ಶುಕ್ರವಾರ, ಜನವರಿ 24, 2020
20 °C

ಹುಚ್ಚು ನಾಯಿ ಕಡಿತ: 9 ಮಕ್ಕಳಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಶಹಾಪುರ: ಪಟ್ಟಣದ ದಿಗ್ಗಿಬೆಸ್ ಪ್ರದೇಶದ ಬಡಾವಣೆಯಲ್ಲಿ ಬುಧವಾರ ಹುಚ್ಚು ನಾಯಿಯೊಂದು 9 ಮಕ್ಕಳಿಗೆ ಕಡಿದಿದೆ.

ಸಣ್ಣಪುಟ್ಟ ಗಾಯಗೊಂಡ ಮಕ್ಕಳು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಾಯಿಯು ದಿಗ್ಗಿಬೆಸ್‌ನಿಂದ ಮೊಚಿಗಡ್ಡೆ, ಗಂಗಾನಗರ, ಗಾಂಧಿ ಚೌಕ್ ಬಡಾವಣೆಯ ಕಡೆ ಓಡುತ್ತಾ ಸಿಕ್ಕಸಿಕ್ಕವರನ್ನು ಕಚ್ಚಿ ಗಾಯಗೊಳಿಸಿದೆ. ಅದರಲ್ಲಿ ಲೊಕೇಶ (7)  ಮತ್ತು ಅಮಿತ (8) ಅವರಿಗೆ ಹೆಚ್ಚು ಗಾಯ ಆಗಿರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಕಲಬುರ್ಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ನಗರದ ಸರ್ಕಾರಿ ಆಸ್ಪತ್ರೆಯಲ್ಲಿ 9 ಮಕ್ಕಳು ಪಡೆದುಕೊಂಡಿದ್ದಾರೆ ಎಂದು ವೈದ್ಯ ಡಾ.ಚಂದ್ರು ಚವಾಣ್ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು