ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಕ್ಕೇರಾ: ಸೋಮನಾಥ ಜಾತ್ರೆ ರದ್ದು

Last Updated 5 ಜನವರಿ 2022, 16:01 IST
ಅಕ್ಷರ ಗಾತ್ರ

ಕಕ್ಕೇರಾ: ಪಟ್ಟಣದ ಸೋಮನಾಥ ದೇವರ ಜಾತ್ರಾ ಮಹೋತ್ಸವ ಕೋವಿಡ್ ಪ್ರಯುಕ್ತ ಸರಳ ಪೂಜಾ-ಕೈಂಕರ್ಯಗಳನ್ನು ಹೊರತುಪಡಿಸಿ ರಥೋತ್ಸವ, ಉಚ್ಛಾಯ ಸೇರಿದಂತೆ ಉಳಿದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬಾರದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಮನವಿ ಮಾಡಿದ್ದಾರೆ.

ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಬುಧವಾರ ಜರುಗಿದ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜ.13ರಿಂದ ನಡೆಯಬೇಕಿದ್ದ ಜಾತ್ರೆಯಲ್ಲಿ ಹೆಚ್ಚು ಜನರು ಸೇರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಾಗೂ ಭಕ್ತರ ಆರೋಗ್ಯ ದೃಷ್ಟಿಯಿಂದ ಕೋವಿಡ್ ಹರಡದಂತೆ ತಡೆಗಟ್ಟಲು, ಜಿಲ್ಲಾಡಳಿತ ನಿರ್ದೇಶನದಂತೆ ಜಾತ್ರೆ ರದ್ದುಗೊಳಿಸಲಾಗಿದೆ. ಸಾರ್ವಜನಿಕರು ತಾಲ್ಲೂಕು ಆಡಳಿತಕ್ಕೆ ಸಹಕರಿಸಬೇಕು ಎಂದರು.

ಮುಖಂಡರಾದ ನಂದಣ್ಣಪ್ಪ ಪೂಜಾರಿ, ಹನುಮಂತರಾಯಗೌಡ ಜಹಾಗೀರದಾರ, ರಾಮಯ್ಯ ಶೆಟ್ಟಿ, ರಾಜು ಹವಾಲ್ದಾರ್, ಪರಮಣ್ಣ ತೇರಿನ್, ಪರಮಣ್ಣ ಗುತ್ತೇದಾರ, ಶರಣಪ್ಪ ಅಕ್ಕಿ, ಶಾಂತಪ್ಪ ತಾಳಿಕೋಟಿ, ಪವಾಡೆಪ್ಪ ಮ್ಯಾಗೇರಿ, ಉಪತಹಶೀಲ್ದಾರ್ ರೇವಪ್ಪ ತೆಗ್ಗಿನಮನಿ, ಪುರಸಭೆ ಮುಖ್ಯಾಧಿಕಾರಿ ಪ್ರವೀಣಕುಮಾರ, ಡಾ.ಸೈಯ್ಯದಾ ಮನಾಜೀಮಾ ಮೋಹಸಿನ್, ಗ್ರಾಮಲೆಕ್ಕಿಗ ಬಸವರಾಜ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT