್ರಚಾರ ಸಭಾ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸ್ವಾತಂತ್ರ್ಯ ದಿನ ಸರಳವಾಗಿ ಆಚರಿಸಲಾಯಿತು.

ಸಾಹಿತಿ ಅಯ್ಯಣ್ಣ ಹುಂಡೇಕಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಗಾಂಧೀಜಿ ಭಾವಚಿತ್ರಕ್ಕೆ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಸಿದ್ದಪ್ಪ ಹೊಟ್ಟಿ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಡಾ.ಎಸ್.ಎಸ್.ನಾಯಕ, ನಾಗಪ್ಪ ಸಜ್ಜನ್, ಬಸವಂತ್ರಾಯಗೌಡ ಮಾಲಿಪಾಟೀಲ, ವೀರಭದ್ರಯ್ಯ ಸ್ವಾಮಿ ಜಾಕಾಮಠ, ರಾಜು, ನಾಗೇಂದ್ರ ಜಾಜಿ, ಬಾಲರಾಜ ನಕ್ಕಲ್, ಸಂಗಣ್ಣ ಹೋತಪೇಟೆ, ಅನಿಲ್ ಗುರೂಜಿ, ಮಲ್ಲಪ್ಪ ಹಳಕಟ್ಟಿ, ಅಬ್ದುಲ್ ಸಲೀಂ ಸಾಬ ಐಕೂರು ಇದ್ದರು.

ವೀರ ನಿಕೇತನ: ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಡಾ.ಸಿದ್ದಪ್ಪ ಹೊಟ್ಟಿ, ರಾಚಣ್ಣಗೌಡ ಮುದ್ನಾಳ, ನಾಗಪ್ಪ ಬೆನಕಲ್, ಗುಂಡೇರಾವ್ ಪಂಚಾಹತ್ರಿ, ನೀಲಕಂಠ ಶೀಲವಂತ, ಸುಭಾಷ ಮಾಳಿಕೇರಿ, ಬಲವಂತ ದಾಸನಕೇರಿ, ಮೋಹನ ಬಾಬು, ಅನೀಲ್ ಗುರೂಜಿ, ಸೈಯದ್ ಗೌಸ್ ಚೌದ್ರಿ, ಅನಿಲ್ ಕರಾಟೆ, ಇದ್ದರು.

ಸರ್ಕಾರಿ ಪ್ರೌಢಶಾಲೆ (ಅರಕೇರಾ ಕೆ.): ಮುಖ್ಯಶಿಕ್ಷಕಿ ನಿವೇದಿತಾ ಪಟ್ಟೇದಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಭೋಜಣ್ಣಗೌಡ, ಶಿಕ್ಷಕರಾದ ಮುರಳಿ, ವೆಂಕಟಪ್ಪ, ಶೈಲಜಾ, ಕವಿತಾ, ಸಾವಿತ್ರಿ ಇದ್ದರು.

ಜನತಾ ಟ್ರಸ್ಟ್ ಜಿಲ್ಲಾ ಘಟಕ: ಜನತಾ ಟ್ರಸ್ಟ್ ವತಿಯಿಂದ ನಗರದ ಕುಷ್ಟರೋಗಿಗಳ ಜೀವನಜ್ಯೋತಿ ಕಾಲೊನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಸ್ಟ್ ಜಿಲ್ಲಾ ಸಂಚಾಲಕ ಹನುಮಂತ್ರಾಯಗೌಡ ಮಾಲಿಪಾಟೀಲ ಧ್ವಜಾರೋಹಣ  ನೆರವೇರಿಸಿದರು. ಗಾಂಧೀಜಿ ಭಾವಚಿತ್ರಕ್ಕೆ ಅಭಿಷೇಕ ದಾಸನಕೇರಿ ಪೂಜೆ ಸಲ್ಲಿಸಿದರು. ಯುವ ಬ್ರಿಗೇಡ್ ವಿಭಾಗೀಯ ಸಂಚಾಲಕ ಸಂಗಮೇಶ ಕೆಂಭಾವಿ, ಜಿಲ್ಲಾ ಸಂಪರ್ಕ ಪ್ರಮುಖ ವೆಂಕಟೇಶ ಕಲ್ಬುರ್ಗಿ, ನವ ಗಿರಿನಾಡು ಸಂಸ್ಥೆ ಅಧ್ಯಕ್ಷ ಯೇಸುಮಿತ್ರಾ, ಕುರುಬ ಸಮಾಜದ ಯುವ ಮುಖಂಡ ಹರೀಶ ಕುಮಾರ ಪೂಜಾರಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ಸವಿತಾ ಸಮಾಜ: ನಗರದ ಸವಿತಾ ಸಮಾಜ ಮೈಲಾಪುರ ಅಗಸಿ ಸಮುದಾಯ ಭವನದಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ನಾಗಪ್ಪ ಹತ್ತಿಕುಣಿ, ಮಲ್ಲಣ್ಣ ವಡಿಗೇರಿ, ಈಶಪ್ಪ ಬಸವನಗುಡಿ, ಶ್ರೀನಿವಾಸ ಕಲ್ಮನಿ, ಗೋಪಾಲ ಕಿಲ್ಲೇದ್, ಶಂಕರ ಕಲ್ಮನಿ, ಬಾಬು ಪರಶುರಾಮ, ಸಮಾಜದವರು ಇದ್ದರು.

ಜಯ ಕರ್ನಾಟಕ ಸಂಘಟನೆ: ಗುರುಮಠಕಲ್ ತಾಲ್ಲೂಕು ಜಯ ಕರ್ನಾಟಕ ಸಂಘಟನೆ ವತಿಯಿಂದ ಧ್ವಜಾರೋಹಣ ನೆರವೇರಿಸಲಾಯಿತು. ತಾಲ್ಲೂಕು ಘಟಕದ ಧ್ಯಕ್ಷ ನಾಗೇಶ ಗದ್ದಿಗಿ ನೇತೃತ್ವದಲ್ಲಿ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಜಿಲ್ಲಾಧ್ಯಕ್ಷ ಬಿ.ಎನ್. ವಿಶ್ವನಾಥ್ ನಾಯಕ, ಜಿಲ್ಲಾ ಉಪಾಧ್ಯಕ್ಷ ಶಿವರಾಜ್ ಗುತ್ತೇದಾರ, ಮಾರುತಿ ಮುದ್ನಾಳ, ವಿಶಾಲ, ಯಲ್ಲಪ್ಪ ಭೂತಾ, ಕಾರ್ಯಾಧ್ಯಕ್ಷ ಲಾಲಪ್ಪ ತಲಾರಿ, ಯುವ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ಮೇಧಾ, ನೂತನ ಮಹಿಳಾ ಘಟಕದ ಅಧ್ಯಕ್ಷೆ ಅನುಸೂಯ, ಸುಹಾಸಿನಿ ಇದ್ದರು.

ವನದುರ್ಗಾ ಆರೋಗ್ಯ ಕೇಂದ್ರ: ಶಹಾಪುರ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ವನದುರ್ಗಾದಲ್ಲಿ ಸ್ವಾತಂತ್ರೋತ್ಸವ ಆಚರಿಸಲಾಯಿತು. ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ್ವರಿ ಗುತ್ತೇದಾರ್, ಕಿರಿಯ ಆರೋಗ್ಯ ಸಹಾಯಕ ಮಲ್ಲೇಶ ಕುರುಕುಂದ, ಗೋಪಾಲರಾವ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.