ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: 10 ಸಿಬ್ಬಂದಿ ವಜಾ

Last Updated 23 ಏಪ್ರಿಲ್ 2021, 5:00 IST
ಅಕ್ಷರ ಗಾತ್ರ

ಯಾದಗಿರಿ: ಕಳೆದ 15 ದಿನಗಳಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದರ ಪರಿಣಾಮ ಯಾದಗಿರಿ ವಿಭಾಗಕ್ಕೆ ₹6.50 ಕೋಟಿ ವರಮಾನ ನಷ್ಟವಾಗಿದೆ. ಜೊತೆಗೆ ಕರ್ತವ್ಯಕ್ಕೆ ಗೈರಾದ 10 ಸಿಬ್ಬಂದಿಯನ್ನು ವಜಾ ಮಾಡಲಾಗಿದೆ.

6ನೇ ವೇತನ ಆಯೋಗದ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಏಪ್ರಿಲ್‌ 7ರಿಂದಲೇ ಮುಷ್ಕರ ಆರಂಭಿಸಿದ್ದರು. ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಲ್ಲೇ ಅತಂತ್ಯ ಕಡಿಮೆ ವೇತನ ನೀಡಲಾಗುತ್ತಿದೆ. ಹೆಚ್ಚು ಮಾಡುವಂತೆಯೂ ಆಗ್ರಹಿಸಿದ್ದರು.

ಪ್ರಯಾಣಿಕರ ಪರದಾಟ: ದೀರ್ಘವಾಗಿ 15 ದಿನಗಳ ಕಾಲ ಮುಷ್ಕರ ಹೂಡಿದ್ದರಿಂದ ಪ್ರಯಾಣಿಕರು ಪರದಾಡಿದರು. ದೂರದ ಊರುಗಳಿಗೆ ತೆರಳಲು ಹರಸಹಾಯ ಪಡಬೇಕಾಯಿತು. ಸ್ವಂತ ವಾಹನ ಇದ್ದವರೂ ಹೇಗೂ ಪರರಾದರು. ಆದರೆ, ಸಾರಿಗೆಯನ್ನೇ ಅವಲಂಬಿಸಿದ್ದವರು ಸರ್ಕಾರ, ನೌಕರರಿಗೆ ಹಿಡಿ ಶಾಪ‍ ಹಾಕಿದರು.

ಖಾಸಗಿ ವಾಹನಗಳಿಗೆ ಬೇಡಿಕೆ: ಸಾರಿಗೆ ನೌಕರರ ಮುಷ್ಕರದಿಂದ ಖಾಸಗಿ ವಾಹನಗಳಿಗೆ ತುಂಬಾ ಬೇಡಿಕೆ ಬಂದಿತು. ಖುದ್ದು ಸಾರಿಗೆ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳೇ ಮುಂದೆ ನಿಂತು ಬಸ್ ನಿಲ್ದಾಣದಲ್ಲೇ ಖಾಸಗಿ ವಾಹನಗಳ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟಿದ್ದರು. ಆದರೆ, ಅಧಿಕಾರಿಗಳ ಆದೇಶ ಮೀರಿ ದುಪ್ಪಟ್ಟು ಹಣ ಪಡೆದು ಪ್ರಯಾಣಿಕರನ್ನು ಕರೆದೊಯ್ದರು. ಖಾಸಗಿಯವರಿಗೆ ಹೆಚ್ಚು ಲಾಭವಾಗಿದ್ದಂತೂ ಸುಳ್ಳಲ್ಲ.

10 ಜನ ವಜಾ: ಸಾರಿಗೆ ಮುಷ್ಕರದ ವೇಳೆ ಕರ್ತವ್ಯಕ್ಕೆ ಗೈರು ಸೇರಿದಂತೆ ಹಳೆ ಪ್ರಕರಣಗಳಲ್ಲಿ ಬಾಕಿ ಇದ್ದ ವರದಿಯನ್ನು ಪರಿಗಣಿಸಿ ಯಾದಗಿರಿ ವಿಭಾಗದಲ್ಲಿ 10 ಜನ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ. 6ಜನ ಚಾಲಕ, ನಿರ್ವಾಹಕ, 4ಜನ ಟ್ರೈನಿ ಸಿಬ್ಬಂದಿಯೂ ಸೇರಿದ್ದಾರೆ. ಇವರಿಗೆ ಸಾರಿಗೆ ಮುಷ್ಕರದಿಂದ ವಜಾ ಶಿಕ್ಷೆ ಸಿಕ್ಕಿದೆ.

‘ಕೋರ್ಟ್‌ ಆದೇಶದಂತೆ ಮುಷ್ಕರ ಮುಂದೂಡಲಾಗಿದೆ. ಆದರೆ, ನೌಕರರಿಗೆ ಲಾಭವಾಗಿಲ್ಲ. ಬದಲಾಗಿ ವರ್ಗಾವಣೆ, ವಜಾ ಸೇರಿದಂತೆ ವಿವಿಧ ಶಿಕ್ಷೆಗೆ ಗುರಿಯಾಗಬೇಕಾಗಿದೆ. ಸರ್ಕಾರಕ್ಕೆ ನ್ಯಾಯಾಲಯ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಆದೇಶಸಬೇಕು. ಆಗ ಮಾತ್ರ ಮುಷ್ಕರಕ್ಕೆ ಅರ್ಥ ಬರುತ್ತದೆ. ಇಲ್ಲದಿದ್ದರೆ ಇಬ್ಬರ ನಡುವೆ ನೌಕರರೆ ಬಲಿ‍‍ಪಶುಗಳಾಗುತ್ತಾರೆ’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ನೌಕರರೊಬ್ಬರು.

ಜಿಲ್ಲೆಯಲ್ಲಿ ಗುರುವಾರ 314 ಬಸ್‌ಗಳ ಕಾರ್ಯಾಚರಣೆ ಮಾಡಿವೆ. ಮುಷ್ಕರದಿಂದ ಬಸ್‌ ಓಡಾಟ ಇಲ್ಲದಿದ್ದರಿಂದ ಕಿ.ಮೀಲೆಕ್ಕದಲ್ಲಿ ನಷ್ಟ ಅಂದಾಜು ಮಾಡುತ್ತೇವೆ ರಮೇಶ ಪಾಟೀಲ, ಎನ್‌ಇಕೆಆರ್‌ಟಿಸಿ ವಿಭಾಗೀಯ ಸಂಚನಾಧಿಕಾರಿ

***

ಬಸ್‌ ಇಲ್ಲದಿದ್ದರಿಂದ ಪ್ರಯಾಣಿಕರು ಖಾಸಗಿ ವಾಹನಗಳನ್ನು ಅವಂಬಿಸಬೇಕಾಗಿತ್ತು. ಬಸ್‌ ಕಾರ್ಯಾಚರಣೆ ಖುಷಿ ತಂದಿದೆ. ಊರಿಗೆ ಮರಳಲು ಅನುಕೂಲವಾಗಿದೆ.
-ತಿಮ್ಮಣ್ಣ ದೊರೆ, ಪ್ರಯಾಣಿಕ

***
ಕೋರ್ಟ್‌ ಆದೇಶದಂತೆ ಬಸ್‌ಗಳ ಕಾರ್ಯಾಚರಣೆ ಮಾಡಲಾಗುತ್ತಿದೆ. ಆದರಂತೆ ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರ ಗಮನಹರಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು
-ಕಡ್ಲಪ್ಪ, ನಿರ್ವಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT