ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲೂರು ಮಲ್ಲಪ್ಪ ಜಯಂತೋತ್ಸವ

Last Updated 8 ಡಿಸೆಂಬರ್ 2022, 16:50 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಯಾದಗಿರಿ: ಹೈದರಾಬಾದ್‌ ಕರ್ನಾಟಕದ ಗಾಂಧಿ ಎಂದೇ ಖ್ಯಾತಿ ಹೊಂದಿದ್ದ ಕೂಲೂರು ಮಲ್ಲಪ್ಪ ಎಂದೂ ಅಧಿಕಾರದ ಆಸೆಗಾಗಿ ಕೆಲಸ ಮಾಡಿಲ್ಲ ಎಂದು ಕಾಂಗ್ರೆಸ್ ರಾಜ್ಯ ಯುವ ಘಟಕ ಕಾರ್ಯದರ್ಶಿ ನಿಖಿಲ್ ವಿ.ಶಂಕರ್
ಅಭಿಪ್ರಾಯಿಸಿದರು.

ಕೂಲೂರು ಮಲ್ಲಪ್ಪಾಜಿ ಅಭಿಮಾನಿಗಳ ಬಳಗದ ವತಿಯಿಂದ ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಕೂಲೂರು ಮಲ್ಲಪ್ಪಾಜಿ 117ನೇ ಜಯಂತೋತ್ಸವದಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜಿಸಲ್ಲಿಸಿ
ಮಾತನಾಡಿದರು.

ಮಾಜಿ ಪ್ರಧಾನಿಗಳಾದ ಜವಾಹರಲಾಲ್‌ ನೆಹರೂ, ಇಂದಿರಾಗಾಂಧಿಯವರ ಜೊತೆ ಒಳ್ಳೆಯ ಒಡನಾಟ ವಿದ್ದರೂ ಕೂಡ ಯಾವುದೇ ರೀತಿಯಾದ ಅಧಿಕಾರ ಪಡೆಯದೆ ಸಾಮಾನ್ಯರಂತೆ ಜೀವನ ನಡೆಸಿದರು. ಇವರ ಆದರ್ಶಗಳನ್ನು ಎಲ್ಲರೂ ಪಾಲಿಸೋಣ ಎಂದು ಅವರು ಹೇಳಿದರು.

ಶಿಕ್ಷಣ ಪ್ರೇಮಿ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಿದ್ದಪ್ಪ, ಭೀಮರಾಯ ಮೂಲಿಮನಿ, ಶರಣಪ್ಪ ಬೋಳಾರಿ, ದೇವು ಪೂಜಾರಿ, ಬೀರಲಿಂಗ, ಬಸಲಿಂಗಪ್ಪ ನಾಯಕ, ಶರಣಪ್ಪ ಯಾದಗಿರಿ, ಬಸವರಾಜ ಕಾವಲಿ, ರಂಗಪ್ಪ ಬೋವಿ, ಶಿವಣ್ಣ ಗೌಡ ಕುರುಕುಂದಿ, ಚಂದ್ರಕಾಂತ, ಭೀಮರಾವ್ ನಾಯ್ಕಲ್, ಮರಿಲಿಂಗ ಗೋನಾಲ್, ಕೊಲೂರು ಮಲ್ಲಪ್ಪಾಜಿ ಅಭಿಮಾನಿ ಬಳಗದ ಅಧ್ಯಕ್ಷ ಹಣಮಂತ್ರಾಯಗೌಡ ಮಾಲಿ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT