ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಕಾರ್ಯ ಧರ್ಮಗಳ ಸಂದೇಶ: ವಿಜಯಕುಮಾರ ಚಿಂಚನಸೂರು

Last Updated 25 ಜನವರಿ 2022, 4:18 IST
ಅಕ್ಷರ ಗಾತ್ರ

ಶಟ್ಟಿಕೇರಾ(ಸೈದಾಪುರ): ಜಾತಿ, ಮತ, ಧರ್ಮದ ಹೆಸರಲ್ಲಿನ ಅನಿಷ್ಠ ಪದ್ಧತಿಗಳ ಆಚರಣೆಗಳನ್ನು ಬದಿಗಿಟ್ಟು ದೇವನೊಬ್ಬ ನಾಮ ಹಲವು ಎಂಬಂತೆ ಉತ್ತಮ ಕಾರ್ಯಗಳ ಮೂಲಕ ಸರ್ವಧರ್ಮಗಳನ್ನು ಗೌರವಿಸಬೇಕು ಎಂದು ಬಿಜೆಪಿ ಯುವ ಮುಖಂಡ ವಿಜಯಕುಮಾರ ಚಿಂಚನಸೂರು ಹೇಳಿದರು.

ಸಮೀಪದ ಶಟ್ಟಿಕೇರಾ ಗ್ರಾಮದಲ್ಲಿ ಹಜರತ್ ಫೌಸುಲ್ಲಾಜಮ್ ದಸ್ತಗೀರಿ ಸಾಹೇಬ್ ದರ್ಗಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬರು ಪರಸ್ಪರ ಪ್ರೀತಿ ಮತ್ತು ವಿಶ್ವಾಸದಿಂದ ಜೀವನ ನಡೆಸಬೇಕು. ಧರ್ಮಗಳ ನಡುವಿನ ಕಂದಕಗಳ ನಿವಾರಣೆ ಮಾಡಬೇಕು. ಜಾತಿ ಪದ್ಧತಿಯನ್ನು ಮಿರಿ ಧರ್ಮಾತೀತರಾಗಿ ಮಾನವ ಧರ್ಮ ಪಾಲಿಸಿ, ಉತ್ತಮ ನಾಗರಿಕರಾಗಿ ಬಾಳಬೇಕು ಎಂದರು.

ಧರ್ಮದ ಮಾರ್ಗದಲ್ಲಿ ನಡೆಯುವವರಿಗೆ ಜೀವನದಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿ ಇರುತ್ತದೆ. ಸತ್ಕಾರ್ಯಗಳಿಂದ ನಡೆದಾಗ ಜೀವನ ಪೂರ್ಣವಾಗುತ್ತದೆ ಎಂದು ತಿಳಿಸಿದರು.

ದರ್ಗಾವನ್ನು ಸೈಯದ್ ಜಲಾಲುದ್ದೀನ್ ಸಾಹೇಬ್ ಕೊಲಂಪಲ್ಲಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸೈಯದ್ ಮಹಮ್ಮದ್ ಹುಸೇನ್ ಸಾಹೇಬ್ ಗೋಗಿ, ಸೈಯದ್ ರಾಜ ಸಾಹೇಬ್ ರಾಯಚೂರು, ಬಾಬ ಸಾಹೇಬ್ ಗುಲಸರಂ, ಮಲ್ಲಿಕಾರ್ಜುನರೆಡ್ಡಿ ಕೌಳೂರು, ಶರಣಪ್ಪಗೌಡ ಕೌಳೂರು, ಹನುಮೇಗೌಡ ಬೀರನಕಲ್, ಸಿದ್ದಲಿಂಗರೆಡ್ಡಿ ಗೌಡ ಹುಳ್ಳೇಸೂಗೂರು, ಕರವೇ ಜಿಲ್ಲಾಧ್ಯಕ್ಷ ಭೀಮುನಾಯಕ್, ಶರಣಪ್ಪ ದಳಪತಿ, ಗ್ರಾ.ಪಂ ಸದಸ್ಯ ಬನ್ನಪ್ಪ ಕ್ವಾಟಿ, ನರಸಿಂಗಪ್ಪ, ಭೀಮರಾಯ, ಮಹಾದೇವಪ್ಪ, ದಶರಥ, ಭೀಮಣ್ಣ, ಕೋಲಿ ಸಮಾಜದ ಅಧ್ಯಕ್ಷ ಬಸವರಾಜ, ನರಸಪ್ಪ, ಶಂಕರ, ಭೀಮಶಪ್ಪ, ಭೀಮಶಂಕರ ಮತ್ತು ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT