ಕಕ್ಕೇರಾ: ಕಕ್ಕೇರಾದಿಂದ ಯಾದಗಿರಿಗೆ ನೂತನ ಬಸ್ ಆರಂಭವಾದ ಪ್ರಯುಕ್ತ ಚಾಲಕ, ನಿರ್ವಾಹಕರಿಗೆ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಸನ್ಮಾನಿಸಿದರು.

ನಂತರ ಮುಖಂಡ ಚಂದ್ರು ವಜ್ಜಲ್ ಮಾತನಾಡಿ, ‘ಸುಮಾರು ವರ್ಷಗಳಿಂದ ಪಟ್ಟಣದಿಂದ ಜಿಲ್ಲಾ ಕೇಂದ್ರಕ್ಕೆ ಬಸ್ ಆರಂಭಿಸಲು ಮನವಿ ಮಾಡಲಾಗಿತ್ತು, ಆದರೆ ಪ್ರಸ್ತುತ ಯಾದಗಿರಿ, ಸುರಪುರ ಘಟಕದ ಅಧಿಕಾರಿಗಳು ಆಸಕ್ತಿ ವಹಿಸಿ, ನಮ್ಮ ಸಾಮೂಹಿಕ ಸಂಘಟನೆಗಳ ಮನವಿಗೆ ಸ್ಪಂದಿಸಿ ಬಸ್ ಪ್ರಾರಂಭಿಸಿದ್ದಾರೆ. ಬಸ್ ಪ್ರತಿದಿನ ಎರಡು ಸಲ ಪಟ್ಟಣದಿಂದ ಯಾದಗಿರಿಗೆ ಸಂಚರಿಸಲಿದೆ’ ಎಂದರು.

ದ್ಯಾವಪ್ಪ ಜಂಪಾ ಪೂಜೆ ಸಲ್ಲಿಸಿದರು. ಪ್ರಮುಖರಾದ ಪುರಸಭೆ ಉಪಾಧ್ಯಕ್ಷ ಜಟ್ಟೆಪ್ಪ ದಳಾರ್, ಮುದ್ದಣ್ಣ ಅಮ್ಮಾಪುರ, ಬಂದೇನವಾಜ ಹೋಟೆಲ್, ಸಂಗಣ್ಣ ಸುಬೇದಾರ್, ವೆಂಕಟೇಶ ದೊರೆ, ಮಾನಯ್ಯ ಕಂಬಾರ್, ಮಲ್ಲಣ್ಣ ಭೋಯಿ, ಬಸವರಾಜ ಕಮತಗಿ, ಮಲ್ಲು ಕುಂಬಾರ, ದ್ಯಾವಪ್ಪ ಮ್ಯಾಗೇರಿ, ಶಿವು ಬಡಿಗೇರ್, ಗೋವಿಂದ ಪತ್ತಾರ್, ಹಣಮಂತ, ಅಮರೇಶ ಭೋಯಿ ಸೇರಿದಂತೆ ಅನೇಕರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-30-114708219

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.