ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: ಬಿಳಿ ಜೋಳ ಬಂಪರ್‌ ಬೆಳೆ ನಿರೀಕ್ಷೆ

Last Updated 29 ಜನವರಿ 2020, 9:29 IST
ಅಕ್ಷರ ಗಾತ್ರ

ಶಹಾಪುರ: ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬಿಳಿಜೋಳ ಬೆಳೆಯು ಉತ್ತಮ ಬೆಳವಣಿಗೆಯಾಗಿದ್ದು, ಬಂಪರ್ ಇಳುವರಿ ಬರುವ ನಿರೀಕ್ಷೆಯಿದೆ.

ಬೆಳೆಯು ಈಗ ಉರಿಭತ್ತದ ಹಂತಕ್ಕೆ ತಲುಪಿದ್ದು, ಇನ್ನು 20 ದಿನಗಳಲ್ಲಿ ಕಟಾವಿಗೆ ಬರಲಿದೆ. ಬೆಳೆಗೆ ತೇವಾಂಶದ ಕೊರತೆ ಕಾಣಿಸಿಕೊಂಡಿಲ್ಲ ಎನ್ನುತ್ತಾರೆ ರೈತ ಶಿವನಾಗಪ್ಪ.

ಉತ್ತರ ಕರ್ನಾಟಕದ ಜನತೆಯ ಪಾಲಿಗೆ ಬಿಳಿಜೋಳದ ರೊಟ್ಟಿ ಅವಶ್ಯಕವಾದ ಆಹಾರವಾಗಿದೆ. ಅಲ್ಲದೆ ಜಾನುವಾರುಗಳಿಗೂ ಮೇವಿನ ಅಗತ್ಯವಿದೆ. ಕಳೆದ ಎರಡು ವರ್ಷ ರೈತರು ತೇವಾಂಶದ ಕೊರತೆಯಿಂದ ತುಸು ನಷ್ಟ ಅನುಭವಿಸಿದ್ದರು.

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಲಭ್ಯತೆ ಇರುವ ಕಡೆ ರೈತರು ಬಿಳಿಜೋಳಕ್ಕೆ ನೀರು ಸಹ ನೀಡಿದ್ದಾರೆ. ಇದು ಉತ್ತಮ ಫಸಲು ಬರಲು ಹೆಚ್ಚು ಅನುಕೂಲವಾಗಿದೆ. ನೀರಾವರಿ ಪ್ರದೇಶದ ವ್ಯಾಪ್ತಿಯಲ್ಲಿ ಹೆಚ್ಚಿನ ರೈತರು ಬೆಳೆ ಪದ್ಧತಿ ಉಲ್ಲಂಘಿಸಿ ಭತ್ತ ನಾಟಿ ಮಾಡಿದ್ದಾರೆ. ಬಿಳಿಜೋಳ ಬಿತ್ತನೆಯ ಕ್ಷೇತ್ರ ತುಂಬಾ ಕಡಿಮೆ ಇದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT