ಶುಕ್ರವಾರ, ಜುಲೈ 1, 2022
23 °C

ಪತ್ರಕರ್ತರು, ವಿತರಕರಿಗೆ ಸೌಲಭ್ಯ ನೀಡಿ: ಬಾಲಪ್ಪ ಎಂ.ಕುಪ್ಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಣಸಗಿ: ಕೊರೊನಾ ಲಾಕ್‌ಡೌನ್ ಕಾರಣ ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಹಾಗೂ ‍ಪತ್ರಿಕಾ ವಿತರಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರ ಪರಿಹಾರ ನೀಡಬೇಕು ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಘಟಕದ ಉಪಾಧ್ಯಕ್ಷ ಬಾಲಪ್ಪ ಎಂ.ಕುಪ್ಪಿ ತಿಳಿಸಿದರು.

ಪಟ್ಟಣದಲ್ಲಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪತ್ರಕರ್ತರನ್ನು ಕೊರೊನಾ ಮುಂಚೂಣಿ ಕಾರ್ಯಕರ್ತರೆಂದು ಘೋಷಣೆ ಮಾಡಿದೆ. ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಹಾಗೂ ವಿತರಕರಿಗೆ ಕೋವಿಡ್ ಸಂಕಷ್ಟ ಮುಗಿಯುವರೆಗೂ ₹10 ಸಾವಿರ ಪರಿಹಾರ ನೀಡಬೇಕು. ವಾರ್ತಾ ಇಲಾಖೆಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ತಾಲ್ಲೂಕು ಹಾಗೂ ಗ್ರಾಮೀಣ ಮಟ್ಟದ ಪತ್ರಕರ್ತರಿಗೂ ನೀಡಬೇಕು ಎಂದು ಒತ್ತಾಯಿಸಿದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಾಪುಗೌಡ ಮೇಟಿ ಮಾತನಾಡಿದರು.

ಪತ್ರಕರ್ತರಾದ ಬಸವರಾಜ ಎಂ ಕಟ್ಟಿಮನಿ, ವಿಶ್ವನಾಥ ಮಾರನಾಳ, ಪ್ರಸಾದ ತೋಳದಿನ್ನಿಮಠ, ಬಸವರಾಜ ಮರೋಳ, ಭೀಮನಗೌಡ ಬಿರಾದಾರ ಅಗ್ನಿ, ಲಕ್ಷ್ಮೀಕಾಂತ ಕುಲಕರ್ಣಿ ಮತ್ತು ಪ್ರಮುಖರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು