ಗುರುವಾರ , ಡಿಸೆಂಬರ್ 5, 2019
24 °C
ಶಹಾಪುರ: ವಕೀಲರ ದಿನಾಚರಣೆ

‘ನಾಗರಿಕರಿಗೆ ಸೂಕ್ತ ನ್ಯಾಯ ಕೊಡಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ಯುವ ವಕೀಲರು ಸದಾ ಅಧ್ಯಯನಶೀಲರಾಗಬೇಕು.  ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ಸಲಹೆ ಪಡೆದು  ಕಲಾಪದಲ್ಲಿ ಭಾಗವಹಿಸಿ ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರಾದ ಭಾಮಿನಿ  ಅಭಿಪ್ರಾಯ ವ್ಯಕ್ತ ಪಡಿಸಿದರು. 

ಇಲ್ಲಿನ ವಕೀಲರ ಸಂಘದಲ್ಲಿ ಮಂಗಳವಾರ ವಕೀಲರ ದಿನಾಚಣೆ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

ವಕೀಲರಾಗುವರು ಅಧ್ಯಯನಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಕಾನೂನು ಜ್ಞಾನದ ವಿಷಯಗಳನ್ನು ಸಂಪೂರ್ಣವಾಘಿ ಅರಿಯಬೇಕು ಎಂದು ಸಲಹೆ ನೀಡಿದರು. 

ಪ್ರಧಾನ ಸಿವಿಲ್ ನ್ಯಾಯಾಧೀಶ ಎಚ್.ಆರ್.ಕುಲಕರ್ಣಿ ಮಾತನಾಡಿ, ಯುವ ವಕೀಲರು ಕಲಾಪದಲ್ಲಿ ಭಾಗವಹಿಸುವ ಮುಂಚೆ ಪ್ರಕರಣದ ಬಗ್ಗೆ ಸಂಪೂರ್ಣವಾಗಿ ಪೂರ್ವ ಸಿದ್ದತೆಯನ್ನು ಮಾಡಿಕೊಳ್ಳಬೇಕು.  ವಿದ್ಯಾರ್ಥಿಗಳಂತೆ ಅಭ್ಯಾಸ ಮಾಡುವುದರ ಮೂಲಕ ಕಕ್ಷಿದಾರರಿಗೆ ನ್ಯಾಯ ಕೊಡಿಸಬೇಕು ಎಂದರು.

ಹಿರಿಯ ವಕೀಲರಾದ ಶ್ರೀನಿವಾಸರಾವ ಕುಲಕರ್ಣಿ ಮಾತನಾಡಿ, ಸಾರ್ವಜನಿಕ ಕಚೇರಿಗೆ ತೆರಳಿದಾಗ ಆಯಾ ಇಲಾಖೆಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿದುಕೊಳ್ಳಬೇಕು.ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ  ಪ್ರಯತ್ನಿಸಬೇಕು ಎಂದರು.

ಪ್ರತಿಕ್ರಿಯಿಸಿ (+)