ಜೈಮಿನಿ ಭಾರತ ಮಹಾಕಾವ್ಯವಾಚಿಸುವ ಕಾಳಪ್ಪ ಪತ್ತಾರ

ಶಹಾಪುರ: ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಕಾಳಪ್ಪ ಪತ್ತಾರ ಅವರು ನಿತ್ಯ ಲಕ್ಷ್ಮೀಶ ಕವಿಯ ಜೈಮಿನಿ ಭಾರತ ಮಹಾಕಾವ್ಯ ವಾಚಿಸುತ್ತಾರೆ. 1954ರಿಂದ ನಿತ್ಯ ಮಹಾಕಾವ್ಯ ವಾಚಿಸು ವುದನ್ನು ಅವರು ರೂಢಿಸಿಕೊಂಡಿದ್ದಾರೆ.
‘ಲಕ್ಷ್ಮೀಶನ ಜನ್ಮಸ್ಥಳ ಸುರಪುರ ತಾಲ್ಲೂಕಿನ ದೇವಪುರದಲ್ಲಿನ ಲಕ್ಷ್ಮಿದೇವಿಯು ಪತ್ತಾರ ಮನೆತನದ ಆರಾಧ್ಯ ದೈವವಾದ್ದರಿಂದ ಪ್ರತಿ ದಿನ ಬೆಳಿಗ್ಗೆ ಜೈಮಿನಿ ಭಾರತ ಮಹಾಕಾವ್ಯದ ವಾಚಿಸುವುದು ಖುಷಿಯ ಸಂಗತಿ. ಈ ವಾಚನದ ನಂತರವಷ್ಟೇ ದೈನಂದಿನ ಚಟುವಟಿಕೆ ಆರಂಭವಾಗುತ್ತದೆ’ ಎಂದು ಕಾಳಪ್ಪ ಪತ್ತಾರ ಹೇಳಿದರು.
‘10ನೇ ತರಗತಿವರೆಗೆ ಮಾತ್ರ ಓದಿರುವ ನಾನು ಹರಿಶ್ಚಂದ್ರಕಾವ್ಯ, ಚೆನ್ನಬಸವ ಪುರಾಣ, ಕಾಳಿದಾಸನ ಶ್ಲೋಕ, ಶಂಕರಚಾಂರ್ಯರ ಸೌಂದರ್ಯ ಲಹರಿ ಶ್ಲೋಕ, ಸೊಮೇಶ್ವರ ಶತಕ, ಭದ್ರಗಿರಿ ಅಚ್ಯುತ ದಾಸವರೇಣ್ಯ ರಚಿಸಿದ ಕೀರ್ತನೆ, ಸರ್ಪಭೂಷಣ ಷಣ್ಮುಖ ಶಿವಯೋಗಿಗಳ ಕೈವಲ್ಯ, ಚನ್ನಬಸವ ಪುರಾಣ ಓದುವೆ. ವಾಚನ ಕಲೆಯನ್ನು ತಂದೆಯವರಿಂದ ಕಲಿತಿರುವೆ’ ಎಂದು ಅವರು ತಿಳಿಸಿದರು.
‘ಹಳೆಗನ್ನಡ ಮಹಾಕಾವ್ಯಗಳ ವಾಚಿಸುವ ಕಲೆಗೆ ಅರ್ಪಿಸಿಕೊಂಡಿರುವ ಅವರು ಸರಳ ಜೀವನ ರೂಢಿಸಿ ಕೊಂಡಿದ್ದಾರೆ. ಪತ್ನಿ ಅಕ್ಕಮಹಾದೇವಿ ಮತ್ತು ಮೂವರು ಮಕ್ಕಳ ಜೊತೆ ಅರ್ಥಪೂರ್ಣ ಕೌಟುಂಬಿಕ ಜೀವನ ನಡೆಸಿದ್ದಾರೆ. 74ರ ಇಳಿವಯಸ್ಸಿನಲ್ಲೂ ಪತ್ತಾರ ಅವರ ಜೀವನೋತ್ಸಾಹ, ಆಸಕ್ತಿ ಮತ್ತು ಕುತೂಹಲ ಬೆರಗು ಮೂಡಿಸುತ್ತದೆ’ ಎಂದು ಸಮಾಜ ಶಾಸ್ತ್ರದ ಉಪನ್ಯಾಸಕ ರಾಘವೇಂದ್ರ ಹಾರಣಗೇರಾ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.